ಮಾದಕ ವಸ್ತುಗಳ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿ

| Published : Aug 20 2024, 12:50 AM IST

ಸಾರಾಂಶ

ಅಮಲು ಮುಕ್ತ ಸಕಲೇಶಪುರಕ್ಕಾಗಿ ಆಯೋಜಿಸಲಾಗಿದ್ದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ನಾಗರೀಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಯುವಜನಾಂಗಕ್ಕೆ ಮಾದಕ ವಸ್ತುಗಳು ಸಿಗದಂತೆ ಮಾದಕ ವಸ್ತು ಮುಕ್ತ ಸಮಾಜ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಸುಲಭವಾಗಿ ವಿದ್ಯಾರ್ಥಿಗಳಿಗೆ ನಶೆ ಬರುವ ಪದಾರ್ಥಗಳು ಬಹುಬೇಗನೆ ಕೈಗೆ ಸಿಗುವಂತಾಗುತ್ತಿದೆ ಎಂದು ವಿಷಾದಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಯುವಜನಾಂಗಕ್ಕೆ ಮಾದಕ ವಸ್ತುಗಳು ಸಿಗದಂತೆ ಮಾದಕ ವಸ್ತು ಮುಕ್ತ ಸಮಾಜ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಹೇಳಿದರು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಅಮಲು ಮುಕ್ತ ಸಕಲೇಶಪುರಕ್ಕಾಗಿ ಆಯೋಜಿಸಲಾಗಿದ್ದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ನಾಗರೀಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಸುಲಭವಾಗಿ ವಿದ್ಯಾರ್ಥಿಗಳಿಗೆ ನಶೆ ಬರುವ ಪದಾರ್ಥಗಳು ಬಹುಬೇಗನೆ ಕೈಗೆ ಸಿಗುವಂತಾಗುತ್ತಿದೆ. ವಿದ್ಯಾರ್ಥಿಗಳು ಈ ತರದ ಚಟಗಳಿಗೆ ಬಿದ್ದು ತಮ್ಮ ಸಂಪೂರ್ಣ ಭವಿಷ್ಯವನ್ನೇ ಹಾಳು ಮಾಡಿಕೊಂಡು ಮನೆಯಲ್ಲಿ ಹಣಕ್ಕಾಗಿ ತಂದೆ ತಾಯಿಗೆ ಹಿಂಸಿಸಿ, ಮನೆಯ ಪದಾರ್ಥಗಳನ್ನು ಎಂದರಲ್ಲಿ ಮಾರಿ ಹಣ ಪಡೆದುಕೊಂಡು ನಶೆಯ ಚಟಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ಕೊಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಡ್ರಗ್ಸ್ ಜಾಲಕ್ಕೆ ಶ್ರೀಮಂತರ ಮಕ್ಕಳೇ ಹೆಚ್ಚು ಬಲಿಯಾಗುತ್ತಿದ್ದು ಹಣದ ದುರಾಸೆಗಾಗಿ ಯುವತಿಯರನ್ನು ಸಹ ಡ್ರಗ್ಸ್ ಜಾಲದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ವಿದ್ಯಾರ್ಥಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ವ್ಯಸನಿಗಳನ್ನು ಮನುಷ್ಯರನ್ನಾಗಿ ಮಾಡುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸೋಣ.ಈ ನಿಟ್ಟಿನಲ್ಲಿ ಆಗಸ್ಟ್ ೨೧ರ ಬುಧವಾರ ಬೆಳಗ್ಗೆ ೧೧:೩೦ಕ್ಕೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಮಲು ಮುಕ್ತ ಸಕಲೇಶಪುರ ಕಾರ್ಯಕ್ರಮಕ್ಕಾಗಿ ನಡೆಯುವ ಸಭೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧಕ್ಷ ಜೈಭೀಮ್ ಮಂಜು, ಪತ್ರಕರ್ತರಾದ ಮಲ್ನಾಡ್ ಮೆಹಬೂಬ, ಯೋಗೇಶ್, ಪ್ರವೀಣ್ ನಾಯ್ಡು , ಮಲ್ನಾಡ್ ಜಾಕೀರ್‌ ಸೇರಿದಂತೆ ಇತರರು ಹಾಜರಿದ್ದರು.