ಸಾರಾಂಶ
ಬೈಂದೂರು ತಾಲೂಕು ಕಚೇರಿ ಪ್ರಜಾ ಸೌಧ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳಿ ಅವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಬೈಂದೂರು: ಬೈಂದೂರು ತಾಲೂಕು ಕಚೇರಿ ಪ್ರಜಾ ಸೌಧ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳಿ ಅವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅಹವಾಲುಗಳನ್ನು ಹೊತ್ತುಕೊಂಡು ಬರುವ ಸಾರ್ವಜನಿಕರ ಸಮಸ್ಯೆಗಳು ಸಕಾಲದಲ್ಲಿ ಪರಿಹಾರವಾಗಿರುವುದನ್ನು ಗಮನಿಸಿದ ಅವರು, ಮುಂದೆ ಕ್ಷೇತ್ರದ ನಾಗರಿಕರು ಸಮಸ್ಯೆಯನ್ನು ಹೊತ್ತು ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿ ಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಅಹವಾಲುಗಳನ್ನು ಅಧಿಕಾರಿಗಳ ಉಪಸ್ಥಛಿತಿಯಲ್ಲಿಯೇ ಪಡೆದು ಸ್ಥಳದಲ್ಲಿಯೇ ಪರಿಹಾರ ಕ್ರಮಕ್ಕೆ ಪ್ರಯತ್ನಿಸಲಾಗುವುದು ಎಂದರು.ತಾಲೂಕು ಕಚೇರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಪ್ರತೀ ಗುರುವಾರ ಬೈಂದೂರು ತಾಲೂಕು ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಇಟ್ಟು ಕೊಳ್ಳಲಾಗುವುದು ಎಂದರು.