ಸಾರಾಂಶ
ಸಂಸ್ಥೆಯ ಸದಸ್ಯರು ಹಾಗೂ ಕರವೇ ಸಂಘಟನೆಯಲ್ಲಿ ತೊಡಗಿಸಿಕೊಂಡು ಸೇವಾ ಚಟುವಟಿಕೆ ಮಾಡುತ್ತಿರುವ ಲೋಕೇಶ್ ಕುಮಾರ್ ಮತ್ತು ಪ್ರವೀಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಭಾಷೆಯನ್ನು ಸ್ವಯಂ ಪ್ರೇರಣೆಯಿಂದ ಪ್ರತಿಯೊಬ್ಬರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಬಳಸಬೇಕು ಎಂದು ಲೇಖಕಿ ಡಾ. ಲತಾ ರಾಜಶೇಖರ್ ಅಭಿಪ್ರಾಯಪಟ್ಟರು.ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಂಸ್ಥೆಯ ಸದಸ್ಯರು ಹಾಗೂ ಕರವೇ ಸಂಘಟನೆಯಲ್ಲಿ ತೊಡಗಿಸಿಕೊಂಡು ಸೇವಾ ಚಟುವಟಿಕೆ ಮಾಡುತ್ತಿರುವ ಲೋಕೇಶ್ ಕುಮಾರ್ ಮತ್ತು ಪ್ರವೀಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ದಂತ ವೈದ್ಯ ಡಾ.ಜಿ. ಕಿಶೋರ್ ಅವರು ದಂತ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವರದ್, ಅಂಬಾಡಿ ಮಾಧವ್ ಮತ್ತು ಎ.ವಿ.ಆರ್. ಚಂದ್ರಕುಮಾರ್ ವಹಿಸಿದ್ದರು.
ಸಂಸ್ಥೆ ಅಧ್ಯಕ್ಷ ವಿ. ಶ್ರೀಧರ್, ಕಾರ್ಯದರ್ಶಿ ಬಿ. ಮಲ್ಲಿಕಾರ್ಜುನಪ್ಪ, ಖಜಾಂಚಿ ಎಚ್.ಆರ್. ರವಿಚಂದ್ರ, ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಟಿ.ಎಚ್. ವೆಂಕಟೇಶ್, ಜಿಲ್ಲಾ ಅಧ್ಯಕ್ಷ ಸಿ.ಆರ್. ದಿನೇಶ್, ವಲಯ ಅಧ್ಯಕ್ಷ ಎಚ್.ಸಿ. ಕಾಂತರಾಜು, ಎಚ್.ಕೆ. ಪ್ರಸನ್ನ, ಕೆ.ಟಿ. ವಿಷ್ಣು, ಅರುಣ್ ಸಾಗರ್, ವರದಾ, ರವಿ, ಮಹದೇವ್ ಪ್ರಸಾದ್, ಯಶೋಧಮ್ಮ, ದೀಪಾ, ಅಶ್ವಿನಿ, ರಮ್ಯಾ ಮೊದಲಾದವರು ಇದ್ದರು.