ಸಾರಾಂಶ
ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ರಾಜಮಾತೆ ಅಹಲ್ಯಾ ಬಾಯಿ ಹೊಳ್ಕರ್ ಜನ್ಮ ತ್ರಿಶತಾಬ್ದಿ ಮಹೋತ್ಸವದ ಪ್ರಯುಕ್ತ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜ.1ರಿಂದ 15ರ ವರೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ರಾಜಮಾತೆ ಅಹಲ್ಯಾ ಬಾಯಿ ಹೊಳ್ಕರ್ ಜನ್ಮ ತ್ರಿಶತಾಬ್ದಿ ಮಹೋತ್ಸವದ ಪ್ರಯುಕ್ತ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜ.1ರಿಂದ 15ರ ವರೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.ಮರಾಠಾ ಒಕ್ಕೂಟದ ಇಂದೋರ್‌ನ ಮಹಾರಾಣಿಯಾಗಿ, ರಾಜಮಾತೆಯಾಗಿ, ಸಾದ್ವಿಯಾಗಿ ಮನೆಮಾತಾದ ರಾಜಮಾತೆ ಅಹಲ್ಯಬಾಯಿ ಹೋಳ್ಕರ್ ಅವರ ಸ್ಮರಣಾರ್ಥ ಜರುಗುವ ಈ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆಯನ್ನು ಜ.1ರಂದು ಬೆಳಗ್ಗೆ 10 ಗಂಟೆಗೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನೆರವೇರಿಸಲಿದ್ದಾರೆ.ಅತಿಥಿಗಳಾಗಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮತ್ತು ಕೆಎಂಸಿ ಆಸ್ಪತ್ರೆಯ ಮಕ್ಕಳತಜ್ಞೆ ಡಾ.ಪುಷ್ಪಾ ಕಿಣಿ ಭಾಗವಹಿಸಲಿದ್ದಾರೆ.ವಿಶೇಷವಾಗಿ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್, ಭಾರತೀಯ ಇತಿಹಾಸದ ಜನಪ್ರಿಯ ಮಹಿಳಾ ಆಡಳಿತಗಾತಿಯಾಗಿ ಮಾನವೀಯ ಕೆಲಸಗಳಿಗೆ ಹೆಸರುವಾಸಿಯಾಗಿದ್ದರು. ಅವರು ಕೈಮಗ್ಗದ ಉದ್ಯಮದ ಮೂಲಕ ಸಹಸ್ರಾರು ಮಹಿಳೆಯರಿಗೆ ಉದ್ಯೋಗದಾತರಾಗಿ ‘ಮಹೇಶ್ವರಿ’ ಸೀರೆಗಳ ಏಳಿಗೆಗೂ ಕಾರಣರಾಗುತ್ತಾರೆ. ಈ ಮಹೇಶ್ವರಿ ಸೀರೆಗಳು ಈ ಮೇಳದ ವಿಶೇಷ ಆಕರ್ಷಣೆಯಾಗಿದೆ.ಜೊತೆಗೆ ಉಡುಪಿ, ಇಳಕಲ್, ಕೋಲ್ಕತ್ತಾ, ವೆಂಕಟಗಿರಿ, ಮಧುಬನಿ, ಬಿಹಾರದ ಕಸೂತಿ, ಕೈ ನೇಯ್ಗೆ, ಸುಜನಿ, ತಸರ್ ಸಿಲ್ಕ್, ಕಾಟನ್ ಸಿಲ್ಕ್, ಕೋಲಾರ ಸಿಲ್ಕ್, ಧಾರವಾಡ ಕಸೂತಿ, ಪೋಚಂಪಲ್ಲಿ, ಮಲಬಾರಿ ಸಿಲ್ಕ್, ಮೈಸೂರ್ ಕ್ರೇಪ್ ಸಿಲ್ಕ್, ಕಾಶ್ಮೀರ, ಲಡಾಕ್, ಮೊಳಕಾಲ್ಮುರು, ಹುಬ್ಬಳ್ಳಿ ಕಾಟನ್, ಕೊಳ್ಳೆಗಾಲ ಸಿಲ್ಕ್, ಸೀರೆಗಳು, ಪಶ್ಮಿನ, ಕಲಂಕಾರಿ, ಮಧುಬನಿ, ಜಾರ್ಕಂಡ್ ಶಾಲು ಮತ್ತು ಮಟ್ಕಾ ಸಿಲ್ಕ್, ತಸರ್ ಸಿಲ್ಕ್, ಎರಿ ಸಿಲ್ಕ್ ಸೀರೆ, ತುಮ್ಮಿನಕಟ್ಟಿ, ಗುತ್ತೂರ್ ಟವೆಲ್ ಲಭ್ಯ ಇವೆ ಎಂದು ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಾಬ್ದಿ ಮಹೋತ್ಸವ ಆಚರಣೆ ಸಮಿತಿ ತಿಳಿಸಿದೆ.