ಕನ್ನಡಪ್ರಭ ವಾರ್ತೆ ಪಾವಗಡ
ಈ ದೇಶ ಕಂಡ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ ಅವರ ಜನ್ಮದಿನದ ಅಂಗವಾಗಿ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಸೋಮವಾರ ಪಟ್ಟಣದ ಖಾಸಗಿ ಹಾಲ್‌ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು.ಇದೇ ವೇಳೆ ಜೆಡಿಎಸ್ ಘಟಕದ ಮಾಜಿ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ ಮಾತನಾಡಿ, ಹಿರಿಯ ರಾಜಕಾರಣಿ ನಮ್ಮೆಲ್ಲರ ನಾಯಕರಾದ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ಪ್ರಥಮ ಪ್ರಧಾನಿ ಸ್ಥಾನ ಅಲಂಕರಿಸಿದ ಕನ್ನಡ ಕುವರಾಗಿದ್ದು, ರೈತರ ಕಣ್ಮಣಿ, ಅಭಿವೃದ್ಧಿಯ ಹರಿಕಾರರಾಗಿ ಈ ದೇಶದ ಸೇವೆ ಸಲ್ಲಿಸಿದ್ದಾರೆ. ಇವರು ಪಿಎಂ ಹಾಗೂ ಇತರೆ ಹುದ್ದೆಗಳ ಅಧಿಕಾರದ ಅವಧಿಯಲ್ಲಿ ಅನೇಕ ಯೋಜನೆ ಜಾರಿಪಡಿಸುವ ಮೂಲಕ ದೇಶದ ಜನತೆಯ ಹಿತ ಕಾಪಾಡಿದ್ದಾರೆ. ಮಾಜಿ ಪ್ರಧಾನಿಗಳಾದ ದೇವೇಗೌಡ ಅವರ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಅವರು ಶತಾಯಿಷಿಗಳಾಗಿ ಇನ್ನೂ ಹೆಚ್ಚಿನ ಕಾಲ ನಮ್ಮ ಜತೆ ಇರಬೇಕು. ಅವರಿಗೆ ಉತ್ತಮ ಆರೋಗ್ಯ ಅಯಸ್ಸು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ನಮ್ಮ ಹಿರಿಯ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡ ಅವರು, ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳವರಾಗಿದ್ದು, ಪ್ರಧಾನಿಗಳಾಗಿದ್ದ ವೇಳೆ ಈ ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅನೇಕ ಯೋಜನೆ ರೂಪಿಸಿ ಜನಸಾಮಾನ್ಯರ ಕಲ್ಯಾಣಕ್ಕೆ ಕೊಡಿಗೆ ನೀಡಿದ ಧೀಮಂತ ನಾಯಕರಾಗಿದ್ದಾರೆ ಎಂದು ಹೇಳಿದರು.ತಾಲೂಕು ಜೆಡಿಎಸ್ ಮುಖಂಡ ಗುಜ್ಜನಡು ಜಿ.ವಿ.ಬಲರಾಮ್ ಮಾತನಾಡಿ, ಎಚ್.ಡಿ.ದೇವೇಗೌಡ ಅವರು ಈ ದೇಶ ಕಂಡ ಅಪರೂಪದ ರಾಜಕಾರಣಿ. ಅನೇಕ ಹೋರಾಟಗಳ ಮೂಲಕ ಸರ್ವ ಸಮುದಾಯಗಳ ಹಿತಕ್ಕಾಗಿ ಅವಿರತವಾಗಿ ದುಡಿಯುತ್ತಿರುವ ದಣಿವರಿಯದ ಧೀಮಂತ ನಾಯಕರು ಎಂದರು.ಇದೇ ವೇಳೆ ಹಿರಿಯ ಮುಖಂಡರಾದ ಎನ್.ತಿಮ್ಮಾರೆಡ್ಡಿ, ಎಸ್.ವಿ.ಗೋವಿಂದಪ್ಪ, ರಾಜಶೇಖರಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷರಾದ ಎನ್.ಎ.ಈರಣ್ಣ, ತುಮುಲ್ ನಿರ್ದೇಶಕ ಚನ್ನಮಲ್ಲಪ್ಪ, ಬಲರಾಮರೆಡ್ಡಿ, ಅಕ್ಕಲಪ್ಪ ನಾಯ್ಡ್, ಕಾರ್ಯಾಧ್ಯಕ್ಷ ಸೊಗಡು ವೆಂಕಟೇಶ್, ಕೊತ್ತೂರು ನಾಗೇಶ್, ಭೀಮನಕುಂಟೆ ವೈ.ಆರ್.ಚೌಧರಿ, ಪುರಸಭೆ ಮಾಜಿ ಸದಸ್ಯರಾದ ಗುಟ್ಟಹಳ್ಳಿ ಮಣಿ, ಮನುಮಹೇಶ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಭರತ್‌ಕುಮಾರ್, ಜೆಡಿಎಸ್ ನಗರಾಧ್ಯಕ್ಷ ಗಡ್ಡಂ ತಿಮ್ಮರಾಜು, ಜೆಡಿಎಸ್ ರೈತ ಘಟಕದ ಅಧ್ಯಕ್ಷ ಗಂಗಾಧರ್ ನಾಯ್ಡ್, ಕಾವಲಗೇರೆ ರಾಮಾಂಜಿನಪ್ಪ, ಜೆಡಿಎಸ್ ಎಸ್‌ಸಿ ಘಟಕದ ಅಧ್ಯಕ್ಷ, ಅಪ್‌ಬಂಡೆ ಗೋಪಾಲ್, ಮಾಜಿ ತಾಪಂ ಅಧ್ಯಕ್ಷ ರಾಜ್‌ಗೋಪಾಲ್, ನಲ್ಲಪ್ಪ, ಗುಜ್ಜನಡು ಎಲ್‌ಐಸಿ ನರಸೇಗೌಡ ಇತರೆ ಅಪಾರ ಸಂಖ್ಯೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.