ದೇಶ ಮೊದಲೆನ್ನುವ ಭಾವ ಪ್ರತಿಯೊಬ್ಬರಲ್ಲೂ ಬೇಕು: ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶಾಮ್ ಲಾತೋರೆ

| Published : Jan 26 2024, 01:46 AM IST

ದೇಶ ಮೊದಲೆನ್ನುವ ಭಾವ ಪ್ರತಿಯೊಬ್ಬರಲ್ಲೂ ಬೇಕು: ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶಾಮ್ ಲಾತೋರೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಮೊದಲು ಎಂಬ ಮನೋಭಾವದೊಂದಿಗೆ ಸದೃಢ ರಾಷ್ಟ್ರಕ್ಕಾಗಿ ನಿರಂತರ ಪ್ರಯತ್ನ ಮಾಡುವುದು ಪ್ರತಿಯೊಬ್ಬ ಭಾರತೀಯನ ಮನಸ್ಥಿತಿಯಾಗುತ್ತದೆ ಎಂಬ ಪ್ರಧಾನಮಂತ್ರಿ ಮೋದಿಜೀಯವರ ಆಶಯದಂತೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಸಾಮಾನ್ಯ ಜನರಿಗೆ ಅರಿವನ್ನು ಮೂಡಿಸುವ ಜತೆಗೆ ಅಗತ್ಯ ಸೌಲಭ್ಯಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶಾಮ್ ಲಾತೋರೆ ತಿಳಿಸಿದರು. ‘ನಮ್ಮ ಸಂಕಲ್ಪ ವಿಕಸಿತ ಭಾರತ’ ಎಂಬ ವಿಶೇಷ ಅಭಿಯಾನ ಹಾಗೂ ಎನ್‌ಸಿಡಿ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಮ್ಮ ಸಂಕಲ್ಪ ವಿಕಸಿತ ಭಾರತ’ ಅಭಿಯಾನ । ಆರೋಗ್ಯ ತಪಾಸಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ದೇಶ ಮೊದಲು ಎಂಬ ಮನೋಭಾವದೊಂದಿಗೆ ಸದೃಢ ರಾಷ್ಟ್ರಕ್ಕಾಗಿ ನಿರಂತರ ಪ್ರಯತ್ನ ಮಾಡುವುದು ಪ್ರತಿಯೊಬ್ಬ ಭಾರತೀಯನ ಮನಸ್ಥಿತಿಯಾಗುತ್ತದೆ ಎಂಬ ಪ್ರಧಾನಮಂತ್ರಿ ಮೋದಿಜೀಯವರ ಆಶಯದಂತೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಸಾಮಾನ್ಯ ಜನರಿಗೆ ಅರಿವನ್ನು ಮೂಡಿಸುವ ಜತೆಗೆ ಅಗತ್ಯ ಸೌಲಭ್ಯಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶಾಮ್ ಲಾತೋರೆ ತಿಳಿಸಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೆನರಾ ಬ್ಯಾಂಕ್ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ‘ನಮ್ಮ ಸಂಕಲ್ಪ ವಿಕಸಿತ ಭಾರತ’ ಎಂಬ ವಿಶೇಷ ಅಭಿಯಾನ ಹಾಗೂ ಎನ್‌ಸಿಡಿ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸೇರಿದಂತೆ ಕೆಂದ್ರದ ಯೋಜನೆಗಳ ಕುರಿತು ಮಾಹಿತಿ ನೀಡಿ, ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಯೋಜನೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ಆರೋಗ್ಯ ಮಿತ್ರ ವೀರಭದ್ರಪ್ಪ ಮಾತನಾಡಿ, ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದುವ ಮಹತ್ವಾಕಾಂಕ್ಷೆಯೊಂದಿಗೆ ನಡೆಯುತ್ತಿರುವ ‘ನಮ್ಮ ಸಂಕಲ್ಪ ವಿಕಸಿತ ಭಾರತ’ ಎಂಬ ವಿಶೇಷ ಅಭಿಯಾನದಡಿಯಲ್ಲಿ ೧ ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ. ಆಯುಷ್ಮಾನ್ ಕಾರ್ಡ್ ಪಡೆಯಲು ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯ ಮತ್ತು ಅಗತ್ಯ ಚಿಕಿತ್ಸೆ ಸಮಯದಲ್ಲಿ ಸರ್ಕಾರ ಐದು ಲಕ್ಷ ರು. ಉಚಿತವಾಗಿ ವೆಚ್ಚವನ್ನು ಬರಿಸಲಿದೆ. ಈ ಸೌಲಭ್ಯ ಪಡೆಯಲು ನೋಂದಣಿ ಕಡ್ಡಾಯವಾಗಿದೆ ಎಂದರು.

ಅಸಾಂಕ್ರಾಮಿಕ ರೋಗಗಳ ಬಗ್ಗೆ ಅಗತ್ಯ ಮಾಹಿತಿ ನೀಡಿ, ಪುರಸಭೆ ನಡೆಸುವ ಸ್ವಚ್ಛತಾ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರಿಕ ಸಹಕರಿಸಬೇಕಾದ್ದು ಕರ್ತವ್ಯವಾಗಿದ್ದು, ಪುರಸಭೆಯ ಪ್ರಕಟಣೆಗಳನ್ನು ಪಾಲನೆ ಮಾಡುವ ಜತೆಗೆ ಸಾಂಕ್ರಾಮಿಕ ರೋಗಗಳ ಹರಡದಂತೆ ಜಾಗ್ರತೆ ವಹಿಸಲು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆಕೊಟ್ಟರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ. ಅರುಣ್ ಅವರ ನೇತೃತ್ವದಲ್ಲಿ ಎನ್‌ಸಿಡಿ ವಿಭಾಗದ ಭಾನುಶ್ರೀ, ಮೇಘನಾ, ಚಂದ್ರಕಲಾ ಹಾಗೂ ಐಸಿಟಿಸಿ ಸಿಬ್ಬಂದಿ ಸಹಕಾರದಲ್ಲಿ ಆರೋಗ್ಯ ತಪಾಸಣೆ ಮಾಡಲಾಯಿತು.

ಪುರಸಭೆ ಅಧಿಕಾರಿಗಳಾದ ಪಂಕಜಾ ಹಾಗೂ ರಮೇಶ್, ಕೆನರಾ ಬ್ಯಾಂಕ್ ಕ್ಷೇತ್ರ ಅಧಿಕಾರಿ ಸುಪ್ರಿಯಾ, ಅಧಿಕಾರಿ ಶಶಿಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ನಿರೀಕ್ಷಕ ಜೆ.ಟಿ.ಸ್ವಾಮಿ, ಗ್ರಾಮ ಆರೋಗ್ಯ ತಾ. ಸಂಯೋಜಕ ಐ.ಕೆ.ರಮೇಶ್ ಇದ್ದರು.ಹೊಳೆನರಸೀಪುರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜನೆ ಮಾಡಿದ್ದ ನಮ್ಮ ಸಂಕಲ್ಪ ವಿಕಸಿತ ಭಾರತ ಎಂಬ ವಿಶೇಷ ಅಭಿಯಾನ ಹಾಗೂ ಎನ್‌ಸಿಡಿ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶಾಮ್ ಲಾತೋರೆ ಅವರು ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಭಿತ್ತಿಪತ್ರ ಪ್ರದರ್ಶಿಸಿದರು.