ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರತಿಯೊಬ್ಬ ನಾಗರಿಕನೂ ನಮ್ಮ ಇತಿಹಾಸದ ಬಗ್ಗೆ ಪ್ರಜ್ಞೆ ಇಟ್ಟುಕೊಳ್ಳುವುದು ತುಂಬಾ ಮುಖ್ಯ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ಹೇಳಿದರು.ನಗರದ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಮೈಸೂರು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದ ಅವರು, ಕರ್ನಾಟಕವು ಸುಪ್ರಸಿದ್ಧ ಶಿಲ್ಪಕಲೆಯನ್ನು ಹೊಂದಿದೆ. ಚಿತ್ರದುರ್ಗ ಕೋಟೆ, ಹಂಪಿಯ ಸ್ಮಾರಕಗಳ ನಿರ್ಮಾಣದಲ್ಲಿ ಜಲಪೂರಣ, ವಿಭಿನ್ನ ಉಡುಪು, ವಿಭಿನ್ನ ಭಾಷಾಶೈಲಿ, ಆಹಾರ ಪದ್ಧತಿಯಲ್ಲಿ ವಿಭಿನ್ನತೆಯನ್ನು ವಿವರಿಸಿದರು. ಸಮಾಜ ವಿಜ್ಞಾನ ಪರಿವೀಕ್ಷಕ ಹಾಗೂ ನೋಡಲ್ ಅಧಿಕಾರಿ ಕೆ.ಜೆ.ಪ್ರಶಾಂತ್ ಮಾತನಾಡಿ, ನಮ್ಮ ಇತಿಹಾಸ ನಮ್ಮ ಹೆಮ್ಮೆ, ನಮ್ಮ ರಾಜ್ಯ ಇತಿಹಾಸ ಪ್ರಸಿದ್ಧ ವಾಸ್ತುಶಿಲ್ಪ ಹೊಂದಿದೆ. ವಿದ್ಯಾರ್ಥಿಗಳಲ್ಲಿ ಇತಿಹಾಸ ಪ್ರಜ್ಞೆ, ಆಸಕ್ತಿ ಈಗಿನಿಂದಲೇ ರೂಢಿಸಿಕೊಳ್ಳವುದು ಅಗತ್ಯವೆಂದರು. ಜಿಲ್ಲೆಯ ವಿವಿದೆಡೆಗಳಿಂದ ಆಗಮಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಯಿತು. ವಿಜೇತರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವರು. ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕರಾದ ನಿತ್ಯಾನಂದ, ರಂಗಾನಾಯ್ಕ್, ಡಯಟ್ ಉಪನ್ಯಾಸಕ ಬಸವರಾಜ್, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್, ಚಿತ್ರಕಲಾ ಶಿಕ್ಷಕ ದಾದಾಪೀರ್ ಇದ್ದರು.
)
;Resize=(128,128))
;Resize=(128,128))
;Resize=(128,128))
;Resize=(128,128))