ಸರ್ಕಾರ ಮಾಡಲು ಅಸಾಧ್ಯವಾದ ಶೈಕ್ಷಣಿಕ ಸಾಧನೆಯನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳು ಸಾಧಿಸಿ ತೋರಿಸಿವೆ. ಗುಣಮಟ್ಟದ ಶಿಕ್ಷಣದ ಮೂಲಕ ಎಕ್ಸೆಲ್ ರಾಷ್ಟ್ರದ ಗಮನ ಸೆಳೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಶ್ಲಾಘಿಸಿದ್ದಾರೆ.
ಬೆಳ್ತಂಗಡಿ : ಸರ್ಕಾರ ಮಾಡಲು ಅಸಾಧ್ಯವಾದ ಶೈಕ್ಷಣಿಕ ಸಾಧನೆಯನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳು ಸಾಧಿಸಿ ತೋರಿಸಿವೆ. ಗುಣಮಟ್ಟದ ಶಿಕ್ಷಣದ ಮೂಲಕ ಎಕ್ಸೆಲ್ ರಾಷ್ಟ್ರದ ಗಮನ ಸೆಳೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಶ್ಲಾಘಿಸಿದ್ದಾರೆ.ಇಲ್ಲಿನ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಮಾರಂಭಧಲ್ಲಿ ನೂತನ ಅರಮಲೆಬೆಟ್ಟ ಕ್ಯಾಂಪಸ್‌ನ ಭವ್ಯ ಮಹಾದ್ವಾರ ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ, ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ವಿಠ್ಠಲ್, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪ್ರೇಮನಾಥ್ ಶೆಟ್ಟಿ, ರಾಜ್ಯಾಧ್ಯಕ್ಷರಾದ ಚೌಡಪ್ಪ ಅವರು ಉಪಸ್ಥಿತರಿದ್ದು ಸಂಸ್ಥೆಯ ಬೆಳವಣಿಗೆಗೆ ಬೆಂಬಲ ಸೂಚಿಸಿದರು.
ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಆರ್, ಕಾರ್ಯಾಧ್ಯಕ್ಷ ಹರಿಪ್ರಕಾಶ್ ಮತ್ತು ಸಂಘಟನೆಯ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಅವರು ವಹಿಸಿದ್ದರು. ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ಡಾ.ಪ್ರಜ್ವಲ್ ಕಜೆ ಹಾಗೂ ಸುಮಿತ್ರಾ ಗೌಡ , ಶೈಕ್ಷಣಿಕ ಸಂಯೋಜಕರಾದ ನಿಶಾ ಪೂಜಾರಿ, ಉಪ ಪ್ರಾಂಶುಪಾಲರಾದ ರೋಹಿತ್, ಹರೀಶ್, ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನ ಮುಖ್ಯೋಪಾಧ್ಯಾಯ ಶಾಂತಿರಾಜ್ ಜೈನ್, ಆಡಳಿತಾಧಿಕಾರಿ ಕೀರ್ತಿನಿಧಿ, ವ್ಯವಸ್ಥಾಪಕರಾದ ಪ್ರಶಾಂತ್ ಬಳಂಜ ಉಪಸ್ಥಿತರಿದ್ದರು.ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.