ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಗಣ್ಯರ ಕಂಬನಿ

| Published : Dec 28 2024, 12:45 AM IST

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಗಣ್ಯರ ಕಂಬನಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಸಚಿವರು, ಶಾಸಕರು ಸೇರಿದಂತೆ ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಲವು ಸಂಘ-ಸಂಸ್ಥೆಗಳಲ್ಲಿ ಶುಕ್ರವಾರ ಮನಮೋಹನ್‌ ಸಿಂಗ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದವು.

ಹುಬ್ಬಳ್ಳಿ:

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಸಚಿವರು, ಶಾಸಕರು ಸೇರಿದಂತೆ ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಲವು ಸಂಘ-ಸಂಸ್ಥೆಗಳಲ್ಲಿ ಶುಕ್ರವಾರ ಮನಮೋಹನ್‌ ಸಿಂಗ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಲಾಯಿತು.

ಮಹಾನಗರ ಜಿಲ್ಲಾ ಕಾಂಗ್ರೆಸ್‌ ಕಚೇರಿ ಹಾಗೂ ನವಲಗುಂದ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು. ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಲ್ತಾಫಹುಸೇನ್ ಹಳ್ಳೂರ, ಅನೀಲಕುಮಾರ ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ್, ಬ್ಲಾಕ್ ಅಧ್ಯಕ್ಷ ಶರೀಫ್ ಗರಗದ, ಮೆಹಮೂದ್ ಕೋಳೂರ, ಪಾಲಿಕೆ ಸದಸ್ಯರಾದ ಅರ್ಜುನ್ ಪಾಟೀಲ್, ಆರಿಫ್ ಭದ್ರಾಪುರ, ಸೇವಾದಳದ ಅಧ್ಯಕ್ಷ ಡಿ.ಎಂ. ದೊಡ್ಡಮನಿ, ಅಬ್ದುಲ್ ಗನಿ ವಲಿಅಹ್ಮದ ಸೇರಿ ಹಲವರಿದ್ದರು.

ನವಲಗುಂದದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ, ವರ್ಧಮಾನಗೌಡ ಹಿರೇಗೌಡರ, ಆರ್.ಎಚ್. ಕೋನರಡ್ಡಿ, ನಂದಿನಿ ಹಾದಿಮನಿ, ಡಿ.ಕೆ. ಹಳ್ಳದ, ಅಷ್ಪಾಕ ಚಾಹುಸೇನ, ಸಂತೋಷಗೌಡ ಪಾಟೀಲ ಸೇರಿ ಹಲವರಿದ್ದರು.

ವಾಣಿಜ್ಯೋದ್ಯಮ ಸಂಸ್ಥೆ:

ಇಲ್ಲಿನ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಾಜಿ ಪ್ರಧಾನಿ ಸಿಂಗ್‌ಗೆ ನುಡಿನಮನ ಸಲ್ಲಿಸಲಾಯಿತು. ಈ ವೇಳೆ ಮಾಜಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ, ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಮಾಜಿ ಅಧ್ಯಕ್ಷ ವಿನಯ ಜವಳಿ, ಸದಸ್ಯರಾದ ಸಿ.ಎನ್. ಕರಿಕಟ್ಟಿ, ಗೌತಮ ಬೇತಾಳ, ವಿಶ್ವನಾಥ ಗಿಣಿಮಾವ ಸೇರಿ ಹಲವರಿದ್ದರು.

ನಿವೃತ್ತ ನೌಕರರ ಸಂಘ:

ಇಲ್ಲಿನ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮನಮೋಹನ ಸಿಂಗ್‌ ಅವರ ಸಾಧನೆಗಳನ್ನು ಗುಣಗಾನ ಮಾಡಲಾಯಿತು. ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ಎಸ್‌.ಎಂ. ಕೋಳೂರ, ಡಾ. ಲಿಂಗರಾಜ ಅಂಗಡಿ, ಪ್ರೊ. ಕೆ.ಎಸ್. ಕೌಜಲಗಿ, ಎಂ. ಕುಂಬಾರ, ಜಯಲಕ್ಷ್ಮಿ ಉಮಚಗಿ, ಅನುರಾಧ ಕಾಮತ್, ಶಿವಶಂಕರ ಐಹೋಳೆ, ಶೇಖರ್‌ಗೌಡ ಪಾಟೀಲ್, ಕೆ.ಕೆ. ಪಾಟೀಲ್, ವಿ.ಬಿ. ಹಿರೇಮಠ, ಸುಮಿತ್ರಾ ಖೈರೆ, ವಿಠಲರಾವ್ ಖೈರೆ, ಶಕುಂತಲಾ ಮುಗಳಿ, ಈರಣ್ಣ ಕಾಡಪ್ಪನವರ ಸೇರಿದಂತೆ ಹಲವರಿದ್ದರು.

ಇನ್ನುಳಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ನಿಧನದಿಂದ ದೇಶವೇ ದುಃಖದಲ್ಲಿ ಮುಳುಗಿದೆ. ಸಿಂಗ್‌ ಜಾಗತೀಕರಣ, ಆಧುನೀಕರಣ, ಉದಾರೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಸಿಂಗ್ ಹಾಕಿಕೊಟ್ಟ ಅಡಿಪಾಯದಲ್ಲಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಡಾ. ಸಿಂಗ್‌ ಅವರು ಈ ದೇಶ ಕಂಡ ಸರಳ, ಸಜ್ಜನ ರಾಜಕಾರಣಿ, ಆರ್ಥಿಕ ತಜ್ಞರು. ದೇಶದ ಆರ್ಥಿಕತೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಅವರನ್ನು ಕಳೆದುಕೊಂಡು ದೇಶ ಬಡವಾಗಿದೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಚಿವ ಸಂತೋಷ ಲಾಡ್‌ ತಿಳಿಸಿದರು.

ದೂರದೃಷ್ಟಿಯುಳ್ಳ ನಾಯಕ, ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಗಿದೆ. ದೇಶದ ಆರ್ಥಿಕ ಸುಧಾರಣೆಗಳು ಮತ್ತು ಜಾಗತಿಕ ಮಟ್ಟಕ್ಕೆ ಅವರ ಆಳವಾದ ಕೊಡುಗೆ ರಾಷ್ಟ್ರದ ಮೇಲೆ ಅಳಿಸಲಾಗದ ಗುರುತು ಹಾಕಿವೆ ಎಂದು ಮಾಜಿ ಐ.ಜಿ. ಸನದಿ ಹೇಳಿದರು.