ಪ್ರತಿಯೊಬ್ಬರೂ ಭಗೀರಥ ಮಹರ್ಷಿ ತತ್ವಾದರ್ಶ ಅಳವಡಿಸಿಕೊಳ್ಳಿ

| Published : May 05 2025, 12:53 AM IST

ಸಾರಾಂಶ

ಧರೆಗೆ ಗಂಗೆಯನ್ನು ತರುವಲ್ಲಿ ಭಗೀರಥ ಮಹರ್ಷಿಯವರು ಪಟ್ಟ ಶ್ರಮವು ಬಹಳಷ್ಟು. ಇವರ ತತ್ವ ಅದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳೋಣ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಧರೆಗೆ ಗಂಗೆಯನ್ನು ತರುವಲ್ಲಿ ಭಗೀರಥ ಮಹರ್ಷಿಯವರು ಪಟ್ಟ ಶ್ರಮವು ಬಹಳಷ್ಟು. ಇವರ ತತ್ವ ಅದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳೋಣ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹರ್ಷಿ ಶ್ರೀ ಭಗೀರಥರ ಜಯಂತಿ ಕಾರ್ಯಕಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸೂರ್ಯ ವಂಶಸ್ಥರ ಮಗನಾಗಿದ್ದ ಭಗೀರಥ ಜಲಕ್ಷಾಮವನ್ನು ಹೋಗಲಾಡಿಲು ಶಿವನ ಕುರಿತು ತಪಸ್ಸಿಗೆ ಕೂರುತ್ತಾರೆ. ಭಕ್ತನ ತಪಸ್ಸು ಶಕ್ತಿಯನ್ನು ಪರಿಶೀಲನೆ ಮಾಡುವ ಶಿವನು ಗಂಗೆಯನ್ನು ತನ್ನ ಜಡೆಯಲ್ಲಿ ಕಟ್ಟಿಕೊಂಡಿರುತ್ತಾರೆ. ತನ್ನ ಸತತ ಪ್ರಯತ್ನ ಹಾಗೂ ತಪಸ್ಸಿನ ಶಕ್ತಿಯಿಂದ ಶಿವನ ಜಡೆಯಲ್ಲಿದ್ದ ಗಂಗೆಯನ್ನು ಭೂಮಿ ತಂದರು ಭಗೀರಥರು. ಅವರ ಆಧ್ಯಾತ್ಮಿಕ ಪುರುಷರು ಹೌದು. ರಾಜ್ಯದ ಜನರ ಹಿತಕ್ಕಾಗಿ ದುಡಿಯವರು. ಅವರ ಶ್ರಮ ಮತ್ತು ಕಲ್ಯಾಣ ರಾಜ್ಯ ನಿರ್ಮಾಣಕ್ಕಾಗಿ ಅವರು ತೋರಿದ ಶಕ್ತಿ ಅವಿಸ್ಮರಣೀಯ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಆರ್. ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ನಲ್ಲೂರು ಸೋಮೇಶ್ವರ್, ಮುಖಂಡರಾದ ಉಡಿಗಾಲ ನಂಜಪ್ಪ, ಸೋಮಣ್ಣ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕರಿನಂಜನಪುರ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲತಾ ರಾಜಶೇಖರ್, ಜಿ.ಪಂ. ಮಾಜಿ ಸದಸ್ಯೆ ಕಾವೇರಿ ಶಿವಕುಮಾರ್, ಬಿಸಲವಾಡಿ ರವಿ. ಮಹದೇವಶೆಟ್ಟಿ, ಪುಟ್ಟಸ್ವಾಮಿ, ನಾಗಾರ್ಜುನಪ್ರಥ್ವಿ, ನಾಗವಳ್ಳಿ ನಾಗಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಮರಿಯಾಲಹುಂಡಿ ಕುಮಾರ್, ಕಾಡಹಳ್ಳೀ ಗ್ರಾ.ಪಂ. ಅಧ್ಯಕ್ಷ ರೂಪೇಶ್ ಮೊದಾದಲವರು ಇದ್ದರು.