ಸಾರಾಂಶ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ನಾಟಕಗಳು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು ಸ್ಥಳೀಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಬಿ. ವಿಜಯಕುಮಾರ್ ಹೇಳಿದರು.ಇಲ್ಲಿನ ದುರ್ಗಾದಾಸ್ ಕಲಾಮಂದಿರದಲ್ಲಿ ಲಿಲತ ಕಲಾರಂಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಜಿಲ್ಲೆ ಇವುಗಳ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಯೋಜನೆಯ ಪ್ರಾಯೋಜನೆಯಡಿ ಶ್ರಾವಣ ಸಿರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಂ. ಮಂಜುನಾಥ ತಂಡದವರಿಂದ ಬೆಳ್ಳಕ್ಕಿ ಹಿಂಡು ಬೆದರ್ಯಾವೋ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕ ಕಲೆ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕಿದೆ. ನಮ್ಮ ಕಲೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕಿದೆ ಎಂದು ಅವರು ಹೇಳಿದರು.ಕಲಾವಿದ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಸೋಮಶೇಖರ್ ಮಾತನಾಡಿ, ನಾಟಕದಲ್ಲಿ ಮಾತ್ರ ಕಲಾವಿದನ ನೈಜ ಕಲೆ ಅನಾವರಣಗೊಳ್ಳಲು ಸಾಧ್ಯ. ರಂಗಕಲೆ ಜೀವಂತ ಕಲೆಯಾಗಿದೆ. ರಂಗಭೂಮಿಗೆ ದೊಡ್ಡ ಇತಿಹಾಸವಿದೆ. ನಾಟಕಗಳಿಂದ ಮನ ಪರಿವರ್ತನೆ, ತತ್ವ, ನೀತಿಗಳ ಮೌಲ್ಯಗಳನ್ನು ಸಾರುವ ಜೊತೆಗೆ ಸಮಾಜವನ್ನು ತಿದ್ದುವ ಮಹತ್ತರ ಕಾರ್ಯ ಆಗುತ್ತದೆ ಎಂದರು.
ಹಿರಿಯ ರಂಗ ಕಲಾವಿದೆ ಬಿ. ಶಾರದಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಪಂ ಸದಸ್ಯ ಕೆ. ಮಂಜುನಾಥ, ಸ್ಥಳೀಯ ಮುಖಂಡ ರೋಗಾಣಿ ಮಂಜುನಾಥ, ಹಿರಿಯ ರಂಗಕಲಾವಿದ ಕೆ. ತಿಪ್ಪಣ್ಣ ಗೊಲ್ಲರಹಳ್ಳಿ ಮುಖ್ಯಅತಿಥಿಗಳಾಗಿ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ನಂತರ ಗೋ.ರು. ಚನ್ನಬಸಪ್ಪ ರಚಿಸಿರುವ, ಬೆಂಗಳೂರಿನ ಕೆ. ಶಿವರುದ್ರಯ್ಯ ನಿರ್ದೇಶನ, ಹ್ಯಾಟಿ ಮಂಜುನಾಥ ಸಹ ನಿರ್ದೇಶನದಲ್ಲಿ ಬೆಳ್ಳಕ್ಕಿ ಹಿಂಡು ಬೆದರ್ಯಾವೋ ನಾಟಕದಲ್ಲಿ ಎಚ್. ಮಂಜುನಾಥ, ಕೆ. ನಾಗೇಶ್, ಜಿ.ಎಂ. ಕೊಟ್ರೇಶ್, ಹ್ಯಾಟಿ ಮಂಜುನಾಥ, ಜಿ. ಸೋಮಣ್ಣ, ಕಟ್ಟೆ ಉಮೇಶ್, ಹುರುಕೊಳ್ಳಿ ಗುರುಪ್ರಕಾಶ್, ಡಿ. ನಾರಾಯಣ, ಮಡಿವಾಳ ಮಂಜುನಾಥ, ಕೆ.ಬಿ. ರಾಘವೇಂದ್ರ, ಎಂ. ಮಂಜುನಾಥ, ಎ. ಅನಿಲ, ಕೆ. ಗಜೇಂದ್ರ, ಜೆ. ನಂದಿನಿ, ಜಿ. ಸಂಗೀತ, ಜಿ. ನಾಗವೇಣಿ ಪಾತ್ರ ನಿರ್ವಹಿಸಿದರು. ಕೆ. ತಿಪ್ಪಣ್ಣ ಹಾರ್ಮೋನಿಯಂ, ಜಿ.ಕೆ. ಮೌನೇಶ್ ತಬಲ, ಕೆ. ಮಲ್ಲನಗೌಡ, ಜಿ. ಮಲ್ಲಪ್ಪ, ಬಿ. ಶಾರದಮ್ಮ, ವಿ. ಶೋಭಾ ಗಾಯನದಲ್ಲಿ ಭಾಗವಹಿಸಿದ್ದರು. ನಾಟಕಕ್ಕೆ ಧ್ವನಿ ಮತ್ತು ಬೆಳಕು ಎಚ್. ರಸೂಲ್ ಸಾಹೇಬ್ ನಿರ್ವಹಿಸಿದರು.ಜೆ. ನಂದಿನಿ, ಜಿ. ನಾಗವೇಣಿ ಪ್ರಾರ್ಥಿಸಿದರು. ವಿ. ಶೋಭಾ ಸ್ವಾಗತಿಸಿ, ನಿರೂಪಿಸಿದರು. ಸಿ.ಕೆ. ನಾಗರಾಜ ವಂದಿಸಿದರು.