ಗ್ರಾಮಗಳ ಪ್ರತಿ ರಸ್ತೆ ಅಭಿವೃದ್ಧಿಗೆ ಆದ್ಯತೆ: ಶಾಸಕ‌ ಜಿ.ಎಸ್. ಪಾಟೀಲ

| Published : Jan 09 2024, 02:00 AM IST

ಗ್ರಾಮಗಳ ಪ್ರತಿ ರಸ್ತೆ ಅಭಿವೃದ್ಧಿಗೆ ಆದ್ಯತೆ: ಶಾಸಕ‌ ಜಿ.ಎಸ್. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮತಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಪ್ರತಿಯೊಂದು ಓಣಿಯ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ರೋಣ: ಮತಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಪ್ರತಿಯೊಂದು ಓಣಿಯ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಸೋಮವಾರ ತಾಲೂಕಿನ ಜಿಗಳೂರ ಗ್ರಾಮದ ಎಸ್.ಸಿ‌. ಕಾಲನಿಯಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನತೆಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸುವಲ್ಲಿ, ಬರಗಾಲವನ್ನು ದಿಟ್ಟವಾಗಿ ಎದುರಿಸುವಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಯಶಸ್ವಿಗೊಳಿಸಿದ್ದು, ಜನತೆಗೆ ಯೋಜನೆಗಳ ಲಾಭ ದೊರೆಯುತ್ತಿದೆ. ಜಿಗಳೂರ ಗ್ರಾಮದಲ್ಲಿ ಸಿ.ಸಿ. ರಸ್ತೆ ,ಸ್ಮಶಾನ ರಸ್ತೆ ಅಭಿವೃದ್ಧಿ, ಆಶ್ರಯ ಮನೆ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವದು. ಗ್ರಾಮದ ಎಸ್.ಸಿ ಕಾಲನಿಯಲ್ಲಿನ ರಸ್ತೆಯನ್ನು ಸಿ.ಸಿ‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ದುರ್ಗಾದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶೋಭಾ ಗೊಡಗೊಂಡ, ಉಪಾಧ್ಯಕ್ಷೆ ರೇಖಾ ಮಾದರ, ಸದಸ್ಯೆ ಅನ್ನಪೂರ್ಣ ಈರಗಾರ,ಸದಸ್ಯ ಬಿ.ಎಸ್. ಬಸವರಡ್ಡೇರ, ಹನಮಂತಪ್ಪ ಗೊಟಗೊಂಡ, ಫಕೀರಪ್ಪ ಈಳಗಾರ, ಎಸ್.ಎಫ್. ಹತ್ತಿಕಟಗಿ, ಶರಣಪ್ಪ ಬಸೆವಡೆಯರ, ಹನಮಂತಪ್ಪ ಮಣ್ಣೇರಿ, ಮೈಲಾರಪ್ಪ‌ ಮಾದರ, ಶಿವಪ್ಪ ಮಾದರ, ಶಿವಯೋಗಿ ಮಾದರ, ಶರಣಪ್ಪ‌ಮಾದರ, ಯಮನೂರಸಾಬ ನದಾಫ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಶಿಧರ ಕೊಣ್ಣೂರ ಸ್ವಾಗತಿಸಿದರು.