ಸಾರಾಂಶ
ಹಿರೇಕೆರೂರು: ಬಿಜೆಪಿ ತತ್ವಸಿದ್ಧಾಂತ ಅರಿತು ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕು, ಪದವೀಧರ ಚುನಾವಣೆ. ತಾಪಂ.ಜಿಪಂ. ಚುನಾವಣೆ ಬರುತ್ತಿದ್ದು, ಕಾರ್ಯಕರ್ತರು ಪಕ್ಷದ ಗೆಲುವಿಗೆ ಶ್ರಮವಹಿಸಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.ಪಟ್ಟಣದ ಮಾಜಿ ಸಚಿವ ಬಿ.ಸಿ. ಪಾಟೀಲ್ ಗೃಹ ಕಚೇರಿಯಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರ ಮತ್ತು ಬಿ.ಎಲ್.ಎ.2ಗಳ ಸಭೆ ಹಾಗೂ ಪದವೀಧರ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಬೇರು ಮಟ್ಟದಿಂದ ಗಟ್ಟಿಯಾಗಲು ಸ್ಥಳೀಯ ಬೂತ್ ಮಟ್ಟದ ಅಧ್ಯಕ್ಷರು, ಬಿಎಲ್ ಎಗಳು, ಶಕ್ತಿ ಕೇಂದ್ರ ಹಾಗೂ ಮಹಾ ಶಕ್ತಿ ಕೇಂದ್ರಗಳೇ ಪ್ರಮುಖ ಕಾರಣಾಗುತ್ತಾರೆ. ಆದ್ದರಿಂದ ಅವರಿಗೆ ನೀಡಿದ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲಿಸಬೇಕು ಎಂದರು.ಈ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಾಂತಿಮಠ್, ಪ್ರಕೋಷ್ಠಾ ರಾಜ್ಯಸಹ ಸಂಚಾಲಕ ಬೋಜರಾಜ ಕೆರೂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಅಲದಕಟ್ಟಿ, ಯುವ ಮೋರ್ಚಾ ಅಧ್ಯಕ್ಷ ಜಗದೀಶ ದೊಡ್ಡಗೌಡ್ರ, ,ಬಿಜೆಪಿ ಮುಖಂಡರಾದ ಶಿವುಕುಮಾರ ತಿಪ್ಪಶಟ್ಟಿ, ಗುರುಶಂತ ಯತ್ತಿನಹಳ್ಳಿ, ಅಜಯ್ಯ ಮಂಠದ್, ಚನೇಶ್ ದಿಗಿಹಳ್ಳಿ, ಪ್ರಕಾಶಗೌಡ ಗೌಡರ್, ಬಸಮ್ಮ ಅಬಲೂರು, ಲತಾ ಬಣಕಾರ ,ಗಂಗಾಧರ್ ಬೋಗೆರ, ಬೂತ್ ಮಟ್ಟದ ಅಧ್ಯಕ್ಷರು ಪಕ್ಷದ ಮುಖಂಡರು ಇದ್ದರು.
;Resize=(128,128))
;Resize=(128,128))
;Resize=(128,128))