ಸಾರಾಂಶ
ಚಿಂಚೋಳಿ ತಾಲೂಕಿನ ಚಿಂದಾಪೂರ ತಾಂಡಾದಲ್ಲಿ ಕಿರಾಣಿ ಅಂಗಡಿಯಲ್ಲಿಟ್ಟಿದ್ದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಚಿಂಚೋಳಿ ಅಬಕಾರಿ ಇಲಾಖೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ.
ಚಿಂಚೋಳಿ: ತಾಲೂಕಿನ ಕುಂಚಾವರಂ ಗಡಿಪ್ರದೇಶದ ಚಿಂದಾನೂರ ತಾಂಡಾದಲ್ಲಿ ಕಿರಾಣ ಅಂಗಡಿ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಮಾರಾಟಕ್ಕಾಗಿ ಸಂಗ್ರಹಿಸಿದ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ತಾಲೂಕು ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ರಾಹುಲ ನಾಯಕ ತಿಳಿಸಿದ್ದಾರೆ
ಚಿಂದಾನೂರ ತಾಂಡಾದ ಬದ್ದು ಲಕ್ಷ್ಮಣ ಪವಾರ ಎಂಬಾತ ತಮ್ಮ ಕಿರಾಣ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಖಚಿತವಾದ ಮಾಹಿತಿ ಮೇರೆಗೆ ದಾಳಿ ನಡೆಸಿ, ೯೦ ಎಂಎಲ್ ೧೯೨ ಯುಎಸ್ ವಿಸ್ಕಿ ತುಂಬಿದ ಪ್ಲಾಸ್ಟಿಕ್ ಬಾಟಲಿಗಳು ಒಟ್ಟು ೧೭,೨೮೦ ಲೀ. ಸೇರಿದಂತೆ ಒಟ್ಟು ೭,೬೮೦ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಆರೋಪಿ ಬದ್ದು ಪವಾರ ಪರಾರಿಯಾಗಿದ್ದಾನೆ. ಪ್ರಕರಣವನ್ನು ಅಬಕಾರಿ ಇಲಾಖೆಯಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದು ಇನ್ಸ್‌ಪೆಕ್ಟರ್ ರಾಹುಲ್ ನಾಯಕ ತಿಳಿಸಿದ್ದಾರೆ.ತಾಲೂಕಿನ ಜಂಗ್ಲಿಪೀರ ತಾಂಡಾದ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆಂದು ಸಂಗ್ರಹಿಸಿದ ೧೦,೨೬೦ ಮದ್ಯ ಮತ್ತು ೨,೬೪೦ ಲೀಟರ್ ಬಿಯರ್ ಸೇರಿದಂತೆ ಒಟ್ಟು ೫,೪೪೦ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಜಂಗ್ಲಿಪೀರ ತಾಂಡಾದ ಬಲಭೀಮ ಶೆಟ್ಟಿ ರಾಠೋಡ ತಮ್ಮ ಮನೆಯಲ್ಲಿಟ್ಟದ ಅಕ್ರಮ ಮದ್ಯದ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ಚಿಂಚೋಳಿ ಅಬಕಾರಿ ಇಲಾಖೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಇನ್ಸ್‌ಪೆಕ್ಟರ್ ರಾಹುಲ್ ನಾಯಕ ತಿಳಿಸಿದ್ದಾರೆ.