ಜೀತಪದ್ಧತಿ ಕಾಯ್ದೆ ಬಗ್ಗೆ ಎಲ್ಲರೂ ಅರ್ಥೈಸಿಕೊಳ್ಳಿ: ನ್ಯಾಯಾಧೀಶರು ಹೊನೋಲೆ

| Published : Feb 11 2024, 01:48 AM IST

ಜೀತಪದ್ಧತಿ ಕಾಯ್ದೆ ಬಗ್ಗೆ ಎಲ್ಲರೂ ಅರ್ಥೈಸಿಕೊಳ್ಳಿ: ನ್ಯಾಯಾಧೀಶರು ಹೊನೋಲೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಸಂಸತ್ತು ಜೀತ ಪದ್ಧತಿ ರದ್ದತಿ ಕಾಯ್ದೆಯನ್ನು 1976ರಲ್ಲಿ ದೇಶದಾದ್ಯಂತ ಜಾರಿ ಮಾಡಿದೆ. ಜೀತಕ್ಕಾಗಿ ವ್ಯಕ್ತಿ ಹಾಗೂ ಮಕ್ಕಳನ್ನು ದುಡಿಸಿಕೊಳ್ಳುವುದು ಅಮಾನವೀಯ ಮತ್ತು ಕ್ರಿಮಿನಲ್ ಅಪರಾಧವೆಂದು ಕಾಯ್ದೆಯಲ್ಲಿ ಉಲ್ಲೇಖಿಸಿ 1976 ಫೆ.9ರಂದು ಕಾಯ್ದೆಗೆ ಘನವೆತ್ತ ಭಾರತದ ರಾಷ್ಟ್ರಪತಿಗಳು ಅಂಕಿತ ಹಾಕಿರುತ್ತಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜೀತ ಪದ್ಧತಿ ಪ್ರಕರಣಗಳು ಕಂಡುಬರುತ್ತಿವೆ. ಸಾರ್ವಜನಿಕರಲ್ಲಿ ಈ ಪದ್ಧತಿ ಕುರಿತು ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಫೆ.18ರಂದು ಸರ್ಕಾರವು ಜೀತ ಪದ್ಧತಿ ನಿರ್ಮೂಲನಾ ದಿನವನಾಗಿ ಆಚರಿಸಲಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ರವೀಂದ್ರ ಹೊನೋಲೆ ಅವರು ತಿಳಿಸಿದರು.

ಸಮೀಪದ ರಾಮಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಶಿಕ್ಷಣ ಇಲಾಖೆ ಯಾದಗಿರಿ, ಸರ್ಕಾರಿ ಪ್ರೌಢಶಾಲೆ ರಾಮಸಮುದ್ರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ನಿಮಿತ್ತ ಪ್ರತಿಜ್ಞಾ ಸ್ವೀಕರಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇ ಬುನಾದಿ ಮೇಲೆ ಭಾರತ ಸಂಸತ್ತು ಜೀತ ಪದ್ಧತಿ ರದ್ದತಿ ಕಾಯ್ದೆಯನ್ನು 1976ರಲ್ಲಿ ದೇಶದಾದ್ಯಂತ ಜಾರಿ ಮಾಡಿದೆ. ಜೀತಕ್ಕಾಗಿ ವ್ಯಕ್ತಿ ಹಾಗೂ ಮಕ್ಕಳನ್ನು ದುಡಿಸಿಕೊಳ್ಳುವುದು ಅಮಾನವೀಯ ಮತ್ತು ಕ್ರಿಮಿನಲ್ ಅಪರಾಧವೆಂದು ಕಾಯ್ದೆಯಲ್ಲಿ ಉಲ್ಲೇಖಿಸಿ 1976 ಫೆ.9ರಂದು ಕಾಯ್ದೆಗೆ ಘನವೆತ್ತ ಭಾರತದ ರಾಷ್ಟ್ರಪತಿಗಳು ಅಂಕಿತ ಹಾಕಿರುತ್ತಾರೆ. ಅಂದಿನಿಂದ ಜೀತ ಪದ್ಧತಿ ರದ್ದತಿ ಕಾಯ್ದೆ 1976 ಅನ್ನು ದೇಶದ ಎಲ್ಲಾ ರಾಜ್ಯಗಳಲ್ಲೂ ಆಚರಿಸಲಾಗುತ್ತದೆ ಎಂದರು.

ಪ್ರಧಾನ ಕಾನೂನು ನೆರವು ಅಭಿರಕ್ಷಕರು ಹಾಗೂ ವಕೀಲರಾದ ಅನಂತ್ ರೆಡ್ಡಿ ಮಾತನಾಡಿ, ಅಲ್ಲಲ್ಲಿ ಜೀತ ಪದ್ಧತಿ ಪ್ರಕರಣಗಳು ಕಂಡುಬರುತ್ತಿವೆ. ಸಾರ್ವಜನಿಕರಲ್ಲಿ ಈ ಪದ್ಧತಿ ಕುರಿತು ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಫೆ.18 ರಂದು ಸರ್ಕಾರವು ಜೀತ ಪದ್ಧತಿ ನಿರ್ಮೂಲನಾ ದಿನವನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಕೀಲರಾದ ಶಾಂತಪ್ಪ ಜಾಧವ ಮಾತನಾಡಿ, ಪ್ರತಿಯೊಬ್ಬ ಮಗುವಿಗೆ ಕಾನೂನಿನ ಜ್ಞಾನ ಹೊಂದಿರಬೇಕು. ಭಾರತೀಯ ಸಂವಿಧಾನದ ಅನುಚ್ಛೇದ 23 ಮತ್ತು 24 ವಿವರಿಸಲಾಗಿರುವ ಶೋಷಣೆ ವಿರುದ್ಧ ಹಕ್ಕಿನ ಪ್ರಕಾರ ಒತ್ತಾಯ ಪೂರ್ವಕ ಜೀತ ಹಾಗೂ ಮಾನವ ಕಳ್ಳ ಸಾಗಣೆ, ಮಕ್ಕಳನ್ನು ದುಡಿಸುವುದು, ಶೋಷಿಸುವುದು ಕಾನೂನಿನ ಅನ್ವಯ ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

ಶಾಲಾ ಮುಖ್ಯಗುರು ರಾಜಶೇಖರಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿದ್ದರು. ಶಿಕ್ಷಕರಾದ ರಾಮಣ್ಣ ಚಿಗರಳ್ಳಿ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ನಿರೂಪಿಸಿ, ವಂದಿಸಿದರು.