ಸಾರಾಂಶ
ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು.
ಬ್ಯಾಕೋಡು : ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು. ಅಂಗಡಿ, ಗೂಡಂಗಡಿಗಳು, ಎಲ್ಲೆಂದರಲ್ಲಿ ಮದ್ಯ ದೊರೆಯುತ್ತಿದ್ದು, ಇದರಿಂದಾಗುತ್ತಿರುವ ತೊಂದರೆ, ಸಮಸ್ಯೆಗಳ ಬಗ್ಗೆ ಜನರು ನಿರಂತರವಾಗಿ ಅಬಕಾರಿ ಇಲಾಖೆ ಹಾಗೂ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಇದರಲ್ಲಿ ಕೆಲ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಮೂಡಿದೆ.
ಗ್ರಾಮೀಣ ಭಾಗದ ಚಿಲ್ಲರೆ ಅಂಗಡಿ, ಟೀ ಅಂಗಡಿ ಸೇರಿದಂತೆ ಮನೆಗಳಲ್ಲಿ ಅಕ್ರಮ ಮಾರಾಟ ಹೆಚ್ಚುತ್ತಿದೆ. ಅಬಕಾರಿ ಇಲಾಖೆ ಆಕ್ರಮ ತೆಡೆಗಟ್ಟಲು ಮುಂದಾಗಿಲ್ಲ ಎಂಬುದು ಜನರ ದೂರಾಗಿದೆ.
ಈಚೆಗೆ ಕಾರ್ಗಲ್ ಪೋಲಿಸ್ ಠಾಣಾ ವ್ಯಾಪ್ತಿಯ ಸುಳ್ಳಳ್ಳಿ, ಬೊಬ್ಬಿಗೆ, ನಾಗವಳ್ಳಿ, ಸೇರಿದಂತೆ ಹಲವು ಭಾಗಗಳಲ್ಲಿ ಕಾರ್ಗಲ್ ಪೋಲಿಸ್ ಇಲಾಖೆಯು ದಿಢೀರ್ ದಾಳಿ ನೆಡೆಸಿ ಕೆಲವು ಕಡೆ ಆಪಾರ ಮೌಲ್ಯದ ಆಕ್ರಮ ಮದ್ಯವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ವಶಕ್ಕೆ ತೆಗೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ದಾಳಿ ನಡೆಸಿದ ಬಹುತೇಕ ಪ್ರಕರಣಗಳಲ್ಲಿ ಆಪಾರ ಪ್ರಮಾಣದ ಆಕ್ರಮ ಮದ್ಯ ವಶಕ್ಕೆ ತೆಗೆದುಕೊಂಡಿದ್ದರೂ ಮಾರಾಟ ಮಾಡುವವರ ಮೇಲೆ ಸೂಕ್ತ ಪ್ರಕರಣ ದಾಖಲಿಸಲು ಪೋಲಿಸರು ಹಿಂದೇಟು ಹಾಕುತ್ತಿದ್ದಾರೆ. ಹಾಗೂ ದೊರೆಯುವ ಮೌಲ್ಯದ ಪ್ರಮಾಣದ ಅಂಕಿ ಅಂಶಗಳನ್ನು ರಾಜಕೀಯ ಒತ್ತಡಕ್ಕೆ ಮಣಿದು ಮರೆಮಾಚಲಾಗುತ್ತಿದೆ ಎಂದು ದೇಶಿ ಸೇವಾ ಬ್ರಿಗೇಡ್ ಸದಸ್ಯ ಲೋಕಪ್ಪ ಹಳ್ಳಿ, ಗಂಭೀರ ಆರೋಪ ಮಾಡಿದ್ದಾರೆ.
ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು. ಸಣ್ಣಪುಟ್ಟ ಅಂಗಡಿ, ಮನೆಗಳು ತುಮರಿಯ ಪ್ರತಿಷ್ಠಿತ ಮಾಂಸಹಾರಿ ಹೋಟೆಲ್ ಗಳಲ್ಲಿ ನಡೆಯುತ್ತಿರುವ ಮದ್ಯ ಮಾರಾಟ ತಡೆಯಬೇಕು. ಜಿಲ್ಲಾಡಳಿತ, ಸಂಘ ಸಂಸ್ಥೆಗಳು, ಸಮಾಜಮುಖಿ ಕಾರ್ಯಕರ್ತರೊಂದಿಗೆ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಆಕ್ರಮ ಎಸಗುವವರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ. ಮುಂದಿನ ಕಾನೂನು ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ದೇಶಿ ಸೇವಾ ಬ್ರಿಗೇಡ್ ಸಂಸ್ಥಾಪಕ ಶ್ರೀಧರಮೂರ್ತಿ ತಿಳಿಸಿದ್ದಾರೆ.
