ಸಾರಾಂಶ
ಬಹುಕಾಲದ ಬೇಡಿಕೆಯಾಗಿದ್ದ ತಾಳಗುಪ್ಪ-ಬೆಂಗಳೂರು ಮೈಸೂರು ಇಂಟರ್ ಸಿಟಿ ರೈಲನ್ನು ಇಂದು ಅರಸಾಳಿನಲ್ಲಿ ನಿಲುಗಡೆ ಮಾಡಿದ್ದು, ಈ ಭಾಗದ ಪ್ರಯಾಣಿಕರು ಅರಸಾಳು ಗ್ರಾಮಸ್ಥರು ರೈಲಿಗೆ ಮಾವಿನ ತೋರಣ ಕಟ್ಟಿ ಶೃಂಗರಿಸಿ ಪೂಜೆ ಮಾಡುವ ಮೂಲಕ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ಬಹುಕಾಲದ ಬೇಡಿಕೆಯಾಗಿದ್ದ ತಾಳಗುಪ್ಪ-ಬೆಂಗಳೂರು ಮೈಸೂರು ಇಂಟರ್ ಸಿಟಿ ರೈಲನ್ನು ಇಂದು ಅರಸಾಳಿನಲ್ಲಿ ನಿಲುಗಡೆ ಮಾಡಿದ್ದು, ಈ ಭಾಗದ ಪ್ರಯಾಣಿಕರು ಅರಸಾಳು ಗ್ರಾಮಸ್ಥರು ರೈಲಿಗೆ ಮಾವಿನ ತೋರಣ ಕಟ್ಟಿ ಶೃಂಗರಿಸಿ ಪೂಜೆ ಮಾಡುವ ಮೂಲಕ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಿಸಿದರು.ತಾಳಗುಪ್ಪದಿಂದ ಹೊರಟ ಇಂಟರ್ ಸಿಟಿ ರೈಲು ಗಾಡಿ ಸಾಗರ ಆನಂದಪುರಂ ನಂತರ ಶಿವಮೊಗ್ಗ ಬಿಟ್ಟರೆ ಬೇರೆಕಡೆಯಲ್ಲಿನ ನಿಲ್ದಾಣಗಳಲ್ಲಿ ನಿಲುಗಡೆಯಾಗದೆ ಓಡಾಡುತ್ತಿದ್ದು, ಸಾರ್ವಜನಿಕರ ಮತ್ತು ರೈಲ್ವೆ ಪ್ರಯಾಣಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಸಂಸದ ಬಿ.ವೈ.ರಾಘವೆಂದ್ರರವರ ಪರಿಶ್ರಮದಿಂದಾಗಿ ಇಂದಿನಿಂದ ಆರಸಾಳು ರೈಲ್ವೆ ನಿಲ್ದಾಣದಲ್ಲಿ ಪ್ರಯೋಗಿಕವಾಗಿ ನಿಲುಗಡೆಯಾಗುತ್ತದೆಂಬ ಸುದ್ದಿ ಹರಡುತ್ತಿದ್ದಂತೆ ಅರಸಾಳು ಗ್ರಾಮಸ್ಥರು ಮತ್ತು ಪ್ರಯಾಣಿಕರು ಪೂಜಾ ಸಾಮಗ್ರಿಗಳೊಂದಿಗೆ ಬಂದು ರೈಲಿಗೆ ತಳಿರು ತೋರಣ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಸಂಸದ ಬಿ.ವೈ.ರಾಘವೇಂದ್ರರಿಗೆ ಜೈಕಾರ ಕೂಗಿ ಸಂಭ್ರಮಿಸಿದರು.