ಸಾರಾಂಶ
ಮಾನವ ಹಕ್ಕುಗಳ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಹಿರಿಯ ಶ್ರೇಣಿ ನ್ಯಾಯಾಧೀಶೆ ಮಂಜುಳಾ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮುದಗಲ್
ಪ್ರತಿಯೊಬ್ಬ ನಾಗರಿಕನು ಸಹಿತ ಮೂಲಭೂತ ಸೌಲಭ್ಯ ಪಡೆಯುವಲ್ಲಿ ತನ್ನದೇ ಆದ ಹಕ್ಕು ಪಡೆದಿದ್ದಾನೆ. ಆದರೆ ಮೂಲಭೂತ ಸೌಲಭ್ಯ ಪಡೆಯುವಲ್ಲಿ ವಿಳಂಬ, ನಿರ್ಲಕ್ಷವಾದಲ್ಲಿ ಸಾರ್ವಜನಿಕರು ಕಾನೂನು ಸೇವಾ ಸಮಿತಿಯ ನೆರವಿನ ಮೂಲಕ ನ್ಯಾಯಾಲಯದ ಮೊರೆ ಬಂದಲ್ಲಿ ನ್ಯಾಯಾಲಯದ ನಿರ್ದೇಶನ ನೀಡಬಹುದಾಗಿದೆ ಎಂದು ಲಿಂಗಸುಗೂರು ಜೆಎಂಎಫ್‌ಸಿ ಹಿರಿಯ ಶ್ರೇಣಿಯ ನ್ಯಾಯಾಧೀಶೆ ಉಂಡಿ ಮಂಜುಳಾ ಹೇಳಿದರು.ಪಟ್ಟಣದ ಎಸ್‌ವಿಎಂ ಪ್ರೌಢ ಶಾಲೆ, ತಾಲೂಕಾ ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ನ್ಯಾಯಾಂಗ ಇಲಾಖೆ, ಭ್ರಷ್ಠಾಚಾರ ಹಾಗೂ ಮಾನವ ಹಕ್ಕುಗಳ ಆಯೋಗ, ತಾಲೂಕಾ ಕಾನೂನು ಸೇವಾ ಸಮೀತಿ ಮತ್ತು ಪೋಲೀಸ ಇಲಾಖೆ ಜಂಟಿ ಆಶ್ರಯದಲ್ಲಿ ವಿಜಯ ಮಹಾಂತೇಶ ಮಠದಲ್ಲಿ ಗುರುವಾರ ಹಮ್ಮಿಕೊಂಡ ಮಾನವ ಹಕ್ಕುಗಳ ನಿಟ್ಟಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ವಿಜ್ಞಾನ ಸಾಕಷ್ಟು ಮುಂದುವರಿದಿದೆ. ಸಂಚಾರಿ ನಿಯಮದ ಉಲ್ಲಂಘನೆಯಿಂದ ಅಪಘಾತದಿಂದಲೇ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ ವಿನಾ: ರೋಗದಿಂದ ಹೆಚ್ಚುತ್ತಿಲ್ಲ ಎಂದು ಕಳವಳ ವ್ಯಕ್ತಡಪಸಿದರು.
ಈ ವೇಳೆ ಜೆಎಂಎಫ್‌ಸಿ ನ್ಯಾಯಾಧೀಶ ಅಂಬಣ್ಣ.ಕೆ. ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ, ನ್ಯಾಯವಾದಿ ದೇವೇಂದ್ರ ನಾಯಕ, ಮೋಹಿನ್ ಪಟೇಲ, ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷೆ ಶಶಿಕಲಾ, ಮುಖ್ಯ ಗುರು ಬಾಲಚಂದ್ರ ದಾಸರ ಮಾತನಾಡಿದರು.ವೇದಿಕೆ ಮೇಲೆ ಜಿಲ್ಲಾ ಮಾನವ ಹಕ್ಕುಗಳ ಜಿಲ್ಲಾಧ್ಯಕ್ಷ ಸೈ.ತಾರೀದ್, ಸಂಗಯ್ಯ ಗಣಾಚಾರಿ, ತಾಲೂಕಾ ಮಾನವ ಹಕ್ಕೂಗಳ ಅದ್ಯಕ್ಷ ಹುಸೇನ್ ಪಾಷಾ ಇದ್ದರು.