ಸಾರಾಂಶ
ಶಿಗ್ಗಾಂವಿ: ಪ್ರತಿ ಕಾರ್ಯಗಳು ಯಶಸ್ವಿಯಾಗಲು ಒಗ್ಗಟ್ಟಿನ ಪ್ರದರ್ಶನ ಕಾರಣವಾಗಿದೆ. ನ. ೨೦ರಿಂದ ೨೧ರ ವರೆಗೆ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.ಬಂಕಾಪುರ ಗ್ರಾಮದಲ್ಲಿ ವೀರಭದ್ರೇಶ್ವರ ಗುಗ್ಗಳ, ಕಾರ್ತಿಕ ದೀಪೋತ್ಸವ, ಪಲ್ಲಕ್ಕಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಆಮಂತ್ರಣ ಪತ್ರಿಕೆ ಹಾಗೂ ವಾಲ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.ನ. ೨೦ರಂದು ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರಕಾಳಿ ದೇವರುಗಳಿಗೆ ಅಭಿಷೇಕ, ವೀರಭದ್ರೇಶ್ವರ ಸ್ವಾಮಿ ಗುಗ್ಗಳ ಮಹೋತ್ಸವ ಮತ್ತು ಸಂಜೆ ಕಾರ್ತಿಕೋತ್ಸವ ಮತ್ತು ಮಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.ನ. ೨೧ರಂದು ಸಂಜೆ ೫ ಗಂಟೆಗೆ ಧರ್ಮ ಸಮಾರಂಭ ನಡೆಯಲಿದೆ. ಅದರಲ್ಲಿ ನಾಡಿನ ವಿವಿಧ ಮಠಮಾನ್ಯರು, ಗಣ್ಯರು, ಸಾಹಿತಿಗಳು, ಕಲಾವಿದರು ಆಗಮಿಸಲಿದ್ದಾರೆ. ಅಲ್ಲದೇ ಸೇವಾಧಾರಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅದರಲ್ಲಿ ಸ್ಥಳೀಯ ಭಕ್ತ ಸಮೂಹ, ಯುವಕರು ಸ್ವಪ್ರೇರಣೆಯಿಂದ ಹಂಚಿಕೊಂಡ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕು ಎಂದರು.ರೇಣುಕಾಚಾರ್ಯ ಆಸ್ಪತ್ರೆ ಮುಖ್ಯವೈದ್ಯ ಡಾ. ಆರ್.ಎಸ್. ಅರಳೆಲೆಮಠ, ವಿನಾಯಕ ಅರಳೆಲೆಮಠ, ಮುಖಂಡ ಬಾಪುಗೌಡ ಪಾಟೀಲ, ನಿಂಗನಗೌಡ್ರ ಪಾಟೀಲ, ರುದ್ರೇಶ ಪವಾಡಿ, ಪ್ರಕಾಶ ಸಕ್ರಿ, ಗಂಗಾಧರ ಪೂಜಾರ, ಎಂ.ಬಿ. ಉಂಕಿ, ಜಿ.ಕೆ. ಶೆಟ್ಟರ, ಅಶೋಕ ಶೆಟ್ಟರ, ಪುರಸಭೆ ಉಪಾಧ್ಯಕ್ಷ ಆಂಜನೇಯ ಗುಡಿಗೇರಿ ಸೇರಿದಂತೆ ಪುರಸಭೆ ಸರ್ವ ಸದಸ್ಯರು, ದೇವಸ್ಥಾನ ಸೇವಾ ಸಮಿತಿ ಸದಸ್ಯರು ಇದ್ದರು.
;Resize=(128,128))
;Resize=(128,128))
;Resize=(128,128))