ಸಾರಾಂಶ
ಅಬಕಾರಿ ಅಕ್ರಮಗಳನ್ನು ತಡೆಯಬೇಕಾದರೆ ಇಲಾಖೆಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿ ಬೇಕಾಗಿದೆ. ತಾಲೂಕಿನ ಯಾವ ಮೂಲೆಯಲ್ಲಾದರೂ ಅಬಕಾರಿ ಅಕ್ರಮಗಳು ನಡೆದಿದ್ದು ಕಂಡುಬಂದರೆ ತಕ್ಷಣವೇ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅಬಕಾರಿ ನಿರೀಕ್ಷಕಿ ಬಿ.ಶ್ವೇತಾ ಚನ್ನಗಿರಿಯಲ್ಲಿ ಹೇಳಿದ್ದಾರೆ.
- ಬಸವಾಪುರ ಗ್ರಾಮ ಸಭೆಯಲ್ಲಿ ಇಲಾಖೆ ನಿರೀಕ್ಷಕಿ ಬಿ.ಶ್ವೇತಾ ಸಲಹೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಅಬಕಾರಿ ಅಕ್ರಮಗಳನ್ನು ತಡೆಯಬೇಕಾದರೆ ಇಲಾಖೆಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿ ಬೇಕಾಗಿದೆ. ತಾಲೂಕಿನ ಯಾವ ಮೂಲೆಯಲ್ಲಾದರೂ ಅಬಕಾರಿ ಅಕ್ರಮಗಳು ನಡೆದಿದ್ದು ಕಂಡುಬಂದರೆ ತಕ್ಷಣವೇ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅಬಕಾರಿ ನಿರೀಕ್ಷಕಿ ಬಿ.ಶ್ವೇತಾ ಹೇಳಿದರು.ತಾಲೂಕಿನ ಬಸವಾಪುರದಲ್ಲಿ ಗುರುವಾರ ಅಬಕಾರಿ ಇಲಾಖೆ ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಮಾದಕ ವಸ್ತುಗಳ ಸಂಗ್ರಹ, ತಯಾರಿಕೆ, ಉತ್ಪಾದನೆ, ಸಂಗ್ರಹಣೆ, ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ಇದರಲ್ಲಿ ಯಾರಾದರೂ ತೊಡಗಿಕೊಂಡಿದ್ದರೆ ಅಂಥವರ ಮಾಹಿತಿಯನ್ನು ನಮಗೆ ನೀಡಬಹುದು. ಖಚಿತ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು, ಯಾವುದೇ ಭಯಪಡುವ ಅವಶ್ಯಕತೆಗಳಿಲ್ಲ ಎಂದರು.
ಅಕ್ರಮ ಮಧ್ಯ, ಕಳ್ಳಬಟ್ಟಿ ಮಧ್ಯ, ನಕಲಿ ಮದ್ಯ, ಸಾರಾಯಿಯನ್ನು ಅಕ್ರಮವಾಗಿ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮಗಳ ಜರುಗಿಸಲಾಗುವುದು. ಇಂತಹ ಗ್ರಾಮ ಸಭೆಗಳನ್ನು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಾಡಲಿದ್ದು, ತಾಲೂಕಿನ ಜನರು ಅಕ್ರಮ ಮದ್ಯ ಮಾರಾಟದ ತಡೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು,ಈ ಸಂದರ್ಭ ಗ್ರಾಮಸ್ಥರಾದ ಬಸವರಾಜಪ್ಪ, ಜ್ಞಾನೇಶ್, ರಘು, ಅಬಕಾರಿ ಇಲಾಖೆ ಸಿಬ್ಬಂದಿ ಪ್ರವೀಣ್, ಚಿದಾನಂದ್, ಪ್ರದೀಪ್, ಗ್ರಾಮಸ್ಥರು ಹಾಜರಿದ್ದರು.
- - - -2ಕೆಸಿಎನ್‌ಜಿ3:ಗ್ರಾಮಸಭೆಯಲ್ಲಿ ಅಬಕಾರಿ ನಿರೀಕ್ಷಕಿ ಬಿ.ಶ್ವೇತಾ ಮಾತನಾಡಿದರು.