ಕನ್ನಡಪ್ರಭ’ ಸಂಪಾದಕರಾದ ರವಿ ಹೆಗಡೆಗೆ ಅಟಲ್ ಪುರಸ್ಕಾರ : ಮೈಸೂರಿನ ಅಟಲ್‌ಜಿ ಪ್ರತಿಷ್ಠಾನದಿಂದ 28ಕ್ಕೆ ಪ್ರದಾನ

| Published : Dec 26 2024, 08:07 AM IST

Ravi hegade
ಕನ್ನಡಪ್ರಭ’ ಸಂಪಾದಕರಾದ ರವಿ ಹೆಗಡೆಗೆ ಅಟಲ್ ಪುರಸ್ಕಾರ : ಮೈಸೂರಿನ ಅಟಲ್‌ಜಿ ಪ್ರತಿಷ್ಠಾನದಿಂದ 28ಕ್ಕೆ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರನ್ನು ಅಟಲ್ ಬಿಹಾರಿ ವಾಜಪೇಯಿ 9ನೇ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಟಲ್‌ಜಿ ಸಂಸ್ಕಾರ ಭಾರತ್ ಪ್ರತಿಷ್ಠಾನದ ಮಖ್ಯಸ್ಥ ಬಿ.ಆರ್.ನಟರಾಜ್ ಜೋಯಿಸ್ ತಿಳಿಸಿದ್ದಾರೆ.

ಮೈಸೂರು : ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರನ್ನು ಅಟಲ್ ಬಿಹಾರಿ ವಾಜಪೇಯಿ 9ನೇ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಟಲ್‌ಜಿ ಸಂಸ್ಕಾರ ಭಾರತ್ ಪ್ರತಿಷ್ಠಾನದ ಮಖ್ಯಸ್ಥ ಬಿ.ಆರ್.ನಟರಾಜ್ ಜೋಯಿಸ್ ತಿಳಿಸಿದ್ದಾರೆ.

ಸಂಧ್ಯಾ ಸುರಕ್ಷಾ ಟ್ರಸ್ಟ್, ಜಿಲ್ಲಾ ಬ್ರಾಹ್ಮಣ ಮಹಾಸಭಾ, ಶಾಕಂಬರಿ ಧಾರ್ಮಿಕ ಶ್ರದ್ಧಾ ಕೇಂದ್ರ, ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕ ವೇದಿಕೆಯ ಸಹಯೋಗದಲ್ಲಿ ಡಿ.28ರಂದು ಬೆಳಗ್ಗೆ 10.30ಕ್ಕೆ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ವೀಣೆ ಶೇಷಣ್ಣ ಭವನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮೊದಲಾದ ಗಣ್ಯರ ಸಮ್ಮಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಇದೇ ಸಂದರ್ಭದಲ್ಲಿ ಕಾಮಾಕ್ಷಿ ಆಸ್ಪತ್ರೆ ಮುಖ್ಯಸ್ಥ ಮಹೇಶ್ ಶೆಣೈ ಅವರಿಗೆ ಆರ್.ಗುಂಡೂರಾವ್ 9ನೇ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.

ಪ್ರತಿ ವರ್ಷ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಈ ಎರಡೂ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈವರೆಗೆ ತಲಾ ಎಂಟು ಮಂದಿ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದರು.