ಸನಾತನ ಧರ್ಮ ಎಲ್ಲರೂ ಪಾಲಿಸಿ: ಕೆ.ಜೆ.ಚಿನ್ನಸ್ವಾಮಿ

| Published : Sep 22 2025, 01:02 AM IST

ಸಾರಾಂಶ

ಸನಾತನ ಧರ್ಮದ ಪ್ರಕಾರ ಶಾಸ್ತ್ರ, ಸಂಪ್ರದಾಯವನ್ನು ಎಲ್ಲರೂ ಪಾಲಿಸುವಂತೆ ಆಗಬೇಕು ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರಸನಾತನ ಧರ್ಮದ ಪ್ರಕಾರ ಶಾಸ್ತ್ರ, ಸಂಪ್ರದಾಯವನ್ನು ಎಲ್ಲರೂ ಪಾಲಿಸುವಂತೆ ಆಗಬೇಕು ಎಂದು ವಾಸವಿ ದೀಕ್ಷಾ ಸಮಿತಿಯ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ ಕರೆ ನೀಡಿದರು.ಕುಶಾಲನಗರದ ವಾಸವಿ ದೀಕ್ಷಾ ಸಮಿತಿಯ ನೇತೃತ್ವದಲ್ಲಿ ಆರ್ಯವೈಶ್ಯ ಮಂಡಳಿಯ ಸಹಯೋಗದಲ್ಲಿ ವಾಸವಿ ಮಹಲ್ ನಲ್ಲಿ ಪಂಚಾಂಗ ಕಲಿಕಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆರ್ಯವೈಶ್ಯರು ಪಂಚಾಂಗ ಮತ್ತು ಕುಂಡಲಿಯ ಮೇಲೆ ಅಪಾರ ಭಕ್ತಿ ಮತ್ತು ನಂಬಿಕೆ ಹೊಂದಿದ್ದೇವೆ. ಅದನ್ನು ಕಲಿಸಲು ಆರ್ಯವೈಶ್ಯ ಮಹಾಸಭಾ ಶಂಕರ್ ಬಾಂಡ್ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ತರಬೇತಿ ಕೊಡುತ್ತಿರುವುದನ್ನು ಅರಿತು ನಮ್ಮ ಊರಿನ ಜನರಿಗೂ ಅದರ ಪ್ರಯೋಜನ ದೊರಕಿಸುವ ಸದ್ದುದೇಶದಿಂದ ಈ ತರಬೇತಿ ಕಾರ್ಯಾಗಾರ ಆಯೋಜಿಸಿದ್ದೇವೆ ಎಂದು ಹೇಳಿದರು.ಕನ್ನಿಕಾ ವಿಎಸ್ಎಸ್ಎನ್ ಅಧ್ಯಕ್ಷ ಬಿ.ಅಮೃತ್ ರಾಜ್ ಮಾತನಾಡಿ, ಇಂತಹ ಸಣ್ಣಪುಟ್ಟ ಕಾರ್ಯಾಗಾರಗಳಿಂದ ಧರ್ಮದ ಉಳಿವಿಗೆ ಕಾರಣವಾಗುತ್ತದೆ. ಆಚರಣೆಗಳ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸಿಕೊಳ್ಳುವ ಅವಕಾಶ ದೊರೆತಿದೆ ಎಂದು ಹೇಳಿದರು.ಕೊಡಗು ಜಿಲ್ಲಾ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ, ಕುಶಾಲನಗರದ ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷ ಬಿ.ಎಲ್.ಅಶೋಕ್ ಕುಮಾರ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವತಿಯರ ಮಂಡಳಿಯ ಅಧ್ಯಕ್ಷೆ ಅನುಷಾ ಅರ್ಜುನ್, ವಾಸವಿ ದೀಕ್ಷಾ ಸಮಿತಿಯ ಕಾರ್ಯದರ್ಶಿ ವಾಣಿಶ್ರೀ, ಖಜಾಂಚಿ ಬಿ.ಎಲ್.ಸತೀಶ್, ನಿರ್ದೇಶಕರಾದ ಕೃಷ್ಣಮೂರ್ತಿ, ಕೆ.ಎಸ್.ನಾಗೇಶ್, ನಾಗಮಣಿ ಮತ್ತಿತರರು ಇದ್ದರು.