ಪ್ರತಿಯೊಬ್ಬರು ಸಂವಿಧಾನದ ಆಶಯ ಅರಿತುಕೊಳ್ಳಿ: ಡಾ.ಅಜಯ್‌ಸಿಂಗ್

| Published : Feb 20 2024, 01:49 AM IST

ಪ್ರತಿಯೊಬ್ಬರು ಸಂವಿಧಾನದ ಆಶಯ ಅರಿತುಕೊಳ್ಳಿ: ಡಾ.ಅಜಯ್‌ಸಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ರಚನೆಯಾಗಿ 75 ವರ್ಷ ಪೂರೈಸುತ್ತಿರುವ ಪ್ರಯುಕ್ತ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ

ಕನ್ನಡಪ್ರಭ ವಾರ್ತೆ ಜೇವರ್ಗಿ

ದೇಶದ ಪ್ರತಿಯೊಬ್ಬರು ಸಂವಿಧಾನದ ಆಶಯ ಅರಿಯುವಂತಾಗಬೇಕು. ಸಂವಿಧಾನವನ್ನು ಓದುವುದರಿಂದ ದೇಶದ ಕಾನೂನು, ನಿಯಮಗಳು, ಉದ್ದೇಶ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿತುಕೊಳ್ಳಲು ಸಾಧ್ಯ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಹೇಳಿದರು.

ಸಂವಿಧಾನ ರಚನೆಯಾಗಿ 75 ವರ್ಷ ಪೂರೈಸುತ್ತಿರುವ ಪ್ರಯುಕ್ತ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾನ್ ಮಾನವತವಾದಿ ಅಂಬೇಡ್ಕರ್ ಆದರ್ಶ ಗುಣಗಳು ಜಗತ್ತಿಗೆ ಮಾದರಿ ಆಗಿವೆ. ಅವರ ಸಮಾಜ ಕಳಕಳಿ ನಿಜಕ್ಕೂ ನಮಗೆ ಮಾದರಿ. ಅವುಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ದೇಶದಲ್ಲಿ ನೂರಾರು ಧರ್ಮಗಳು, ಜಾತಿಗಳು ಇದ್ದರೂ ಅವರೆಲ್ಲರೂ ಸಮಾನ ಮನಸ್ಸಿನಿಂದ ಬಾಳುವಂತೆ ಡಾ.ಅಂಬೇಡ್ಕರ್ ಸಂವಿಧಾನ ಮೂಲಕ ತಿಳಿ ಹೇಳಿದ್ದಾರೆ. ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಬಾಬಾಸಾಹೇಬರು ಸರಳ ಜೀವನ ನಡೆಸಿದವರು. ಅವರು ಎಂದಿಗೂ ವೈಭವದ ಜೀವನ ನಡೆಸಲಿಲ್ಲ. ವಿದೇಶದಲ್ಲಿ ಅಭ್ಯಾಸ ಮಾಡಿದರೂ ನಮ್ಮ ದೇಶದ ಸಂಸ್ಕೃತಿ ಪಾಲನೆ ಮಾಡಿ, ದೇಶದ ಜನರಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸೊನ್ನ ವಿರಕ್ತ ಮಠದ ಪೀಠಾಧಿಪತಿ ಡಾ.ಶಿವಾನಂದ ಮಹಾಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ, ಡಾ.ಸಿದ್ದು ಪಾಟೀಲ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಮೊನ್ನಮ್ಮ ಸುತಾರ್, ಗ್ರಾಪಂ ಅಧ್ಯಕ್ಷೆ ರುದ್ರಾಕ್ಷಿ ಮಳಗಿ, ಉಪಾಧ್ಯಕ್ಷ ವಿಠಲ ಹಟ್ಟಿ, ಅಭಿವೃದ್ಧಿ ಅಧಿಕಾರಿ ಅರವಿಂದ ಚವ್ಹಾಣ, ಸುರೇಶ ಪಾತ್ರೋಟ, ಶಾಂತಪ್ಪ ದೇವರಮನಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.