ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪ್ರತಿಯೊಬ್ಬರಿಗೂ ಮೌಲ್ಯಾಧಾರಿತ ಶಿಕ್ಷಣ ಪ್ರಸ್ತುತ ಅಗತ್ಯವಿದೆ ಎಂದು ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ.ಕೆಂಪಮ್ಮ ಅಭಿಪ್ರಾಯಪಟ್ಟರು.ಭಾರತೀ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಭಾರತೀ ಸಂಯುಕ್ತ ಪದವಿ ಪೂರ್ವ ಕಾಲೇಜು (ಎಕ್ಸ್‌ಲೆನ್ಸ್) ವತಿಯಿಂದ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಶಿಕ್ಷಣ ಪಡೆಯಲು ಸನ್ನದ್ಧರಾಗಬೇಕು ಎಂದರು.
ಎಲ್ಲಾ ದಾನಕಿಂತ ಶ್ರೇಷ್ಠ ಅನ್ನದಾನ, ಶಿಕ್ಷಣದಾನ ಎಂಬ ಮಾತಿದೆ. ಆದರೆ, ಅನ್ನದಾನ ಹಸಿವನ್ನು ನೀಗಿಸುತ್ತದೆ. ಶಿಕ್ಷಣ ದಾನ ವ್ಯಕ್ತಿ ಸ್ವಾಲವಂಭಿಯಾಗಿ ತನ್ನ ಬದುಕಿಗೆ ಬೇಕಾದದನ್ನು ಪಡೆಯಲು ನೆರವಾಗುತ್ತದೆ ಎಂದರು.ಶಿಕ್ಷಣ ದಾನ ಮಾಡಿದ ಅಕ್ಷರ ಬ್ರಹ್ಮ ಮಾಜಿ ಸಂಸದ ಜಿ.ಮಾದೇಗೌಡರು ತಮ್ಮ ದೂರದೃಷ್ಟಿಯಿಂದ ಕುಗ್ರಾಮ ಕೆ.ಎಂ.ದೊಡ್ಡಿಯಲ್ಲಿ ಸ್ಥಾಪಿಸಿದ ಶಿಕ್ಷಣ ಕೇಂದ್ರ ಇಂದು ನಗರ ಪ್ರದೇಶಕ್ಕೆ ಕಮ್ಮಿ ಇಲ್ಲ ಎಂಬಂತೆ ಬಹುದೊಡ್ಡ ನಗರವಾಗಿ ಬೆಳೆದು ವಾಣಿಜ್ಯ ಕೇಂದ್ರಗಳ ಪ್ರಮುಖ ಸಾಲಿಗೆ ಸೇರಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಪಠ್ಯ ಎಷ್ಟು ಮುಖ್ಯವು ಪಠ್ಯೇತರ ಚಟುವಟಿಕೆಗಳು ಬಹಳ ಅತ್ಯಗತ್ಯ. ಒಂದು ಮಗುವಿನ ಮೌಲ್ಯದಾರಿತ ಕೌಶಲ್ಯಯುತ ವ್ಯಕ್ತಿತ್ವ ರೂಪುಗೊಳ್ಳಬೇಕಾದರೇ ಎನ್‌ಎಸ್ಎಸ್, ಎನ್‌ಸಿಸಿ ಮತ್ತು ಸ್ಕೌಟ್ ಅಂಡ್ ಗೈಡ್ ಸೇರಿದಂತೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ ಕ್ರೀಯಾ ಶಿಲತೆಯನ್ನು ವೃದ್ಧಿಸುತ್ತವೆ ಎಂದರು.ಎಲ್ಲ ಸಮಸ್ಯೆಗಳಿಗೂ ದಿವ್ಯೌಷದ ಶಿಕ್ಷಣ ವಿಷಯಗಳನ್ನು ತಲೆಗೂ ತುರುಕುವುದು ಶಿಕ್ಷಣವಲ್ಲ. ಮನಸ್ಸಿಗೆ ತರಬೇತಿ ನೀಡುವ ಶಿಕ್ಷಕರ ಅಗತ್ಯ ಅವಶ್ಯಕತೆ ಇದೆ ಎಂಬುವುದು ಸ್ವಾಮಿ ವಿವೇಕಂನದರ ಆಶಯವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ, ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡ ಮಾತನಾಡಿ, ನನ್ನ ತಂದೆ ಜಿ.ಮಾದೇಗೌಡರು ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗಾಗಿ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು. ಕಾಲೇಜಿಗೂ ಉತ್ತಮ ಹೆಸರು ತರಬೇಕು ಎಂದರು.ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಬಳಿಕ ನಮ್ಮ ಕಾಲೇಜಿನಲ್ಲೆ ಹಲವು ಕೋರ್ಸ್‌ಗಳಿದ್ದು ಅದನ್ನು ಪೂರೈಸಿದರೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕೊಡಸಲು ಸಂಸ್ಥೆ ಬದ್ಧವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಜಿ.ಮಾದೇಗೌಡ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಆರ್.ಚಂದನ್, ಭಾರತೀ ಔಷಧ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಬಾಲಸುಬ್ರಮಣ್ಯಂ, ವಿವಿಧ ವಿಭಾಗದ ಮುಖ್ಯಸ್ಥರಾದ ಮಠದದೊಡ್ಡಿ ಪುಟ್ಟಸ್ವಾಮಿ, ಟಿ.ಎಚ್. ವಿನೋಧ, ಎಂ. ದಿವ್ಯ, ಎಂ.ಎನ್. ಅನಿತಾ, ಎಚ್.ಎನ್. ಅನುರಾಧ ಸೇರಿದಂತೆ ಮತ್ತಿತರಿದ್ದರು.