ಸಾರಾಂಶ
ಜಾತಿ, ಮತ, ಧರ್ಮ ಎಂದು ಎಣಿಸದೆ ಸಣ್ಣ ಜಾತಿ, ದೊಡ್ಡಜಾತಿ ಎಂಬ ಭೇದ-ಭಾವಗಳಿಲ್ಲದೆ ಸರ್ವ ಜನರು ದೇವರನ್ನು ಭಕ್ತಿಯಿಂದ ಕಂಡಾಗ ಶಿವ ಸ್ಮರಣೆಯಲ್ಲಿ ಮುಕ್ತಿ ಕಾಣಬಹುದಾಗಿದೆ ಎಂದು ರಾಂಪುರದ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿ ಹೇಳಿದರು.
ರಾಂಪುರ ಶ್ರೀ ಅಭಿಮತ । ಪ್ರತಿಷ್ಠಾಪನೆ, ಕಳಸಾರೋಹಣ
ಚನ್ನಗಿರಿ: ಜಾತಿ, ಮತ, ಧರ್ಮ ಎಂದು ಎಣಿಸದೆ ಸಣ್ಣ ಜಾತಿ, ದೊಡ್ಡಜಾತಿ ಎಂಬ ಭೇದ-ಭಾವಗಳಿಲ್ಲದೆ ಸರ್ವ ಜನರು ದೇವರನ್ನು ಭಕ್ತಿಯಿಂದ ಕಂಡಾಗ ಶಿವ ಸ್ಮರಣೆಯಲ್ಲಿ ಮುಕ್ತಿ ಕಾಣಬಹುದಾಗಿದೆ ಎಂದು ರಾಂಪುರದ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿ ಹೇಳಿದರು.ತಾಲೂಕಿನ ಹಿರೇಮಳಲಿ ಗ್ರಾಮದಲ್ಲಿ ಶ್ರೀ ಬೀಸಗ್ನಿ ಸಿದ್ದೇಶ್ವರ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಬಸವೇಶ್ವರಸ್ವಾಮಿ ಹಾಗೂ ಶ್ರೀ ಚೌಡೇಶ್ವರಿ ದೇವಿಯ ನೂತನ ದೇವಾಲಯದ ಪ್ರವೇಶ ಶಿಲಾಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಶಿಖರ ಕಳಸಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಶ್ರೀಗಳು, ಗ್ರಾಮಗಳಲ್ಲಿ ದೇವಾಲಯಗಳಿದ್ದಾಗ ಜಾತಿ, ಮತ ಎಂಬ ಭಿನ್ನತೆಗಳಿಲ್ಲದೆ ಸರ್ವಜನರು ದೇವಾಲಯಕ್ಕೆ ಬರುವುದರಿಂದ ಸಮಾನತೆಯ ಸಂಕೇತವಾಗಿದೆ ದೇವಾಲಯಗಳು ಎಂದು ತಿಳಿಸುತ್ತ, ಪ್ರತಿದಿನವು ತಮ್ಮ-ತಮ್ಮ ಕೆಲಸಗಳಿಗೆ ಹೋಗುವ ಮುನ್ನ ದೇವಾಲಯಕ್ಕೆ ಬಂದು ದೇವರಿಗೆ ನಮಿಸಿ ಕೆಲಸಗಳಲ್ಲಿ ನಿರತರಾದರೆ ಯಶಸ್ಸು ಲಭಿಸಲಿದೆ ಎಂದರು.
ಹಾವೇರಿಯ ಮಾಜಿ ಶಾಸಕ ನೆಹರು ಓಲೇಕರ್ ಮಾತನಾಡಿ, ಯಾವುದೇ ಕೆಲಸಗಳನ್ನು ಮಾಡಲಿ ಅಂತಹ ಕೆಲಸಗಳಲ್ಲಿ ಹೆಚ್ಚಿನ ಮಾರ್ಗದರ್ಶನ, ತಿಳುವಳಿಕೆ ಪಡೆದುಕೊಂಡು ಮುಂದು ವರೆದಾಗ ಯಶಸ್ಸು ನಮ್ಮದಾಗುವುದು ಎಂದು ಹೇಳುತ್ತ ಪ್ರಯತ್ನಗಳಿಲ್ಲದೆ ಫಲಾಪೇಕ್ಷೆ ಬಯಸಬಾರದು ಎಂದರು.ಸಣ್ಣ-ಸಣ್ಣ ಸಮಾಜಗಳು ಮುಂದುವರಿಯ ಬೇಕಾಗಿದ್ದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಮುಖರಾದ ಶೇಖರಪ್ಪ, ಚನ್ನಬಸಪ್ಪ, ಮೈಲಾರಪ್ಪ, ಮಹಾಂತೇಶ್, ರುದ್ರಪ್ಪ, ರವಿ, ಅಣ್ಣಪ್ಪ, ರುದ್ರೇಶ್, ಗಿರೀಶ್ ಗ್ರಾಮದ ಜನರು ಹಾಜರಿದ್ದರು.