ಪ್ರತಿಯೊಬ್ಬರು ಸ್ವಚ್ಛತೆ ರಾಯಭಾರಿಯಾಗಲು ಸಾಧ್ಯ: ನರಹರಿ ನಾಯಕ್

| Published : Oct 03 2024, 01:27 AM IST

ಪ್ರತಿಯೊಬ್ಬರು ಸ್ವಚ್ಛತೆ ರಾಯಭಾರಿಯಾಗಲು ಸಾಧ್ಯ: ನರಹರಿ ನಾಯಕ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಸ್ವಚ್ಛತೆ ಕಾಪಾಡಿದಲ್ಲಿ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ನರಹರಿ ನಾಯಕ್ ತಿಳಿಸಿದರು.

ಸವಣೂರು: ವಿದ್ಯಾರ್ಥಿ ಜೀವನದಲ್ಲಿ ಸ್ವಚ್ಛತೆ ಅರಿವು ಹೊಂದುವ ಮೂಲಕ ಪ್ರತಿಯೊಬ್ಬರೂ ಸ್ವಚ್ಛತೆ ರಾಯಭಾರಿಯಾಗಲು ಸಾಧ್ಯವಾಗಲಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸವಣೂರ ಶಾಖೆ ವ್ಯವಸ್ಥಾಪಕ ನರಹರಿ ನಾಯಕ್ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸವಣೂರ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಆರ್ಥಿಕ ಸಾಕ್ಷರತೆ ಹಾಗೂಸ್ವಚ್ಛತಾ ಹಿ ಸೇವಾ ಸ್ವಭಾವ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸ್ವಚ್ಛತೆ ಕಾಪಾಡಿದಲ್ಲಿ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಪ್ರತಿಯೊಬ್ಬರೂ ಬ್ಯಾಂಕಿನ ವ್ಯವಹಾರ ಕುರಿತು ಜಾಗೃತಿ ಹೊಂದಿದಲ್ಲಿ ಉಳತಾಯದೊಂದಿಗೆ ಉತ್ತಮ ಜೀವನ ನಿರ್ವಹಣೆಗೆ ಮುಂದಾಗಬಹುದಾಗಿದೆ ಎಂದರು.ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಹರೀಶ ಹಿರಳ್ಳಿ ಮಾತನಾಡಿ, ಸ್ವಭಾವ ಸ್ವಚ್ಛತಾ ಕುರಿತು ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಭೀಮಾ ಯೋಜನೆ ಕುರಿತು ವಿವರಿಸಿದರು.

ಶಾಲೆಯ ಮುಖ್ಯಗುರುಮಾತೆ ಸೋಫಿಯಾ ನದಾಫ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರು ಸ್ವಚ್ಛತೆ ಅರಿವು ಹಾಗೂ ಆರ್ಥಿಕ ಸಾಕ್ಷರತೆ ಅರಿವು ಕುರಿತು ಕಿರು ನಾಟಕ ಪ್ರದರ್ಶಿಸಿದರು. ಕೆವಿಜಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಉದಯಕುಮಾರ, ಶಿಕ್ಷಕರಾದ ಸೌಭಾಗ್ಯವತಿ ಬಾರ್ಕಿ, ಶೋಭಾ ಭಜಂತ್ರಿ ಹಾಗೂ ಇತರರು ಪಾಲ್ಗೊಂಡಿದ್ದರು.