ಸಮಾಜ ಸಂಘಟನೆ ವಿಚಾರದಲ್ಲಿ ಸಮುದಾಯದ ಎಲ್ಲರೂ ಕೈಜೋಡಿಸಬೇಕು. ಆದರೆ ಕೆಲವರು ಅನಗತ್ಯ ಗೊಂದಲ ವಿವಾದ ಸೃಷ್ಟಿಸುತ್ತಿದ್ದು, ಅಂತಹ ಕೃತ್ಯದಲ್ಲಿ ತೊಡಗಿದವರು ಸಮಾಜದ ಹಿತದೃಷ್ಟಿಯಿಂದ ಸಮಾಜದ ಏಳ್ಗೆಗೆ ಕೈಜೋಡಿಸಬೇಕೆಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬನ್ನಪ್ಪ ಸುಂಕದ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸಮಾಜ ಸಂಘಟನೆ ವಿಚಾರದಲ್ಲಿ ಸಮುದಾಯದ ಎಲ್ಲರೂ ಕೈಜೋಡಿಸಬೇಕು. ಆದರೆ ಕೆಲವರು ಅನಗತ್ಯ ಗೊಂದಲ ವಿವಾದ ಸೃಷ್ಟಿಸುತ್ತಿದ್ದು, ಅಂತಹ ಕೃತ್ಯದಲ್ಲಿ ತೊಡಗಿದವರು ಸಮಾಜದ ಹಿತದೃಷ್ಟಿಯಿಂದ ಸಮಾಜದ ಏಳ್ಗೆಗೆ ಕೈಜೋಡಿಸಬೇಕೆಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬನ್ನಪ್ಪ ಸುಂಕದ ಕರೆ ನೀಡಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಬಣಜಿಗ ಸಮಾಜದ ಸಂಘಟನೆ ಪ್ರಯತ್ನಗಳು ಇದೀಗ ಫಲಿಸುತ್ತಿದ್ದು, ಇದಕ್ಕೆ ಕೆಲವರು ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಹೀಗೆ ಮಾಡುವುದರಿಂದ ಸಮಾಜ ಸಂಘಟನೆ ಇನ್ನು ಮುಂದಕ್ಕೆ ಹೋಗಿ ಸಮಾಜದ ಜನತೆಗೆ ಸಮಾಜಿಕ ನ್ಯಾಯ ಸಿಗುವುದು ವಿಳಂಬವಾಗುತ್ತದೆ ಎಂದು ಹೇಳಿದರು.
ಶಹಾಪುರ ತಾಲೂಕು ಅಧ್ಯಕ್ಷ ಮಹೇಶ ಆನೆಗುಂದಿ ಸಾಹುಕಾರ ಮಾತನಾಡಿ, ಸಮಾಜ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜಿಲ್ಲಾಧ್ಯಕ್ಷ ಬನ್ನಪ್ಪ ಸುಂಕದ ಅವರ ವಿರುದ್ಧ ಕ್ಷುಲ್ಲಕ ಕಾರಣ ನೀಡಿ, ಕಿರುಕುಳ ನೀಡುವ ಕೆಲಸಕ್ಕೆ ಕೆಲವರು ಕೈ ಹಾಕಿದ್ದಾರೆ. ಇದು ಖಂಡನೀಯ, ಅವರು ಸಂಪೂರ್ಣವಾಗಿ ಸಮಾಜದ ಹಿತಕ್ಕಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆಸಿದರೆ ಕಾನೂನು ಕ್ರಮಕ್ಕೆ ಮುಂದಾಗಲು ಚಿಂತನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.* ಮೀಸಲು ಒದಗಿಸಿ: ಬಣಜಿಗ ಸಮಾಜ ಸೇರಿದಂತೆ 3ಬಿ ನಲ್ಲಿ ಬರುವ ವೀರಶೈವ ಲಿಂಗಾಯತ ಸಮಾಜದ ಉಪಪಂಗಡದವರಿಗೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು, ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ಈ ಮೀಸಲಾತಿ ಕಲ್ಪಿಸದೇ ಸಮಾಜಕ್ಕೆ ಘೋರ ಅನ್ಯಾಯ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳು, ಕಂದಾಯ ಸಚಿವರು ಸೇರಿದಂತೆ ಸರ್ಕಾರ ತ್ವರಿತವಾಗಿ ಕ್ರಮ ಜರುಗಿಸಬೆಕೆಂದು ಮಹೇಶ ಆನೆಗುಂದಿ ಸಾಹುಕಾರ ಹಾಗೂ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷ ಶಿವರಾಜ ಕಲ್ಕೇರಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾದ್ಯಕ್ಷರಾದ ಗಂಗಾಧರ ಚಂದ್ರಗಿರಿ, ಜಗದೀಶ ಭೂಮಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಸಿಂಗಾರ, ಸುರಪುರ ತಾಲೂಕು ಅಧ್ಯಕ್ಷ ಸುರೇಶ ಸಾಹು ತಂಬಾಕೆ, ವಡಗೇರಿ ತಾಲೂಕು ಅಧ್ಯಕ್ಷ ಬಸವರಾಜ ಸಾಹು ಸೊನ್ನದ, ಗುರುಮಠಕಲ್ ತಾಲೂಕು ಅಧ್ಯಕ್ಷ ಸಂಜೀವಕುಮಾರ ಸಾಹುಕಾರ, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಶರಣು ಸಾಹುಕಾರ ಪಡಶೆಟ್ಟಿ, ಶರಣಗೌಡ ಮಾಲೀಪಪಾಟೀಲ್ ಅಣಬಿ, ಶಿವನಾಗ ಈರಣ್ಣ ಸುರಪುರ ದೋರನಳ್ಳಿ, ಚೋಳೇಶ ದಣಿ, ಮಹೇಶ ಅವಂಟಿ, ಪ್ರಧಾನ ಕಾರ್ಯದರ್ಶಿ ದೊಡ್ಡಪ್ಪ ಬೆಟ್ಟಪ್ಪನವರ್, ನಗರ ಘಟಕದ ಖಜಾಂಚಿ ವಿಶ್ವನಾಥ ಪೊ.ಪಾ., ಯುವ ಘಟಕ ಖಜಾಂಚಿ ನಾಗೇಶ ಕಂದಕೂರ ಸುರಪುರ ತಾ. ಯುವ ಘಟಕದ ಅಧ್ಯಕ್ಷ ಶರಣು ಬಳಿ ಜಾಲಿಬೆಂಚಿ ಸೇರಿದಂತೆ ಇನ್ನಿತರರು ಇದ್ದರು.