ರಂಗಭೂಮಿ ಕಲೆ ಉಳಿಸಿ ಬೆಳೆಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಂಗಭೂಮಿ ಕಲೆಗೆ ಸಮಾಜ ತಿದ್ದುವ ಶಕ್ತಿ ಇದೆ.

ಯಲಬುರ್ಗಾ: ರಂಗಭೂಮಿ ಜೀವಂತ ಕಲೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಹೇಳಿದರು.

ತಾಲೂಕಿನ ವನಜಭಾವಿ ಗ್ರಾಮದಲ್ಲಿ ಈಶ ಬಸವೇಶ್ವರ ತರುಣ ನಾಟ್ಯ ಸಂಘ ಹಾಗೂ ಅಭಿನವ ಗವಿಶ್ರೀ ನಾಟ್ಯ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ತಾಯಿಯ ಮಡಿಲು ಅರ್ಥಾತ್ ಮಗ ಹೋದರು ಮಾಂಗಲ್ಯ ಬೇಕು ಎನ್ನುವ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಂಗಭೂಮಿ ಕಲೆ ಉಳಿಸಿ ಬೆಳೆಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಂಗಭೂಮಿ ಕಲೆಗೆ ಸಮಾಜ ತಿದ್ದುವ ಶಕ್ತಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಸಾಮಾಜಿಕ ನಾಟಕ ಹೆಚ್ಚು ಪ್ರದರ್ಶನ ಕಾಣುತ್ತಿರುವುದು ಕಲೆಯ ಉಳಿವಿಗೆ ಸಹಕಾರ ದೊರೆಯುತ್ತಿದೆ ಎಂದರು.

ರಂಗಭೂಮಿ ಗಂಡು ಮೆಟ್ಟಿನ ಕಲೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಜೀವಂತ ಕಲೆಯಾಗಿದೆ. ರಂಗಭೂಮಿ ಕಲೆ ಸಾಮಾಜಿಕ ಸಂದೇಶ ನೀಡುತ್ತದೆ. ಕಲೆ ಪ್ರದರ್ಶಿಸುವ ಮೊದಲೇ ಸಾಕಷ್ಟು ತಯಾರಿ ನಡೆಸಿ ಪ್ರದರ್ಶನ ಮಾಡಲಾಗುತ್ತದೆ. ಗಟ್ಟಿಯಾಗಿರುವ ರಂಗಭೂಮಿ ಕಲೆ ಎಲ್ಲರೂ ಉಳಿಸಿ ಬೆಳೆಸಬೇಕಾಗಿದೆ ಎಂದರು.

ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಮಾತನಾಡಿ, ೧೨ನೇ ಶತಮಾನದಲ್ಲಿ ಜನರಲ್ಲಿ ಅಸ್ಪೃಶ್ಯತೆ, ಮೂಢನಂಬಿಕೆ ತೋಲಗಿಸಲು ಅನುಭವ ಮಂಟಪದಲ್ಲಿ ಚರ್ಚಿಸಿದ ವಿಷಯ ಜನರಿಗೆ ತಿಳಿಸಲು ಬೀದಿ ನಾಟಕಗಳ ಮೂಲಕ ಜಾಗೃತಿಗೊಳಿಸುವಂತ ಕಾರ್ಯ ಚೌಡಯ್ಯನವರು ಅಂದೇ ಪ್ರಾರಂಭಿಸಿದ್ದರು ಎಂದರು.

ಶ್ರೀ ಷಡಕ್ಷರಯ್ಯಸ್ವಾಮಿ ಹಿರೇಮಠ, ಶರಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭ ತಾಪಂ ಮಾಜಿ ಸದಸ್ಯ ರುದ್ರಪ್ಪ ಮರಕಟ್, ಷಣ್ಮುಖಪ್ಪ ಬಳ್ಳಾರಿ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಚಂದ್ರಶೇಖರ ನಾಡಗೌಡ್ರ, ಪ್ರಭುಗೌಡ ಪೊಲೀಸ್ ಪಾಟೀಲ್, ರಂಗನಾಥ ವಲ್ಮಕೊಂಡಿ, ಭೀಮನಗೌಡ ಜಾಲಿಹಾಳ, ಶ್ರೀಕಾಂತಗೌಡ ಮಾಲಿಪಾಟೀಲ್, ಮಂಜುನಾಥ ರೊಟ್ಟಿ, ಹನುಮಂತಪ್ಪ ಕುರ್ನಾಳ, ಗಿರಿಮಲ್ಲಪ್ಪ ಪರಂಗಿ, ಹನುಮಗೌಡ ಗೌಡ್ರ, ಮಂಜುನಾಥ ಕೋಳೂರು, ಚನ್ನಬಸಪ್ಪ ಮೇಟಿ, ಮಹಾಂತಗೌಡ ಪಾಟೀಲ್, ಹನಮಂತಪ್ಪ ದಳಪತಿ, ರಂಗಭೂಮಿ ಕಲಾವಿದ ಚಿತ್ರನಟ ಹಾಗೂ ಕಾಮಿಡಿ ಕಿಲಾಡಿ ಪಲ್ಲವಿ ಸಂಜು ಬಸಯ್ಯ, ಮಂಜು ಗುಳೇದಗುಡ್ಡ, ಗುರುಲಿಂಗಯ್ಯ ತಾಳಿಕೋಟಿ, ತಿರುಪತಿ ರಾಠೋಡ, ಕಳಕಪ್ಪ ತಳವಾರ, ಮರೇಗೌಡ ಗೌಡ್ರ, ಯಮನೂರ ಲಿಂಗದಹಳ್ಳಿ, ರೇಣುಕಾ ಬದಾಮಿ, ಶೋಭಾ ಮಂಗಳೂರು, ರಂಗಭೂಮಿಯಲ್ಲಿ ಅಭಿನಯಿಸಿದರು.