ದೇಶದ ಪ್ರಮುಖ ಸ್ಪೆಷಲಿಸ್ಟ್ ಸ್ಟಾಫಿಂಗ್ ಸಂಸ್ಥೆ ಎಕ್ಸ್‌ಫಿನೊರ ಉಡುಪಿ ಶಾಖೆಯ ಕಾರ್ಯಾಚರಣೆಯನ್ನು ವಿಸ್ತರಿಸಿದ್ದು, ಇಲ್ಲಿನ ಕುಂಜಿಬೆಟ್ಟಿನ ಪ್ರಗತಿ ಬ್ಯುಸಿನೆಸ್ ಪಾರ್ಕ್ ಕಟ್ಟಡದಲ್ಲಿ ತನ್ನ ವಿಸ್ತರಣಾ ಶಾಖೆ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ)ನ್ನು ಉದ್ಘಾಟಿಸಲಾಗಿದೆ. ಶಾಖೆ ಆರಂಭವಾದ ಒಂದೇ ವರ್ಷದಲ್ಲಿ ತನ್ನ ಸೇವಾ ಸಾಮರ್ಥ್ಯ ದ್ವಿಗುಣಗೊಳಿಸಿದೆ.
ಉಡುಪಿ: ದೇಶದ ಪ್ರಮುಖ ಸ್ಪೆಷಲಿಸ್ಟ್ ಸ್ಟಾಫಿಂಗ್ ಸಂಸ್ಥೆ ಎಕ್ಸ್‌ಫಿನೊರ ಉಡುಪಿ ಶಾಖೆಯ ಕಾರ್ಯಾಚರಣೆಯನ್ನು ವಿಸ್ತರಿಸಿದ್ದು, ಇಲ್ಲಿನ ಕುಂಜಿಬೆಟ್ಟಿನ ಪ್ರಗತಿ ಬ್ಯುಸಿನೆಸ್ ಪಾರ್ಕ್ ಕಟ್ಟಡದಲ್ಲಿ ತನ್ನ ವಿಸ್ತರಣಾ ಶಾಖೆ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ)ನ್ನು ಉದ್ಘಾಟಿಸಲಾಗಿದೆ. ಶಾಖೆ ಆರಂಭವಾದ ಒಂದೇ ವರ್ಷದಲ್ಲಿ ತನ್ನ ಸೇವಾ ಸಾಮರ್ಥ್ಯ ದ್ವಿಗುಣಗೊಳಿಸಿದೆ.ಈ ಸಂದರ್ಭದಲ್ಲಿ ಎಕ್ಸ್‌ಫಿನೊದ ಸಹಸಂಸ್ಥಾಪಕ ಅನಿಲ್ ಕುಮಾರ್ ಎತನೂರ್ ದೇಶ ವಿದೇಶಗಳಲ್ಲಿ ಪ್ರತಿಭೆಗಳ ಬೇಡಿಕೆಗೆ ಪೂರಕವಾಗಿ ಸಂಸ್ಥೆ ಕಾರ್ಯಾಚರಿಸುತ್ತಿದೆ. ಸಂಸ್ಥೆ ಯುವಜನತೆಯ ನಾಯಕತ್ವ, ಹೊಸ ಪ್ರತಿಭೆಗಳ ಶೋಧ ಮತ್ತು ಉನ್ನತ ಗುಣಮಟ್ಟದ ಕೌಶಲಾಭಿವೃದ್ಧಿ, ಮೂಲಭೂತ ಸೌಕರ್ಯಗಳ ಸಂಯೋಜನೆ ಒದಗಿಸುತ್ತಿದೆ. ಇದರ ಯಶಸ್ಸಿನ ಫಲವಾಗಿ ಉಡುಪಿಯಲ್ಲಿ ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲಾಗಿದೆ ಎಂದರು.ಈಗಾಗಲೇ ಉಡುಪಿ ಸಿಒಇ 10ಕ್ಕೂ ಹೆಚ್ಚು ಜಿಸಿಸಿಗಳು ಸೇರಿದಂತೆ 50ಕ್ಕೂ ಹೆಚ್ಚು ಐಟಿ-ಐಟಿಯೇತರ ಸಂಸ್ಥೆಗಳಿಗೆ 1,050 ಕ್ಕೂ ಹೆಚ್ಚು ಉದ್ಯೋಗ ಒದಗಿಸಿದೆ. ಉಡುಪಿ ಸಿಒಇ ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ, ಮುಂಬೈ ಹಾಗೂ ದುಬೈಗೂ ನೇಮಕಾತಿ ಆದೇಶಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದವರು ಹೇಳಿದರು.
ಇನ್ನೊಬ್ಬ ಸಹಸಂಸ್ಥಾಪಕ ಉಡುಪಿಯ ಕಮಲ್ ಕಾರಂತ್ ಐರೋಡಿ, ಎಕ್ಸ್‌ಫಿನೊ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಜೊತೆ ಸಹಭಾಗಿತ್ವ ಹೊಂದಿದ್ದು, 2025ರಲ್ಲಿ ಬಿಡುಗಡೆಯಾದ ಸಿಲಿಕಾನ್ ಬೀಚ್ ಕೌಶಲ್ಯ ವರದಿಯಲ್ಲಿ ಉಡುಪಿ-ಮಂಗಳೂರು ಪ್ರದೇಶದಲ್ಲಿ 3,10,000 ಕ್ಕೂ ಪ್ರತಿಭೆಗಳಿವೆ. ಅವರಲ್ಲಿ ರಚನಾತ್ಮಕ ಕೌಶಲ್ಯ ಅಭಿವೃದ್ಧಿ, ಸ್ಥಳೀಯ ಉದ್ಯೋಗ ಸೃಷ್ಟಿ ಮತ್ತು ಉದ್ಯಮ ಸ್ಥಾಪನೆ ಸಾಮರ್ಥ್ಯ ಹೆಚ್ಚಿಸುವುದು ಅಗತ್ಯವಿದ್ದು, ಎಕ್ಸ್‌ಫಿನೊ ಉಡುಪಿ ಸಿಒಇ ಈ ಕೆಲಸವನ್ನು ಮಾಡುತ್ತಿದೆ ಎಂದಿದ್ದಾರೆ.