ಎಲ್ಲರೂ ಬಸವಣ್ಣನವರ ತತ್ವ, ಸಿದ್ಧಾಂತ ಅಳವಡಿಸಿಕೊಳ್ಳಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

| Published : Sep 15 2025, 01:00 AM IST

ಎಲ್ಲರೂ ಬಸವಣ್ಣನವರ ತತ್ವ, ಸಿದ್ಧಾಂತ ಅಳವಡಿಸಿಕೊಳ್ಳಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರದ ಕಪಲಾಪುರ (ಎ) ಗ್ರಾಮದಲ್ಲಿ ಶನಿವಾರ ನಡೆದ ಮಹಾತ್ಮ ಬಸವೇಶ್ವರರ ಮೂರ್ತಿ ಅನಾವರಣ ಮತ್ತು ಶ್ರಾವಣ ಮಾಸದ ಅಂಗವಾಗಿ ನಡೆದ ಪ್ರವಚನ ಮತ್ತು ಸಪ್ತಾಹ ಸಮಾರೋಪದಲ್ಲಿ ಮಹಾತ್ಮ ಬಸವೇಶ್ವರರ ಮೂರ್ತಿ ಲೋಕಾರ್ಪಣೆ ಮಾಡಿ ಮಾತನಾಡಿ, ಜಗಜ್ಯೋತಿ ಬಸವಣ್ಣನವರು, 12ನೇ ಶತಮಾನದಲ್ಲಿಯೇ ಅನುಭವ ಮಂಟಪದಡಿ ಎಲ್ಲ ಜಾತಿ, ವರ್ಗದ ಜನರನ್ನು ಒಂದುಗೂಡಿಸಿ ಸಮಾನತೆಯ ಮೂಲಕ ವಿಶ್ವದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಯುಗ ಪುರುಷರು. ಅವರು ವಚನಗಳ ಮೂಲಕ ಸಾಮಾಜಿಕ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದ ಮಹಾನ್ ದಾರ್ಶನಿಕರು ಎಂದರು.

ನೂತನ ಸಂಸತ್ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು 12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪಿಸಿದ್ದ ಅನುಭವ ಮಂಟಪವನ್ನು ಪ್ರಸ್ತಾಪಿಸಿದರು. ನಾಡಿನ ಅಭಿವೃದ್ಧಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿಶ್ವದಲ್ಲಿಯೇ ಮೊದಲ ಬಾರಿ ಜಾರಿಗೊಳಿಸಿದ ಕೀರ್ತಿ ಬಸವೇಶ್ವರರಿಗೆ ಸಲ್ಲುತ್ತದೆ ಎಂದರು.

ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಪಲಾಪುರ (ಎ) ಗ್ರಾಮದಲ್ಲಿ ಮಹಾತ್ಮ ಬಸವೇಶ್ವರರ ಮೂರ್ತಿ ಅನಾವರಣ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು, ಬಸವಣ್ಣನವರ ಸಂದೇಶಗಳನ್ನು ಪಾಲಿಸಬೇಕೆಂದು ತಿಳಿಸಿದರು.

ಪೂಜ್ಯ ಪೂರ್ಣಾನಂದ ಸ್ವಾಮಿ, ಶಿವಯೋಗಿ ಮಚೇಂದ್ರ ಮಹಾರಾಜರು, ಬಸವಲಿಂಗ ದೇವರು, ಆಣದೂರ ಭಂತೇಜಿ, ಜಗದ್ಗುರು ದೊಡೆಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸತೀಶ ಸಿಕೆಂದ್ರಪುರ, ಗ್ರಾಪಂ ಉಪಾಧ್ಯಕ್ಷ ಶಿವಕುಮಾರ ಕೋಳಾರೆ, ಮುಖಂಡರಾದ ಹಣಮಂತರಾವ ಮೈಲಾರೆ, ನಾಗಭೂಷಣ ಕಮಠಾಣೆ, ಬಾಬುರಾವ ಮಲ್ಕಾಪುರ, ಜಗನ್ನಾಥ ಜಮಾದಾರ, ಮಹೇಶ ಮೈಲಾರೆ, ಸಂಗಮೇಶ ಪಾಟೀಲ್, ಅಶೋಕ ಗಾಧಾ, ಬಸವರಾಜ ಕೊಳ್ಳುರ, ಶಿವರಾಜ ಪಾಟೀಲ, ಶಿವರಾಜ ಮೂಲಗೆ, ಗಂಗಾಧರ್ ರೊಡ್ಡಾ, ಶಿವರಾಜ ಖೇಮಶೆಟ್ಟಿ, ಅಮೃತರಾವ ಮೂಲಗೆ, ಅಮರ ಚಾಂಬಳೆ, ವೀರಶೆಟ್ಟಿ ವಗದಾಳೆ ಗ್ರಾಮಸ್ಥರು ಇದ್ದರು.