ಶೈಕ್ಷಣಿಕ ಚಟುವಟಿಕೆ ಅಡ್ಡಿ: ಈ ಭಾಗದ ನಾಲ್ಕು ಗ್ರಾಪಂ ಗಳ ಪ್ರಮುಖ ವ್ಯಾಪಾರ ಕೇಂದ್ರ ತುಮರಿ, ಹೈಸ್ಕೂಲ್, ಪದವಿ ಪೂರ್ವ ಕಾಲೇಜು, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು, ಶಾಲಾ ಕಟ್ಟಡದ ಎದುರೇ ಮದ್ಯ ಮಾರಟದಿಂದ ಪುಂಡರು ಮದ್ಯ ಸೇವಿಸಿ ಶಾಲಾವರಣ ಪ್ರವೇಶಿಸಿದ ಘಟನೆ ಸಹ ನೆಡೆದಿದೆ. ವಿದ್ಯಾರ್ಥಿನಿಯರು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ.
ಹಳ್ಳಿ ಹಳ್ಳಿಗೆ ಮದ್ಯ ಸರಬರಾಜುಅಬಕಾರಿ ನಿಯಮಾನುಸಾರ 180 ಮಿಲಿ ಇರುವ ಹನ್ನೇರಡಕ್ಕಿಂತ ಹೆಚ್ಹು ಮದ್ಯದ ಬಾಟಲಿಗಳನ್ನು ಒಬ್ಬವ್ಯಕ್ತಿಗೆ ಕೊಡಬಾರದು ಎನ್ನುವ ಕಠಿಣ ನಿಯಮವಿದ್ದರೂ, ಯಾವುದೆ ರಶೀದಿ ನೀಡದೆ ನಿಗದಿತ ಬೆಲೆಗಿಂತ ಹೆಚ್ಹು ದರದಲ್ಲಿ ಮಾರಾಟ ಮಾಡುತ್ತಿದ್ದು, ಒಬ್ಬ ವ್ಯಕ್ತಿಗೆ ಚೀಲಗಟ್ಟಲೆ ನೀಡುತ್ತಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತುಮರಿ ದಯಾನಂದ ವೈನ್ಸ್ ನಿಂದ ಪ್ರತಿ ಹಳ್ಳಿ ಹಳ್ಳಿಗೆ ಮದ್ಯ ಸರಬರಾಜು ಮಾಡುತ್ತಿದ್ದು, ಖಾಸಗಿ ವಾಹನದಲ್ಲಿ ಬೆಳಗಿನಜಾವ ಸಾಗಿಸಲಾಗುತ್ತಿದೆ. ಬ್ಯಾಕೋಡು, ನೆಲ್ಲಿಬೀಡು, ಕಾರಣಿ, ಸುಳ್ಳಳ್ಳಿ, ಕಟ್ಟಿನಾಕಾರು, ಬೊಬ್ಬಿ ಗೆ, ಮಾರಲಗೋಡು, ಮುಂತಾದ ಊರುಗಳ ಕೆಲವು ದಿನಸಿ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದು, ಸಾರ್ವಜನಿಕರು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ತ್ರೀ ಶಕ್ತಿ ಸಂಘಗಳ ಆರೋಪವಾಗಿದೆ.
ಅನುಮಾನಕ್ಕೆ ಕಾರಣವಾದ ಪ್ರಕರಣ
ಮಾರ್ಚ್ ತಿಂಗಳಲ್ಲಿ ಸುಳ್ಳಳ್ಳಿ ವೃತ್ತದಲ್ಲಿ ಖಾಸಗಿ ಮಳಿಗೆ ಮೇಲೆ ಕಾರ್ಗಲ್ ಪೋಲಿಸ್ ಠಾಣೆ ಪಿಎಸ್ಐ ಹೊಳಿಬಸಪ್ಪ ಹೋಳಿ ನೇತೃತ್ವದಲ್ಲಿ ದಾಳಿ ನೆಡೆಸಿಲಾಗಿತ್ತು. ಆದರೆ, ಪ್ರಕರಣ ದಾಖಲಿಸುವಾಗ ಪೋಲಿಸ್ ಅಧಿಕಾರಿಗಳು ಮದ್ಯ ಕುಡಿಯಲು ಅವಕಾಶ ನೀಡಿದ್ದಾರೆಂದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ವಾಸ್ತವದಲ್ಲಿ ಸುಮಾರು ಒಂದು ಚೀಲದಲ್ಲಿ ಮದ್ಯದ ಪೌಚ್ ಮಾರಟಕ್ಕೆ ಸಂಗ್ರಹಿಸಿಟ್ಟಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ರಾಜಕೀಯ ಮುಖಂಡರೊಬ್ಬರ ಒತ್ತಡಕ್ಕೆ ಮಣಿದು ಸಾಮಾನ್ಯ ಲಘು ಪ್ರಕರಣ ಎಂದು ಪರಿಗಣಿಸಲಾಗಿದೆ. ಇದು ಪೋಲಿಸ್ ಇಲಾಖೆ ನಮ್ಮ ಕಣ್ಣ ಮುಂದೆ ದಾಳಿ ನಡೆಸಿ ವಶಪಡಿಸಿಕೊಂಡರೂ ಹೀಗೇ ಮರೆಮಾಚಲಾಗುತ್ತಿದೆ. ಇದರಿಂದ ಕಾರ್ಗಲ್ ಪೋಲಿಸ್ ಠಾಣೆ ಮೇಲೆ ಜನರಿಗೆ ವಿಶ್ವಾಸ ಇಲ್ಲದಂತಾಗಿದೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
;Resize=(128,128))
;Resize=(128,128))
;Resize=(128,128))