ಸಾರಾಂಶ
ಕನ್ನಡ ಏಕೀಕರಣಕ್ಕಾಗಿ ಹೋರಾಟ ಮಾಡಿದ ಕನ್ನಡದ ಪುರೋಹಿತ ಆಲೂರು ವೆಂಕಟರಾಯರಂಥ ನಾಯಕರನ್ನು ಸ್ಮರಿಸುತ್ತಾ. ನಾಡು, ನುಡಿ, ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ ವಿಚಾರದಲ್ಲಿ ಎಲ್ಲರೂ ಬದ್ಧರಾಗಿರಬೇಕು, ಇಂದಿನ ಮಕ್ಕಳಿಗೆ ಕನ್ನಡ ಭಾಷೆಯ ತಿಳಿವಳಿಕೆಯನ್ನು ಹೇಳಬೇಕು.
ಚಿಂತಾಮಣಿ: ನಾಡು, ನುಡಿ, ನೆಲ, ಜಲ, ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿಗೆ ಧಕ್ಕೆ ಬಂದಾಗ ಪ್ರತಿಯೊಬ್ಬರೂ ಅದರ ಉಳಿವಿಗಾಗಿ ಹೋರಾಡಬೇಕಾಗಿದೆಯೆಂದು ಉಪ ತಹಸೀಲ್ದಾರ್ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಸೋರಪ್ಪಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡವು ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಭವ್ಯ ಪರಂಪರೆ ಹೊಂದಿದೆ. ಅದನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಅದರತ್ತ ನಾವು ಕಾರ್ಯೋನ್ಮುಖರಾಗಬೇಕೆಂದರು.ಕರವೇ ತಾಲೂಕು ಅಧ್ಯಕ್ಷ ವಡ್ಡಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ಕನ್ನಡ ಏಕೀಕರಣಕ್ಕಾಗಿ ಹೋರಾಟ ಮಾಡಿದ ಕನ್ನಡದ ಪುರೋಹಿತ ಆಲೂರು ವೆಂಕಟರಾಯರಂಥ ನಾಯಕರನ್ನು ಸ್ಮರಿಸುತ್ತಾ. ನಾಡು, ನುಡಿ, ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ ವಿಚಾರದಲ್ಲಿ ಎಲ್ಲರೂ ಬದ್ಧರಾಗಿರಬೇಕು, ಇಂದಿನ ಮಕ್ಕಳಿಗೆ ಕನ್ನಡ ಭಾಷೆಯ ತಿಳಿವಳಿಕೆಯನ್ನು ಹೇಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸೊರಪ್ಪಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನರಸಿಂಹಮೂರ್ತಿ, ಬೇವು ಬೆಲ್ಲ ಕಲಾತಂಡದ ಮುಖ್ಯಸ್ಥ ಚಂದ್ರು, ಕರವೇ ನಗರ ಅಧ್ಯಕ್ಷ ಶಬ್ಬೀರ್‌ಅಹ್ಮದ್, ಪ್ರಧಾನ ಕಾರ್ಯದರ್ಶಿ ಟಿ.ವಿ.ಮಂಜು, ಜಿಲ್ಲಾ ಖಜಾಂಚಿ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಚೊಕ್ಕಹಳ್ಳಿ ದೇವರಾಜ್, ಬಿಟರ್ ಮಂಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕನ್ನಯ್ಯ, ರಕ್ತಕ್ಯಾಂಪ್ ನಾಗರಾಜ್, ಶಾಲಾ ಶಿಕ್ಷಕಿ ಶ್ರೀಲಕ್ಷ್ಮೀ, ನರಸಮ್ಮ, ಊರಿನ ಹಿರಿಯರು ಭಾಗವಹಿಸಿದ್ದರು.