ಸಾರಾಂಶ
ನಗರದ ಎಪಿಎಂಸಿ ಗಣೇಶ ಮಂದಿರದಲ್ಲಿ ಸ್ಥಳೀಯ ದಲಾಲ ವರ್ತಕರ ಸಂಘ ಹಾಗೂ ಕಂಪಾನಿಯೋ ಇವರ ಸಹಯೋಗದಲ್ಲಿ ನಡೆದ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರವನ್ನು ತರಬೇತುದಾರ ಕೌಶಿಕ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಆಧುನಿಕ ಜಗತ್ತಿನಲ್ಲಿ ಮನುಷ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದಾನೆ. ಆದರೆ ಅರೋಗ್ಯವನ್ನು ಕಡೆಗಣಿಸಿ ಅದರ ಬೆನ್ನು ಹತ್ತಿದ್ದು ದುರಾದೃಷ್ಟ. ನಾವು ಏನೇ ಸಾದಿಸಿದರು ಅರೋಗ್ಯ ಸರಿ ಇದ್ದರೆ ಎಲ್ಲವನ್ನು ಪಡೆಯಬಹುದು ಎಂದು ತರಬೇತುದಾರ ಕೌಶಿಕ ಹೇಳಿದರು.ನಗರದ ಎಪಿಎಂಸಿ ಗಣೇಶ ಮಂದಿರದಲ್ಲಿ ಸ್ಥಳೀಯ ದಲಾಲ ವರ್ತಕರ ಸಂಘ ಹಾಗೂ ಕಂಪಾನಿಯೋ ಇವರ ಸಹಯೋಗದಲ್ಲಿ ನಡೆದ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆರೋಗ್ಯದ ಕಡೆಗೆ ಗಮನ ಕೊಡುವುದು ಇಂದಿನ ಅವಶ್ಯಕತೆಯಾಗಿದೆ. ನಮ್ಮ ಬಳಿ ಎಷ್ಟೇ ಹಣ ಇದ್ದರೂ ಆರೋಗ್ಯ ಖರೀದಿಸುವುದು ಅಸಾಧ್ಯ. ಆರೋಗ್ಯದ ಮುಂದೆ ಎಲ್ಲವೂ ನಿಷ್ಪ್ರಯೋಜಕವಾಗಿದೆ ಎಂದು ಹೇಳಿದರು.
ಕಂಪಾನಿಯೋ ಪೂಟ ಪಲ್ಸ್ ಎಂಬುದು ರಕ್ತ ಪರಿಚಲನೆ ಯಂತ್ರವಾಗಿದೆ. ಕಾಲುಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಶಕ್ತಿಯನ್ನು ಹೆಚ್ಚಿಸುತ್ತದೆ. ಕಾಲುಗಳಲ್ಲಿ ಮರುಗಟ್ಟುವಿಕೆ, ಕಾಲುಗಳಲ್ಲಿ ಸೆಳೆತ, ಊತ, ಶೀತ ಪಾದಗಳು, ಕರು ಸ್ನಾಯು ಸೆಳೆತ, ಹೆಪ್ಪುಗಟ್ಟುವಿಕೆ, ಇವುಗಳನ್ನು ತಡೆಗಟ್ಟಲು ತುಂಬಾ ಸಹಕಾರಿಯಾಗಿದೆ ಎಂದರು.ದೇಶಾದ್ಯಂತ ಸುಮಾರು 350 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು.10 ಲಕ್ಷಕ್ಕೂ ಅಧಿಕ ಜನ ಇದರಿಂದ ಪರಿಹಾರ ಕಂಡುಕೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಂಕರ ನಾಗರಾಳ, ನಿಂಗಪ್ಪ ಮಧುರಖಂಡಿ, ಅಶ್ವಥ, ಶ್ರೀಶೈಲ ನುಚ್ಚಿ, ಬಸವರಾಜ ಸುನದೋಳಿ, ಮಲ್ಲಪ್ಪ ಕುಳಲಿ, ವಿಜಯಕುಮಾರ ಬಾಡನವರ, ಸತೀಶ ಸೋರಗಾಂವಿ, ಪೈಗಂಬರ ಪೆಂಡಾರಿ, ಯಲ್ಲಪ್ಪ ಬಾಗೋಜಿ, ಸೇರಿದಂತೆ ಹಲವರು ಇದ್ದರು.