ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಡಿಜಿಟಲ್ ವಸ್ತುಗಳ ಅತಿಯಾದ ಬಳಕೆಯಿಂದಾಗಿ ಯುವಜನಾಂಗದ ಆರೋಗ್ಯದ ಮೇಲೆ ಹಲವು ಪರಿಣಾಮಗಳು ಬೀರುತ್ತಿವೆ ಎಂದು ಸಂಪನ್ಮೂಲ ವ್ಯಕ್ತಿ, ಲೇಖಕಿ ನೇಮಿಚಂದ್ರ ಎಚ್ಚರಿಸಿದರು.ಇಲ್ಲಿನ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶ್ರೀಮತಿ ಪದ್ಮ ಜಿ.ಮಾದೇಗೌಡ ಪ್ರತಿಷ್ಠಾನ ಮತ್ತು ಭಾರತಿ ಕಾಲೇಜಿನ ಮಹಿಳಾ ಕೋಶ, ಐಕ್ಯು ಎಸಿ ಸಹಯೋಗದಲ್ಲಿ ಭಾರತೀ ಎಜುಕೇಶನ್ ಟ್ರಸ್ಟ್ ನ ಎಲ್ಲ ಅಂಗಸಂಸ್ಥೆಗಳ ಅಧ್ಯಾಪಕ ಅಧ್ಯಾಪಕಕೇತರಿಗೆ ಆಯೋಜಿಸಿದ್ದ ಭಾವನಾತ್ಮಕ ಸದೃಢತೆ ಮತ್ತು ಡಿಜಿಟಲ್ ಆರೋಗ್ಯ ಎಂಬ ಅರಿವು ಕುರಿತು ಉಪನ್ಯಾಸ ನೀಡಿದರು.
ಸಣ್ಣ ಸಣ್ಣ ವಿಷಯಗಳಿಗೂ ಆತ್ಮಹತ್ಯೆಗೆ ಶರಣಾಗುತ್ತಿರುವ ಇಂದಿನ ಯುವ ಜನಾಂಗಕ್ಕೆ ಹಲವು ಅಂಗವಿಕಲ ಸಾಧಕಿಯರ ಸಾಧನೆಗಳನ್ನು ಪಿಪಿಟಿಯ ಮುಖಾಂತರ ಪ್ರದರ್ಶಿಸಿದರು. ಡಿಜಿಟಲ್ ವಸ್ತುಗಳ ಬಳಕೆಗಳಿಂದ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಕುರಿತು ಸವಿವರವಾಗಿ ತಿಳಿಸಿಕೊಟ್ಟರು.ವಿಧಾನ ಪರಿಷತ್ ಸದಸ್ಯ, ಸಂಸ್ಥೆ ಚರ‍್ಮನ್ ಮಧು ಜಿ.ಮಾದೇಗೌಡ ಮಾತನಾಡಿ, ಇಂದಿನ ಡಿಜಿಟಲ್ ಯುಗದ ದಾವಂತದ ಬದುಕು ನಡೆಸುತ್ತಿರುವ ಎಲ್ಲರಿಗೂ ಸಹ ಇಂತಹ ಆತ್ಮಸ್ಥೈರ್ಯ ತುಂಬುವ ಮಾರ್ಗದರ್ಶನ ಅಗತ್ಯವಿದೆ ಎಂದರು.
ಕಾರ್ಯಕ್ರಮವನ್ನು ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಉದ್ಘಾಟಿಸಿದರು. ಕಾರ್ಯನಿರ್ವಹಣಾಧಿಕಾರಿ ಆಶಯ್ ಮಧು, ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ, ಮಹಿಳಾ ಕೋಶದ ಸಂಚಾಲಕಿ ಎಂ.ಮಮತಾ, ಸಹ ಸಂಚಾಲಕಿ ಎಚ್.ಪಿ. ಪ್ರತಿಮಾ, ಮಹಿಳಾ ಕೋಶದ ಎಲ್ಲಾ ಸದಸ್ಯರು, ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಆರ್ಥಿಕ ಮುಗ್ಗಟ್ಟು ಸುಧಾರಿಸಲು ಗುಡಿ ಕೈಗಾರಿಕೆ ಅಗತ್ಯ: ರಮೇಶ್ ಬಂಡಿಸಿದ್ದೇಗೌಡ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಮಹಿಳೆಯರು ತಮ್ಮ ಆರ್ಥಿಕ ಮುಗ್ಗಟ್ಟು ಸುಧಾರಿಸಿಕೊಳ್ಳಲು ಅಗತ್ಯ ಉತ್ಪನ್ನ ತಯಾರಿಕೆಯ ಗುಡಿಕೈಗಾರಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ತಾಲೂಕಿನ ಟಿ.ಎಂ.ಹೊಸೂರು ಗ್ರಾಮದಲ್ಲಿ ನರೇಗಾ, 15ನೇ ಹಣಕಾಸು ಯೋಜನೆ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ನಿರ್ಮಿಸಿರುವ ಸಂಜೀವಿನಿ ಮಹಿಳಾ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.ದಿನ ಬಳಕೆ ಉತ್ಪನ್ನಗಳಿಗೆ ನಿತ್ಯ ಬೇಡಿಕೆ ಹೆಚ್ಚಾಗಿದ್ದು, ಗುಡಿ ಕೈಗಾರಿಕೆ ಅಳವಡಿಸಿಕೊಂಡು ಆಹಾರ, ಕರಕುಶಲ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲು ಅನುಕೂಲವಿದೆ. ಇಂತಹ ಸಣ್ಣ ಉದ್ಯಮ ಆರಂಬಿಸಲು ಸಂಘಗಳಿಗೆ ಸರ್ಕಾರ 1.50 ಲಕ್ಷದವರೆಗೆ ಬ್ಯಾಂಕ್‌ಗಳ ಮೂಲಕ ಮಹಿಳೆಯರಿಗೆ ಸಹಾಯಧನ ನೀಡುತ್ತಿದೆ. ಇದಕ್ಕೆ ಬ್ಯಾಂಕ್‌ಗಳಿಂದಲೂ ಸಾಲ ಸೌಲಭ್ಯ ದೊರೆಯಲಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ವೇಣು, ಸಿಡಿಪಿಒ ಸಕಲೇಶ್ವರ್, ಎಇಇ ಮಂಜುನಾಥ್, ಎನ್‌ಎಲ್‌ಆರ್ ಎಂ ಯೋಜನೆ ನಿವೃತ್ತ ಸಂಯೋಜಕ ಜೆ.ನಂಜುಂಡಯ್ಯ, ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಸರೋಜಮ್ಮ, ಗ್ರಾಪಂ ಅಧ್ಯಕ್ಷ ಶಿವಮೂರ್ತಿ, ಪಿಡಿಒ ಶ್ರೀನಿವಾಸ್, ಮಾಜಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಚಂದ್ರಶೇಖರ್, ಕುಮಾರಸ್ವಾಮಿ, ಮಹಾಲಕ್ಷ್ಮಿ, ರತ್ನಮ್ಮ, ಸಂಜೀವಮ್ಮ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಮಹದೇವು ಸೇರಿದಂತೆ ಇತರರು ಇದ್ದರು.;Resize=(128,128))
;Resize=(128,128))
;Resize=(128,128))