ಸಾರಾಂಶ
Everyone eat nutritious food: Jayanna
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಪ್ರತಿಯೊಬ್ಬರು ಪೌಷ್ಠಿಕಯುಕ್ತ ಆಹಾರ ಸೇವನೆ ಮಾಡುವ ಮೂಲಕ ಸದೃಢವಂತರಾಗಿ ಬಾಳ ಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಜಯಣ್ಣ ಹೇಳಿದರು.ಬಿಜಿಕೆರೆ ಗ್ರಾಮದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗ ನಡೆದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಕ್ತಹೀನತೆ ತಡೆಗಟ್ಟಲು ಗರ್ಭಿಣಿ ಬಾಣಂತಿಯರು ಪೋಷಕಾಂಶಯುಕ್ತ ಆಹಾರ ಪದಾರ್ಥ ಸೇವಿಸಬೇಕು. ಸ್ಥಳೀಯವಾಗಿ ಸಿಗುವಂತ ಸೊಪ್ಪು ತರಕಾರಿ ಸೇರಿದಂತೆ ಅಧಿಕ ವಿಟಮಿನ್ ಸಿಗುವಂತಹ ಪೌಷ್ಟಿಕಾಂಶ ಸೇವನೆ ಮಾಡುವುದು ಅಗತ್ಯವಾಗಿದೆ. ಇದರಿಂದ ತಾಯಿ ಮಗುವಿಗೆ ಎದುರಾಗಬಹುದಾದ ಅಪೌಷ್ಠಿಕತೆ ನಿವಾರಣೆ ಮಾಡಬಹುದು. ಅದಕ್ಕಾಗಿಯೇ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಸಿಗುವಂತ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಎಸ್. ಬಣಕಾರ್, ರಾಷ್ಟ್ರೀಯ ಪೋಷಣ್ ಅಭಿಯಾನದ ಗುರಿ ಮತ್ತು ಮಹತ್ವದ ಕುರಿತು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್ ಕುಮಾರ್ ಮಾತನಾಡಿ, ಪ್ರಧಾನಮಂತ್ರಿ ಮಾತೃ ವಂದನೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.ಈ ವೇಳೆ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಗರ್ಭಿಣಿ ಮಹಿಳೆಯರ ಸೀಮಂತ ಕಾರ್ಯ ನೆರವೇರಿಸಲಾಯಿತು. ಕೇಶವ ಮೂರ್ತಿ, ಓಬಯ್ಯ, ವೈದ್ಯರಾದ ಡಾ. ಮಹಾಂತೇಶ, ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಪಿರ್ದೋಸ್ ಜಹಾನ್, ಪೋಶನ್ ಅಭಿಯಾನ್ ಯೋಜನಾ ಸಂಯೋಜಕ ಹನುಮಂತಪ್ಪ, ಕೌಸಲ್ಯ ಶಿಕ್ಷಣ ಇಲಾಖೆ ಪ್ರಕಾಶ್, ಆರೋಗ್ಯ ಇಲಾಖೆ ಕೌಶಲ್ಯ, ಸುಜಾತ ಲೋಕೇಶಪ್ಪ ಇದ್ದರು.