ಪರಿಸರ ಸಂರಕ್ಷಣೆ ಮಹತ್ವ ಪ್ರತಿಯೊಬ್ಬರೂ ತಿಳಿವುದು ಅಗತ್ಯ: ಡಾ.ರಾಮಣ್ಣಗೌಡ

| Published : Jun 07 2024, 12:15 AM IST

ಪರಿಸರ ಸಂರಕ್ಷಣೆ ಮಹತ್ವ ಪ್ರತಿಯೊಬ್ಬರೂ ತಿಳಿವುದು ಅಗತ್ಯ: ಡಾ.ರಾಮಣ್ಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಸಮೀಪದ ಸೌದಗರ ಡ್ಯಾಮ್ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಸಿ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಯಾದಗಿರಿಯ ವಿಜಯ ವಿಠ್ಠಲ ಸೇವಾ ಸಂಸ್ಥೆ ವತಿಯಿಂದ ಹಸಿರಿನ ಗಿರಿಗಳ ಶಾಲೆ ಕಾರ್ಯಕ್ರಮದಡಿ ಸೌದಗರ ಡ್ಯಾಮ್ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ರಾಮಣ್ಣ ಗೌಡ ಅವರು, ಪರಿಸರ ರಕ್ಷಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಪರಿಸರವು ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಬಾರದು, ಇದರ ಮಹತ್ವ ಪ್ರತಿಯೊಬ್ಬ ವ್ಯಕ್ತಿ ತಿಳಿಯಬೇಕಾಗಿದೆ ಎಂದರು.

ಶರಣಪ್ಪ ಬೆನಕನಳ್ಳಿ ವಿದ್ಯಾರ್ಥಿಗಳೊಂದಿಗೆ ವಿಶ್ವ ಪರಿಸರ ದಿನದ ಕುರಿತು ಮಾತನಾಡಿದರು. ಶಾಲೆಯ ಮುಖ್ಯಗುರು ಮನೋಹರ ಕಟ್ಟಿಮನಿ, ಮಲ್ಲಿಕಾರ್ಜುನ್ ಶಿರಗೋಳ, ಸಾಬರೆಡ್ಡಿ, ವಿಠ್ಠಲ್ ಕುಲಕರ್ಣಿ ಇತರರಿದ್ದರು.