ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಪರಿಸರ ಜಾಗೃತಿಯಲ್ಲಿ ಯುವ ಜನರ ಪಾತ್ರ ಬಹಳ ಮುಖ್ಯ ಎಂದು ಹಿರಿಯ ವಕೀಲ ಡಿ. ವೆಂಕಟಾಚಲ ತಿಳಿಸಿದರು.ಪಟ್ಟಣದ ಗೀತಾ ಪ್ರೈಮರಿ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಹೊಸ ಹಂಪಾಪುರ ರೋಟರಿ ಸಮುದಾಯದಳ, ಗೀತಾ ಪ್ರೈಮರಿ ಶಾಲೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯುವ ಜನತೆ ಪರಿಸರ ಸ್ನೇಹಿ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು. ಮಕ್ಕಳು ತಮ್ಮ ಹುಟ್ಟು ಹಬ್ಬವನ್ನು ಒಂದು ಗಿಡ ನೆಟ್ಟು ಸಂಭ್ರಮವನ್ನು ಆಚರಿಸಬೇಕು. ಅಲ್ಲದೆ ಆ ಗಿಡವನ್ನು ಪೋಷಿಸಿ ಬೆಳೆಸುವತ್ತ ಹೆಚ್ಚು ಒತ್ತು ನೀಡಬೇಕು. ಇತರರಲ್ಲೂ ಪರಿಸರದ ರಕ್ಷಣೆ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.ಶಾಲೆಯ ಮುಖ್ಯ ಶಿಕ್ಷಕ ಮೂಡಲ ಗಿರಿಯಪ್ಪ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಪರಿಸರದ ಮಹತ್ವದ ಬಗ್ಗೆ ಅರಿವನ್ನು ಹೊಂದಬೇಕು ಎಂದು ತಿಳಿಸಿದರು.ಕೃಷಿ ಮೇಲ್ವಿಚಾರಕ ಚಂದನ್ ಪರಿಸರ ಜಾಗೃತಿ ಜೊತೆಗೆ ಉಚಿತ ಸಸಿಗಳ ವಿತರಣೆ ಮಹತ್ವ ಕುರಿತುಮಾಹಿತಿ ನೀಡಿದರು.ಹೊಸ ಹಂಪಾಪುರ ರೋಟರಿ ಸಮುದಾಯದಳ ಚೇರ್ಮನ್ ಸುಜಾತಾ, ಪವಿತ್ರ ಇತರರು ಉಪಸ್ಥಿತರಿದ್ದರು.