ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ: ಡಾ. ಅನಿತಾ ರಾವ್

| Published : Aug 19 2024, 12:47 AM IST

ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ: ಡಾ. ಅನಿತಾ ರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಮೇಲ್ನೋಟಕ್ಕೆ ಗೋಚರವಾಗದ ಎಷ್ಟೋ ರೋಗಲಕ್ಷಣಗಳು ತಪಾಸಣೆ ಮಾಡಿಸಿಕೊಂಡಾಗ ಗೋಚರವಾಗುತ್ತದೆ. ಪ್ರತಿಯೊಬ್ಬರು ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಲಯನ್ಸ್ ಕ್ಯಾಬಿನೆಟ್ ಸದಸ್ಯೆ ಡಾ. ಅನಿತಾ ರಾವ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕೊಪ್ಪ

ಮೇಲ್ನೋಟಕ್ಕೆ ಗೋಚರವಾಗದ ಎಷ್ಟೋ ರೋಗಲಕ್ಷಣಗಳು ತಪಾಸಣೆ ಮಾಡಿಸಿಕೊಂಡಾಗ ಗೋಚರವಾಗುತ್ತದೆ. ಪ್ರತಿಯೊಬ್ಬರು ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಲಯನ್ಸ್ ಕ್ಯಾಬಿನೆಟ್ ಸದಸ್ಯೆ ಡಾ. ಅನಿತಾ ರಾವ್ ಹೇಳಿದರು. ನವಚೈತ್ರ ಆರೋಗ್ಯ ಕಾಳಜಿ ೧೬೫ ಹಾಗೂ ೭೮ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಕೊಪ್ಪ ಸಹ್ಯಾದ್ರಿ, ಕೊಪ್ಪ ಕಸಾಪ, ಶ್ರೀಕ್ಷೇತ್ರ ಧ.ಗ್ರಾ. ಯೋಜನೆ, ಬಿಸಿ ಟ್ರಸ್ಟ್ (ರಿ.) ಕೊಪ್ಪ, ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಪ್ಪ ಪುರಭವನದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಉಚಿತ ಶಿಬಿರ ಎನ್ನುವ ತಾತ್ಸಾರ ಬಿಟ್ಟು ಅಪಪ್ರಚಾರಗಳಿಗೆ ಕಿವಿಗೊಡದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಮನುಷ್ಯನ ದೇಹದಲ್ಲಿ ಕಣ್ಣು ಪ್ರಮುಖ ಅಂಗ ಗ್ಲುಕೋಮಾ, ಕಣ್ಣಿನ ಪೊರೆ, ಮೆಳ್ಳೆಗಣ್ಣು, ಕಣ್ಣಿನ ಹುಣ್ಣು, ಕಣ್ಣಿನ ನರಗಳ ಸಮಸ್ಯೆ, ಅತಿಯಾಗಿ ಕಂಪ್ಯೂಟರ್ ಹಾಗೂ ಮೊಬೈಲ್ ವೀಕ್ಷಣೆಯಿಂದ ಬರುವ ಸಮಸ್ಯೆಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಲು ಶಿಬಿರ ವರದಾನ ಎಂದರು.ಲಯನ್ಸ್ ಸಹ್ಯಾದ್ರಿ ಅಧ್ಯಕ್ಷ ಜಯಂತ್, ನವಚೈತ್ರ ವೇದಿಕೆ ಉಪಾಧ್ಯಕ್ಷ ಸಂತೋಷ್ ಕುಲಾಸೋ, ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಸ್.ಎಸ್., ಕಜಾಪ ತಾಲೂಕು ಅಧ್ಯಕ್ಷ ಬಿ.ಎಚ್. ದಿವಾಕರ್ ಭಟ್, ಕೌರಿ ಎಸ್ಟೇಟ್ ಮಾಲೀಕ ಎಲ್.ಎಂ.ಪ್ರಕಾಶ್, ಕಸಾಪ ತಾಲೂಕು ಅಧ್ಯಕ್ಷ ಜೆ.ಎಂ.ಶ್ರೀಹರ್ಷ, ಆಟೋ ಚಾಲಕರ ಸಂಘದ ಅಧ್ಯಕ್ಷ ಯು.ಪಿ.ವಿಜಯ್ ಕುಮಾರ್, ಧ.ಗ್ರಾ.ಯೋಜನೆ ಸೇವಾಪ್ರತಿನಿಧಿ ರಾಘವೇಂದ್ರ ಪೂಜಾರಿ ಮುಂತಾದವರು ಮಾತನಾಡಿದರು. ಶಿಬಿರದಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಜನ, ರಕ್ತದೊತ್ತಡ, ಮಧುಮೇಹ, ಕಣ್ಣಿನ ತಪಾಸಣೆ ಮಾಡಿಸಿಕೊಂಡರು.

ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ೯ ಜನರಲ್ಲಿ ಐವರನ್ನು ಪ್ರಸಾದ್ ಆಸ್ಪತ್ರೆ ವಾಹನದಲ್ಲಿ ಉಡುಪಿಗೆ ಕರೆದೊಯ್ಯಲಾಯಿತು. ನವಚೈತ್ರ ವೇದಿಕೆ ಅಧ್ಯಕ್ಷ ನವಚೈತ್ರ ಹಮೀದ್, ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಸ್.ಎಸ್., ಸಂಚಾಲಕರಾದ ಫಿಲಿಪ್ ಸೆರಾವೋ, ಚೇತನ್ ಕುದ್ರೆಗುಂಡಿ, ಅಮರನಾಥ ಶೆಟ್ಟಿ, ಲಯನ್ಸ್ ಸಂಸ್ಥೆಯ ಕೆ.ಆರ್. ಗೋಪಾಲಗೌಡ, ಪಪ. ಸದಸ್ಯರಾದ ಇಸ್ಮಾಯಿಲ್, ರೇಖಾ, ಸುಜಾತ, ಗಾಯತ್ರಿ ಶೆಟ್ಟಿ, ಆರೋಗ್ಯ ಮಿತ್ರ ಸುರೇಶ್ ಕಟಾರ್, ಕೊಪ್ಪ ಸಾರ್ವಜನಿಕ ಆಸ್ಪತ್ರೆ ಎನ್.ಸಿ.ಡಿ. ಘಟಕದ ಸಿಬ್ಬಂದಿ, ಕೊಪ್ಪ ಆಟೋ ಚಾಲಕರು ಹಾಗೂ ಇತರೆ ಸಂಘಸಂಸ್ಥೆ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಇದ್ದರು.