ಅಬಕಾರಿ ಇಲಾಖೆಯಿಂದ ಅಕ್ರಮ ಮದ್ಯ ನಾಶ

| Published : Feb 20 2025, 12:48 AM IST

ಸಾರಾಂಶ

ಕಳೆದ ಚುನಾವಣೆ ಮತ್ತು ವಿವಿಧ ಪ್ರಕರಣಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕನಕಪುರ ವಲಯ ವ್ಯಾಪ್ತಿಯಲ್ಲಿ ಅಬಕಾರಿ ಕಾಯ್ದೆಯಡಿ 25 ಘೋರ ಪ್ರಕರಣಗಳಲ್ಲಿ ಜಪ್ತಿಪಡಿಸಿಕೊಂಡಿದ್ದ 309.42 ಲೀಟರ್ ಮದ್ಯ ಹಾಗೂ 62.570 ಲೀಟರ್ ಬಿಯರ್ ಮತ್ತು 9 ಲೀಟರ್ ಸೇಂದಿ ದಾಸ್ತಾನನ್ನು ವಶಕ್ಕೆ ಪಡೆದಿದ್ದರು.

ಕನಕಪುರ: ತಾಲೂಕಿನಾದ್ಯಂತ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿ ವಶಪಡಿಸಿಕೊಂಡಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ಪರಿಸರಕ್ಕೆ ಹಾನಿಯಾಗದಂತೆ ಬುಧವಾರ ನಾಶಪಡಿಸಿದರು. ಕಳೆದ ಚುನಾವಣೆ ಮತ್ತು ವಿವಿಧ ಪ್ರಕರಣಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕನಕಪುರ ವಲಯ ವ್ಯಾಪ್ತಿಯಲ್ಲಿ ಅಬಕಾರಿ ಕಾಯ್ದೆಯಡಿ 25 ಘೋರ ಪ್ರಕರಣಗಳಲ್ಲಿ ಜಪ್ತಿಪಡಿಸಿಕೊಂಡಿದ್ದ 309.42 ಲೀಟರ್ ಮದ್ಯ ಹಾಗೂ 62.570 ಲೀಟರ್ ಬಿಯರ್ ಮತ್ತು 9 ಲೀಟರ್ ಸೇಂದಿ ದಾಸ್ತಾನನ್ನು ವಶಕ್ಕೆ ಪಡೆದಿದ್ದರು. ನಗರದ ಅಬಕಾರಿ ಕಚೇರಿಯಲ್ಲಿ ರಾಮನಗರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ನಟರಾಜು ನೇತೃತ್ವದಲ್ಲಿ ಕೆ.ಎಸ್.ಬಿ.ಸಿ.ಎಲ್ ಪ್ರತಿನಿಧಿಯಾದ ಸುರೇಶ್.ಇ.ಸಿ, ತಾಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕ ಶಿವಕುಮಾರ್.ಎಂ., ಅಬಕಾರಿ ನಿರೀಕ್ಷಕ ಪ್ರದೀಪ್.ಆರ್. ಹಾಗೂ ಕಚೇರಿಯ ಸಿಬ್ಬಂದಿ ಪರಿಸರಕ್ಕೆ ಹಾನಿಯಾಗದಂತೆ ಅಬಕಾರಿ ಕಚೇರಿಯಲ್ಲಿ ಮದ್ಯವನ್ನು ನಾಶ ನಾಶಪಡಿಸಿದರು.