ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ಗ್ರಾಮದಲ್ಲಿ ಎರಡು ಸಮಾಜದವರು ಸಹೋದರರಂತೆ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂದರು.

ಮುಂಡರಗಿ: ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ಘಟನೆ ಮತ್ತೆ ಮರುಕಳಿಸಬಾರದು. ಗ್ರಾಮದಲ್ಲಿರುವ ಎಲ್ಲ ಸಮಾಜದವರು ಪರಸ್ಪರ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಡಾ. ನಂದಾ ಹಣಬರಟ್ಟಿ ತಿಳಿಸಿದರು.

ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಕಳೆದ ಮಾ. 23ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಧ್ಯ ಜರುಗಿದ ಗಲಾಟೆ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿ ಘಟನೆಯಲ್ಲಿ ನೊಂದ 174 ಕುಟುಂಬಗಳಿಗೆ ಜಿಲ್ಲಾಧಿಕಾರಿ ಆದೇಶದಂತೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಹಾರ ಕಿಟ್ ವಿತರಿಸಿ ಮಾತನಾಡಿ, ಗ್ರಾಮದಲ್ಲಿ ಎಲ್ಲರೂ ಸ್ನೇಹ, ಪ್ರೀತಿಯಿಂದ ಬದುಕಬೇಕು ಎಂದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ಗ್ರಾಮದಲ್ಲಿ ಎರಡು ಸಮಾಜದವರು ಸಹೋದರರಂತೆ ಪ್ರೀತಿ, ವಿಶ್ವಾಸದಿಂದ ಬದುಕಬೇಕು. ಗ್ರಾಮದಲ್ಲಿ ಏನೇ ಸಮಸ್ಯೆಗಳಿದ್ದರೂ ಪರಸ್ಪರ ಕುಳಿತು ಮಾತನಾಡಿ ಪರಿಹರಿಸಿಕೊಳ್ಳಬೇಕು. ಗ್ರಾಮದಲ್ಲಿ ಶಾಂತಿ ಕದಡದಂತೆ ಒಗ್ಗಟ್ಟಿನ ಜೀವನ ನಡೆಸಬೇಕು. ಗ್ರಾಮದಲ್ಲಿ ನಿರ್ಭೀತಿಯಿಂದ ಮೊದಲಿನಂತೆ ಜೀವನ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀಕಾಂತ ಅರಹುಣಸಿ, ಎಲ್.ಎಂ. ಗಚ್ಚಿನಮನಿ, ಯಲ್ಲಪ್ಪ ನಾಗಮ್ಮನವರ್, ಮಂಜುನಾಥ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಖೇಮ್ಯಾ ನಾಯ್ಕ್ ಸೇರಿದಂತೆ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನತೆ ಉಪಸ್ಥಿತರಿದ್ದರು.ಛಾಯಾಗ್ರಾಹಕನ ಮೇಲೆ ಹಲ್ಲೆ: ಆರೋಪಿಗಳ ಬಂಧಿಸಿ

ನರಗುಂದ: ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಇತ್ತೀಚೆಗೆ ಛಾಯಾಗ್ರಾಹಕರ ಮೇಲೆ ಕೆಲವು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಬೇಕೆಂದು ತಾಲೂಕು ಛಾಯಾಗ್ರಾಹಕರು ಸರ್ಕಾರಕ್ಕೆ ಆಗ್ರಹಿಸಿದರು.ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ಆಶ್ರಯದಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಛಾಯಾಗ್ರಾಹಕರು ಮಾತನಾಡಿ, ಮಾ. 27ರಂದು ಸಕಲೇಶಪುರದಲ್ಲಿ ಛಾಯಾಗ್ರಾಹಕ ಪ್ರಿ ವೆಡ್ಡಿಂಗ್ ಶೂಟ್‌ ಮಾಡುತ್ತಿರುವಾಗ ಕೆಲವು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಹಾಗೂ ಛಾಯಾಗ್ರಹಣಕ್ಕೆ ಬಳಸುವ ಉಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.ಉಪತಹಸೀಲ್ದಾರ್ ಪರಶುರಾಮ ಕಲಾಲ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷ ಮಹೇಶ ಬಡಿಗೇರ, ಉಪಾಧ್ಯಕ್ಷ ಅಂದಾನಯ್ಯ ಹಿರೇಮಠ, ಕಾರ್ಯದರ್ಶಿ ನಜೀರ್ ರೋಣದ, ಸದಸ್ಯರಾದ ಮುತ್ತು ಕುಮ್ಮಿ, ಪ್ರಕಾಶ ನಂದಿ, ಶಿವರಾಜ ಕಲ್ಲಾಪೂರ, ಗಣೇಶ ನಾಗನೂರ, ಶಿವು ದಿಬ್ಬದಮನಿ, ಶರಣಪ್ಪ ಹೂಗಾರ, ಸಂಗು ಚರಂತಿಮಠ, ಗಿರೀಶ ಬೆಳವಟಿಗಿ, ವಿಜಯ್ ಪಲ್ಲೇದ, ಮಾರುತಿ ದೊಡ್ಡಮನಿ, ಪ್ರಕಾಶ ಪೂಜಾರ, ರಾಘು ಸಿಂಪಿ, ಆನಂದ ಬನಪ್ಪನವರ, ಬಸವರಾಜ ಮೂಲಿಮನಿ, ಸುರೇಶ ನರಸಾಪೂರ, ಮುತ್ತು ಹೂಗಾರ ಮುಂತಾದವರು ಇದ್ದರು.