ಶರಣ ಅಪ್ಪಣ್ಣನ ತತ್ವಾದರ್ಶ ಪ್ರತಿಯೊಬ್ಬರು ಪಾಲಿಸಿ

| Published : Jul 12 2025, 12:32 AM IST

ಸಾರಾಂಶ

ತಮ್ಮ ಅಪಾರವಾದ ಜ್ಞಾನದಿಂದ ಎಲ್ಲಾ ಶರಣರ ಮೆಚ್ಚುಗೆಗೆ ಪಾತ್ರರಾಗಿ ನಿಜ ಸುಖಿ ಅಪ್ಪಣ್ಣ ಎಂಬ ಬಿರುದು ಪಡೆದಿದ್ದರು

ಕನ್ನಡಪ್ರಭ ವಾರ್ತೆ ಲೋಕಾಪುರ

ಶಿವಶರಣ ಹಡಪದ ಅಪ್ಪಣ್ಣನವರ ಆದರ್ಶ ಗುಣ, ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಮಕ್ಕಳ ಸಾಹಿತ್ಯ ಪರಿಷತ್ ಲೋಕಾಪುರ ವಲಯ ಘಟಕದ ಅಧ್ಯಕ್ಷ ಡಾ.ಸಂತೋಷ ಶೆಟ್ಟರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಅಪ್ಪಣ್ಣನವರ ೮೯೧ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ತಮ್ಮ ವೃತ್ತಿ ಕ್ಷೌರಿಕ ಕಾರ್ಯ ಮಾಡುತ್ತ ಪ್ರತಿಯೊಬ್ಬ ಹಡಪದ ಸಮಾಜದ ಬಾಂಧವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು.

ಶಿಕ್ಷಕ ರಾಜಶೇಖರ ಮುತ್ತಿನಮಠ ಮಾತನಾಡಿ, ಬಸವಣ್ಣನವರು ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದರು. ತಮ್ಮ ಅಪಾರವಾದ ಜ್ಞಾನದಿಂದ ಎಲ್ಲಾ ಶರಣರ ಮೆಚ್ಚುಗೆಗೆ ಪಾತ್ರರಾಗಿ ನಿಜ ಸುಖಿ ಅಪ್ಪಣ್ಣ ಎಂಬ ಬಿರುದು ಪಡೆದಿದ್ದರು. ಅಪ್ಪಣ್ಣನವರು ಮಾಡಿದ ಚಿಂತನೆ, ಸೇವೆ, ವಚನಗಳ ಆಶಯ ಇವತ್ತಿನ ಜನಾಂಕ್ಕೆ ಅರಿತು ಆಚರಿಸಬೇಕಾಗಿದೆ ಎಂದರು.

ಹಡಪದ ಸಮಾಜದ ಅಧ್ಯಕ್ಷ ಸದಾಶಿವ ನಾವ್ಹಿ ಮಾತನಾಡಿ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ನಮ್ಮ ಸಮುದಾಯ ಮುಂದೆ ಬರಬೇಕು. ಪಟ್ಟಣದಲ್ಲಿ ನಮ್ಮ ಸಮುದಾಯದ ಭವನ ಅರ್ಧಕ್ಕೆ ನಿಂತಿದ್ದು ಸರ್ಕಾರ ಹೆಚ್ಚಿನ ಅನುದಾನ ಮಂಜೂರು ಮಾಡಿ ಪೂರ್ಣಗೊಳಿಸಬೇಕು. ಹಡಪದ ಸಮಾಜವನ್ನು ಆರ್ಥಿಕವಾಗಿ ಮೇಲೇತ್ತಲು ಸರಕಾರ ಕೆಲಸ ಮಾಡಬೇಕು ಎಂದು ಹೇಳಿದರು.

ದಿವ್ಯ ಸಾನಿಧ್ಯವನ್ನು ಎಸ್.ಎನ್.ಹಿರೇಮಠ ಗುರುಗಳು ವಹಿಸಿದ್ದರು. ಪಟ್ಟಣದ ಮುಖಂಡರಾದ ವ್ಹಿ.ಎಂ.ತೆಗ್ಗಿ, ಯಮನಪ್ಪ ಹೊರಟ್ಟಿ, ನೀಲೇಶ ಬನ್ನೂರ, ಲೋಕಣ್ಣಾ ಉಳ್ಳಾಗಡ್ಡಿ, ಸದಾಶಿವ ಉದಪುಡಿ, ರವಿ ಬೋಳಿಶೆಟ್ಟಿ, ಕುಮಾರ ಪತ್ತಾರ, ಶಾಂತೇಶ ಬೋಳಿಶೆಟ್ಟಿ, ಗೋವಿಂದಪ್ಪ ಕೌಲಗಿ, ಹೊಳಬಸು ಕಾಸರ, ಬೀರಪ್ಪ ಮಾಯಣ್ಣವರ, ಅಲ್ಲಾಭಕ್ಷ ಯಾದವಾಡ, ಮಹೇಶ ಹುಗ್ಗಿ, ಮಾರುತಿ ರಂಗಣ್ಣವರ, ಮುತ್ತಪ್ಪ ಚೌಧರಿ, ಮುತ್ತಪ್ಪ ಪತ್ತಾರ, ಚಿನ್ಮಯ ಉದಪುಡಿ, ಶಿವಪ್ಪ ಚೌಧರಿ, ಪ್ರಭು ಬೋಳಿಶೆಟ್ಟಿ, ಹಡಪದ ಸಮಾಜದ ಉಪಾಧ್ಯಕ್ಷ ಚಂದ್ರಶೇಖರ ಸೊಲ್ಲಾಪುರ, ಕಾರ್ಯದರ್ಶಿ ರವಿ ಹಡಪದ, ಖಜಾಂಜಿ ಶಿವು ನಾವ್ಹಿ, ಮುಖಂಡರಾದ ದಾನಪ್ಪ ಹಡಪದ, ಪತ್ರೆಪ್ಪ ಹಡಪದ, ಮಂಜುನಾಥ ನಾವ್ಹಿ, ಶಂಕರ ಸೊಲ್ಲಾಪುರ, ಕಾಶಿನಾಥ ನಾವ್ಹಿ, ಕೆ.ಎಸ್.ಬೂದಿಹಾಳ, ಸಿದ್ದಪ್ಪ ಹಡಪದ, ವಿಠ್ಠಲ ನಾವ್ಹಿ, ಶಿವು ನಾವ್ಹಿ, ನಾಗರಾಜ ಸೊಲ್ಲಾಪುರ, ಈರಣ್ಣಾ ಯರಗಟ್ಟಿ, ರಂಗಪ್ಪ ಹಡಪದ, ಅಭಿಷೇಕ ನಾವ್ಹಿ, ಬುಜಂಗ ಹಡಪದ, ಸಿದ್ದಪ್ಪ ಮುತ್ತೂರ ಇನ್ನಿತರರ ಇದ್ದರು.