ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಈ ಭಾಗದ ಹಿರಿಯ ರಾಜಕೀಯ ಮುತ್ಸದಿ, ಮಾಜಿ ರಾಜ್ಯಪಾಲ ದಿ. ಬಿ. ರಾಚಯ್ಯ ಸ್ಮಾರಕವು ಅವರ ೧೦೨ನೇ ಜನ್ಮದಿನೋತ್ಸವವಾದ ಆ.೧೦ ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮುರ್ತಿ ತಿಳಿಸಿದರು. ಬಿ. ರಾಚಯ್ಯ ಅವರ ೨೪ನೇ ಸಂಸ್ಮರಣೆ ಅಂಗವಾಗಿ ತಾಲೂಕಿನ ಅಲೂರಿನ ಬಿ. ರಾಚಯ್ಯ ಅವರ ಪುಣ್ಯಭೂಮಿಯಲ್ಲಿ ಕುಟುಂಬ ಸದಸ್ಯರು ಹಾಗೂ ಗಣ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿ, ಮಾತನಾಡಿದರು.
೨೦೧೩ ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೧ ಕೋಟಿ ರು. ನೀಡಿ, ರಾಚಯ್ಯ ಅವರ ಪುಣ್ಯ ಭೂಮಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ನಂತರ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ೫೨ ಲಕ್ಷ ರು. ನೀಡಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ೧.೨೫ ಕೋಟಿ ರು. ನೀಡಿದ್ದರು. ಈಗ ಕಾಮಗಾರಿ ಪೂರ್ಣಗೊಳ್ಳಲು ಮತ್ತೇ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ೨ ಕೋಟಿ ರು. ಬಿಡುಗಡೆ ಮಾಡಿದ್ದು, ಸ್ಮಾರಕ ಪೂರ್ಣಗೊಂಡು ೧೦೨ ನೇ ಜನ್ಮ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ. ರಾಚಯ್ಯ ಅವರ ೧೦೨ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದರು.ಸಂಸ್ಮರಣೊತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಸ್. ಜಯಣ್ಣ, ಜಿ.ಎನ್. ನಂಜುಂಡಸ್ವಾಮಿ ಮಾತನಾಡಿ, ಮಾಜಿ ರಾಜ್ಯಪಾಲ ದಿವಗಂತ ಬಿ. ರಾಚಯ್ಯ ಮೇರು ವ್ಯಕ್ತಿತ್ವಯುಳ್ಳ ಸಜ್ಜನ ರಾಜಕಾರಣಿಗಳು. ಅವರು ನಮ್ಮನ್ನಗಲಿ ೨೪ ವರ್ಷಗಳು ಕಳೆದು ಸಹ ಅವರ ಸಂಸ್ಮರಣೆ ಕಾರ್ಯಕ್ರಮದ ಮೂಲಕ ನೆನಪು ಮಾಡಿಕೊಳ್ಳುವಂತಹ ಶಕ್ತಿಯನ್ನು ಅವರ ನಮ್ಮೆಗೆಲ್ಲ ನೀಡಿ ಹೋಗಿದ್ದಾರೆ. ಇಂಥ ಮಹಾನ್ ಚೇತನದ ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ವಾಗಬೇಕು ಎಂದರು.
