ಲಾಭದ ಹುದ್ದೆಯಿಂದ ಶಾಸಕರನ್ನು ಬಚಾವ್‌ ಮಾಡುವ ಮಸೂದೆ ಪಾಸ್‌

| Published : Feb 24 2024, 02:33 AM IST

ಸಾರಾಂಶ

ಸರ್ಕಾರದ ವಿವಿಧ ಲಾಭದಾಯಕ ಹುದ್ದೆಗಳಿಗೆ ನೇಮಕಗೊಂಡ ಶಾಸಕರನ್ನು ಅನರ್ಹತೆ ಕ್ರಮದಿಂದ ಪಾರು ಪಾಡಲು ರಾಜ್ಯ ಸರ್ಕಾರ ಮಂಡಿಸಿದ ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಶುಕ್ರವಾರ ಅನುಮೋದನೆ ನೀಡಿದೆ.

ಕನ್ನಡಪ್ರಭ ವಾರ್ತೆ ವಿಧಾನಸಭೆಸರ್ಕಾರದ ವಿವಿಧ ಲಾಭದಾಯಕ ಹುದ್ದೆಗಳಿಗೆ ನೇಮಕಗೊಂಡ ಶಾಸಕರನ್ನು ಅನರ್ಹತೆ ಕ್ರಮದಿಂದ ಪಾರು ಪಾಡಲು ರಾಜ್ಯ ಸರ್ಕಾರ ಮಂಡಿಸಿದ ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಶುಕ್ರವಾರ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸಲಹೆಗಾರರು ಸೇರಿದಂತೆ ವಿವಿಧ ಹುದ್ದೆಗಳನ್ನು ಸೃಜಿಸಿ ಹಲವು ಶಾಸಕರಿಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸಚಿವ ಸಂಪುಟ ಸ್ಥಾನಮಾನಗಳೊಂದಿಗೆ ಲಾಭದಾಯಕ ಹುದ್ದೆ ಪಡೆದಿರುವುದರಿಂದ ಅನರ್ಹತೆ ತೂಗು ಕತ್ತಿ ಹಲವು ಶಾಸಕರ ಮೇಲೆ ಇತ್ತು. ಅವರನ್ನು ಪಾರು ಮಾಡಲು ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಸದಸ್ಯರಾಗಿರುವವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರ ಸಲಹೆಗಾರರು, ಯಾವುದೇ ಆಯೋಗದ ಅಧ್ಯಕ್ಷರು, ಸದಸ್ಯರ ಹುದ್ದೆಗೆ ನೇಮಕಗೊಳ್ಳುವುದಕ್ಕೆ ಅನರ್ಹತೆ ವಿಧಿಸುವುದರಿಂದ ವಿನಾಯಿತಿ ನೀಡಲು ಕಾಯಿದೆಗೆ ಉಪಬಂಧಗಳನ್ನು ಕಲ್ಪಿಸಿ ತಿದ್ದುಪಡಿ ವಿಧೇಯಕ ಮಂಡಿಸಲಾಗಿತ್ತು.ಪ್ರತಿಪಕ್ಷ ಸದಸ್ಯರು ಸಭಾಪತಿಗಳ ಪೀಠದ ಮುಂದೆ ಧರಣಿಯಲ್ಲಿದ್ದಾಗ ಸಚಿವ ಎಚ್.ಕೆ.ಪಾಟೀಲ್‌ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು. ಬಳಿಕ ಯಾವುದೇ ಚರ್ಚೆ ಇಲ್ಲದೇ ವಿಧೇಯಕವನ್ನು ಅಂಗೀಕರಿಸಲಾಯಿತು.