ತರೀಕೆರೆಕುಟುಂಬದ ಪ್ರತಿಯೊಬ್ಬ ವ್ಯಕ್ತಿ ಜನ ಸುರಕ್ಷಾ ಯೋಜನೆ ಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಪ್ರಭು ಹೇಳಿದ್ದಾರೆ.

ಆರ್ಥಿಕ ಸಾಕ್ಷರತೆ ಮತ್ತು ಸರ್ಕಾರದ ಸುರಕ್ಷಾ ಯೋಜನೆಗಳ ಕುರಿತು ಸ್ಯಾಚುರೇಶನ್ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಕುಟುಂಬದ ಪ್ರತಿಯೊಬ್ಬ ವ್ಯಕ್ತಿ ಜನ ಸುರಕ್ಷಾ ಯೋಜನೆ ಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಪ್ರಭು ಹೇಳಿದ್ದಾರೆ.

ಬುಧವಾರ ತಾಲೂಕಿನ ಬೆಟ್ಟದಹಳ್ಳಿ ಕೆನರಾ ಬ್ಯಾಂಕ್ ನಿಂದ ಬೆಟ್ಟದಹಳ್ಳಿ ಗ್ರಾಪಂನಲ್ಲಿ ನಡೆದ ಆರ್ಥಿಕ ಸಾಕ್ಷರತೆ ಮತ್ತು ಸರ್ಕಾರದ ಸುರಕ್ಷಾ ಯೋಜನೆಗಳ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅ. 21ರಿಂದ ಅಧಿಕೃತವಾಗಿ ಪ್ರಾರಂಭ ವಾಗಿ ಡಿ. 31ರ ತನಕ ಈ ಸ್ಯಾಚುರೇಶನ್ ಕ್ಯಾಂಪ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜನ ಸುರಕ್ಷಾ ಯೋಜನೆಗಳಲ್ಲಿ ಪ್ರಮುಖ ವಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ, ಸುರಕ್ಷಾ ಭೀಮಾ, ಅಟಲ್ ಪಿಂಚಣಿ ಯೋಜನೆಯನ್ನು ಬ್ಯಾಂಕ್ ಖಾತೆ ಹೊಂದಿರುವವರು ಪಡೆವ ಜೊತೆಗೆ ಖಾತೆಗಳು ಮರುಜೀವ ಪಡೆಯಲು ಈ ಕೆ ವೈ ಸಿ ಆಧಾರ್ ಜೋಡಣೆ, ಬಾಂಕ್‌ ಖಾತೆ ಇಲ್ಲದವರು ಪ್ರಧಾನ ಮಂತ್ರಿ ಜನ್ ಧನ್ ಖಾತೆ ಪ್ರಾರಂಭಿಸುವುದು. ಇರುವ ಖಾತೆದಾರರು ಹಣಕಾಸಿನ ವ್ಯವಹಾರ ಮಾಡುವುದು ಮತ್ತು ನಾಮಿನೇಷನ್ ಪ್ರಕ್ರಿಯೆ ನೋಂದಣಿ ಹೀಗೆ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಕುಟುಂಬದ ಪ್ರತಿಯೊಬ್ಬ ವಯಸ್ಕ ವ್ಯಕ್ತಿ ಈ ಸುರಕ್ಷಾ ಯೋಜನೆ ಪಡೆದುಕೊಂಡು ಕುಟುಂಬದಲ್ಲಿ ಭದ್ರತೆ ಕಾಪಾಡಬೇಕು ಎಂದು ಹೇಳಿದರು.

ಆರ್ಥಿಕ ಸಾಕ್ಷರತಾಧಿಕಾರಿ ಶ್ರೀನಿವಾಸ್ ಮಾತನಾಡಿ ಜನರ ಸುರಕ್ಷಾ ಯೋಜನೆಗಳಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಬಹಳ ಪ್ರಮುಖ ಯೋಜನೆ. ಈ ಯೋಜನೆ ವರ್ಷಕ್ಕೆ ₹436 ರು. ಕಟ್ಟಿ ಪಡೆಯುವುದು, ಈ ಯೋಜನೆಗೆ 18 ವರ್ಷ ಮೇಲ್ಪಟ್ಟು 50 ವರ್ಷಗಳ ಒಳಗಿರೋ ವ್ಯಕ್ತಿ ಪಡೆಯುವುದು 50ವರ್ಷ ಒಳಗಿನ ವ್ಯಕ್ತಿ ಪಡೆದರೆ 55 ವರ್ಷ ತನಕ ರಿಸ್ಕ್ ಕವರ್ ಆಗುತ್ತದೆ ಎಂದು ಹೇಳಿದರು.

ಅಟಲ್ ಪಿಂಚಣಿ ಯೋಜನೆ ಪ್ರತಿಯೊಬ್ಬ ಕಾರ್ಮಿಕರು, ಪ್ರತಿಯೊಬ್ಬರೂ ಸಹ ಈ ಪಿಂಚಣಿ 1,000 ದಿಂದ 5000 ವರೆಗೆ ಇರುವ ಯೋಜನೆ ಪಡೆದು ವಯಸ್ಸಿಗೆ ಅನುಗುಣವಾಗಿ ಮತ್ತು ಯಾವ ಪಿಂಚಣಿ ಪಡೆಯಲು ಯೋಚಿಸುತ್ತೇವೋ ಅದಕ್ಕೆ ಅನುಗುಣವಾಗಿ ಹಣ ಕಟ್ಟಬಹುದು. ತದನಂತರ 60 ವರ್ಷದ ವರೆಗೆ ಕಟ್ಟಿದ ನಂತರ ಈ ಪಿಂಚಣಿ ಪಡೆಯಬಹುದು ಇದಕ್ಕೆ ಅರ್ಹತೆ 18 ವರ್ಷ ಮೇಲ್ಪಟ್ಟು 40 ವರ್ಷದ ಒಳಗಡೆ ಇರುವ ಪ್ರತಿ ವ್ಯಕ್ತಿ ಈ ಪಿಂಚಣಿ ಪಡೆಯಬಹುದು ಎಂದು ಹೇಳಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಂಜಪ್ಪ, ಬೆಂಗಳೂರು ಆರ್.ಬಿ.ಐ.ನ ಮೌನಿರಾಜ್, ಗ್ರಾ.ಪಂ.ಮಾಜಿ ಅದ್ಯಕ್ಷ ಯೋಗೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶರತ್, ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಧಮ್ಮ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-

11ಕೆಟಿಅರ್.ಕೆ.1ಃ

ತರೀಕೆರೆ ಸಮೀಪದ ಬೆಟ್ಟದಹಳ್ಳಿಯಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಸರ್ಕಾರದ ಸುರಕ್ಷಾ ಯೋಜನೆಗಳ ಕುರಿತು ನಡೆದ ಸ್ಯಾಚುರೇಶನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಪ್ರಭು ಮಾತನಾಡಿದರು. ಬೆಂಗಳೂರು ಆರ್.ಬಿ.ಐ.ನ.ಮೌನಿರಾಜ್ ಮತ್ತಿತತರರು ಇದ್ದರು.