ಜಿಪಂ ಮಾಜಿ ಸದಸ್ಯ ಆರ್. ಬಾಲರಾಜು ಮಾತನಾಡಿ, ಬಿ. ರಾಚಯ್ಯನವರ ೨೪ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವರ ಅಭಿಮಾನಿ ಬಂಧುಗಳು. ಹಿತೈಷಿಗಳಿಗೆ ನಮ್ಮ ಕುಟುಂಬ ಚಿರಋಣಿಯಾಗಿದೆ. ರಾಚಯ್ಯನವರಂಥ ತಂದೆಯನ್ನು ಪಡೆದ ನಾವುಗಳು ಪುಣ್ಯವಂತರು ಎಂದರು. ಈ ವೇಳೆ ರಾಚಯ್ಯ ಪುತ್ರಿಯರಾದ ಪ್ರಭಾವತಿ ಬಸವರಾಜು, ತ್ರೀವೇಣಿ ಬಿ. ಬಿ. ನಿಂಗಯ್ಯ, ವರಲಕ್ಷ್ಮಿ ವೆಂಕಟೇಶ್‌ಪ್ರಸಾದ್, ಮಂಜುಳಾ ಕೃಷ್ಣಮೂರ್ತಿ, ಆರ್.ಕೆ. ಶ್ರೀವರ್ಧನ್, ಡಾ. ರೋಷಿಣಿ, ಪ್ರದೀಪ್ ಕುಮಾರ್, ಡಾ. ಹೊಂಗನೂರು ನಂಜಯ್ಯ, ಹೊಂಗನೂರು ಚೇತನ್ ಹಾಗೂ ಕುಟುಂಬದವರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಮಾಜಿ ಶಾಸಕರಾದ ಎಸ್. ಜಯಣ್ಣ, ಜಿ.ಎನ್. ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ತೋಟೇಶ್, ಹೊಂಗನೂರು ಚಂದ್ರು, ಮಹಮದ್ ಅಸ್ಗರ್, ಮುಖಂಡರಾದ ವೆಂಕಟರಮಣಸ್ವಾಮಿ ( ಪಾಪು) ಆರ್. ಮಹದೇವ್, ನಂಜುಂಡಸ್ವಾಮಿ, ಮಧುವನಹಳ್ಳಿ ಶಿವಕುಮಾರ್, ಮುಖಂಡರಾದ ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ಮಾಜಿ ರೇಖಾ ರಮೇಶ್, ಸದಸ್ಯ ಸುಶೀಲಾ ಶಾಂತರಾಜು, ಸದಸ್ಯರಾದ ಸುಮ ಸುಬ್ಬಣ್ಣ, ಜಿ.ಪಂ. ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾಜಿ ಸದಸ್ಯರಾದ ಸದಾಶಿವಮೂರ್ತಿ, ಕೊಪ್ಪಾಳಿ ಮಹದೇವನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಆಲ್ದೂರು ರಾಜಶೇಖರ್. ಸದಸ್ಯ ಅಲೂರು ಪ್ರದೀಪ್, ಸೋಮೇಶ್ವರ್, ಎ.ಸಿ. ಪ್ರವೀಣ್, ಕಂದಹಳ್ಳಿ ನಂಜುಂಡಸ್ವಾಮಿ, ಹೊಂಗನೂರು ಪುಟ್ಟಸ್ವಾಮಿ, ಅಣಗಳ್ಳಿ ಬಸವರಾಜು, ಕೆಲ್ಲಂಬಳ್ಳಿ ಸೋಮಶೇಖರ್, ಮೋಹನ್ ನಗು, ಅಕ್ಷಯ್, ಮಣಿಕಂಠ್, ಮೂಕಹಳ್ಳಿ ಡಿ. ಮಹೇಶ್, ಪ್ರಭುಪ್ರಸಾಧ್, ಸಿದ್ದಯ್ಯನಪುರ ಗೋವಿಂದರಾಜು, ಎಸ್. ಲಕ್ಷ್ಮಿನರಸಿಂಹ, sಸೋಮಶೇಖರ ಬಿಸಲ್ವಾಡಿ, ರವಿಚಂದ್ರ ಕಹಳೆ, ಎಂ.ಎಸ್. ಮಾದಯ್ಯ, ಉಮ್ಮತ್ತೂರು ಶಿವಣ್ಣ, ಮಹದೇವಪ್ರಸಾದ್ ಫಸಿ, ಅನ್ಸಾರ ಬೇಗ್ ಇದ್ದರು.