ಪ್ರತಿಯೊಬ್ಬರು ನಮ್ಮ ಮಾತೃ ಭಾಷೆ ಕನ್ನಡಕ್ಕೆ ಮೊದಲು ಆದ್ಯತೆ ನೀಡಬೇಕು : ಸಿ.ಸಿ. ಪಾಟೀಲ

| Published : Nov 02 2024, 01:44 AM IST / Updated: Nov 02 2024, 05:47 AM IST

ಸಾರಾಂಶ

ಹಲವಾರು ಅನ್ಯ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುವ ಮೊದಲು ನಮ್ಮ ಮಾತೃ ಭಾಷೆ ಕನ್ನಡಕ್ಕೆ ಮೊದಲು ಆದ್ಯತೆ ನೀಡಬೇಕು

ನರಗುಂದ: ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ಒಂದೇ ದಿನಕ್ಕೆ ಸೀಮಿತವಾಗಿರದೇ ವರ್ಷ ಪೂರ್ತಿ ಕನ್ನಡ ಭಾಷೆಯ ಅಭಿಮಾನಿಗಳಾಗಿರಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಪುರಸಭೆ ಆವರಣದಲ್ಲಿ ಏರ್ಪಡಿಸಿದ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಕರ್ನಾಟಕವನ್ನು ಒಂದಗೂಡಿಸಲು ಹಲವಾರು ಮಹನೀಯರು ಕರ್ನಾಟಕ ಏಕೀಕರಣದ ಹೋರಾಟ ಮಾಡಿದ್ದರಿಂದ ಇಂದು ನಾವು ಅಖಂಡ ಕರ್ನಾಟಕ ರಾಜ್ಯ ಕಾಣಲು ಸಾಧ್ಯವಾಗಿದೆ. ಇಂದು ಹಲವಾರು ಅನ್ಯ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುವ ಮೊದಲು ನಮ್ಮ ಮಾತೃ ಭಾಷೆ ಕನ್ನಡಕ್ಕೆ ಮೊದಲು ಆದ್ಯತೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ತಹಸೀಲ್ದಾರ್‌ ಶ್ರೀಶೈಲ ತಳವಾರ, ಶಿಕ್ಷಣಾಧಿಕಾರಿ ಡಾ.ಹೂಗಾರ, ನಿವೃತ್ತ ಕನ್ನಡ ಉಪನ್ಯಾಸಕ ಎಂ.ಎಸ್. ಯಾವಗಲ್, ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ, ಪುರಸಭೆ ಅಧಿಕಾರಿ ಪಿ.ಕೆ. ಗುಡದಾರಿ, ಸಿಪಿಐ ಮಂಜುನಾಥ ನಡುವಿನಮನಿ, ಸಿದ್ದಪ್ಪ ಯಲಿಗಾರ, ಕರವೇ ತಾಲೂಕಾಧ್ಯಕ್ಷ ನಬಿಸಾಬ್‌ ಕಿಲ್ಲೇದಾರ, ಮುತ್ತು ರಾಯರಡ್ಡಿ, ಎನ್.ಆರ್. ನಿಡಗುಂದಿ, ಶಿಕ್ಷಕ ಎಂ.ಡಿ. ಪಾಟೀಲ ಸೇರಿದಂತೆ ಮುಂತಾದವರು ಇದ್ದರು.