ಶ್ರೇಷ್ಠ ತೋಟಗಾರಿಕೆ: ರೈತರ ಆಯ್ಕೆಗೆ ಅರ್ಜಿ ಆಹ್ವಾನ

| Published : Oct 25 2024, 01:08 AM IST

ಶ್ರೇಷ್ಠ ತೋಟಗಾರಿಕೆ: ರೈತರ ಆಯ್ಕೆಗೆ ಅರ್ಜಿ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

Excellent Horticulture: Call for Applications for Selection of Farmers

ಯಾದಗಿರಿ: ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದಲ್ಲಿ 2024-25ನೇ ಸಾಲಿನ ತೋಟಗಾರಿಕೆ ಮೇಳ ಡಿ.21 ರಿಂದ 23ರ ವರೆಗೆ ಆರ್ಥಿಕತೆ ಮತ್ತು ಪೌಷ್ಟಿಕತೆಗಾಗಿ ತೋಟಗಾರಿಕೆ ಎಂಬ ಧ್ಯೇಯದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಸ್ತರಣಾ ಮುಂದಾಳು ಅವರು ತಿಳಿಸಿದ್ದಾರೆ. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಬಯಸುವ ಯಾದಗಿರಿ ಜಿಲ್ಲೆಯ ರೈತ, ರೈತ ಮಹಿಳೆಯರು ಅರ್ಜಿ ನಮೂನೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ವೆಬ್‌ಸೈಟ್ www.uhsbagalkot.karnataka.gov.in ನಲ್ಲಿ ಪಡೆದುಕೊಂಡು, ಭರ್ತಿ ಮಾಡಿ ನಿಗದಿತ (ಅರ್ಜಿ ನಮೂನೆ ಅನುಬಂಧ-1) 2024ರ ನ.5ರೊಳಗೆ ಅರ್ಜಿ ಸಲ್ಲಿಸಬೇಕು. ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಮಾಹಿತಿಗಾಗಿ ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಹಳ್ಳದಕೇರಿ ಫಾರ್ಮ್, ಹೈದ್ರಾಬಾದ್ ರಸ್ತೆ, ಬೀದರ್ 585403, ದೂ: 08482225792, 9480696385 ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-----