ಈ ಬಾರಿ ಹಿಂದಿನಕ್ಕಿಂತ ಹೆಚ್ಚು ಮತದಾನವಾಗುವ ನೀರಿಕ್ಷೆ: ಡಿಸಿ

| Published : May 07 2024, 01:08 AM IST

ಈ ಬಾರಿ ಹಿಂದಿನಕ್ಕಿಂತ ಹೆಚ್ಚು ಮತದಾನವಾಗುವ ನೀರಿಕ್ಷೆ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆ ಹೊನ್ನಾಳಿ ಪಟ್ಟಣದ ಕ್ಷೀಮತಿ ಗಂಗಮ್ಮ ವೀರಭದ್ರ ಶಾಸ್ತಿ ಐಟಿಐ ಕಾಲೇಜು ಅವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಮಸ್ಟರಿಂಗ್ ಕೇಂದ್ರಕ್ಕೆ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆ ಪಟ್ಟಣದ ಕ್ಷೀಮತಿ ಗಂಗಮ್ಮ ವೀರಭದ್ರ ಶಾಸ್ತ್ರಿ ಐಟಿಐ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದ್ದ ಮಸ್ಟರಿಂಗ್ ಕೇಂದ್ರಕ್ಕೆ ಸೋಮವಾರ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಜೊತೆಗೆ ಚರ್ಚಿಸಿದರು.

ಇದೇ ಸಂದರ್ಭದಲ್ಲಿ ಉಪಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಅವರು ಹೊನ್ನಾಳಿ ಕ್ಷೇತ್ರದ ಚುನಾವಣೆ ವ್ಯವಸ್ಥೆಗಳ ಕುರಿತು ಜಿಲ್ಲಾಧಿಕಾರಿಗೆ ವಿವರಿಸಿದರು.

ಜಿಲ್ಲಾಧಿಕಾರಿಗಳು ಸುದ್ದಿಗಾರರೊದಿಗೆ ಮಾತನಾಡಿ, ಕಳೆದ ಬಾರಿ ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ 72.96ರಷ್ಟು ಮತದಾನವಾಗಿದ್ದು, ಆದರೆ ಈ ಬಾರಿ ಲೋಕಸಭಾಕ್ಷೇತ್ರದ ಎಲ್ಲಾ ತಾಲೂಕುಗಳಲ್ಲಿ ಸಾಕಷ್ಟು ಸ್ವೀಪ್ ಮತ್ತು ಇತರೆ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ ಮಾಡಿದ್ದು ಈ ಬಾರಿ ಇನ್ನೂ ಹೆಚ್ಚಿನ ರೀತಿಯಲ್ಲಿ ಮತದಾನವಾಗುವ ನೀರಿಕ್ಷೆ ಇದೆ ಎಂದು ಹೇಳಿದರು.

ಈ ಬಾರಿ ಜಿಲ್ಲೆಯಲ್ಲಿ ಒಟ್ಟು 179244 ಜನ ಮತದಾರರಿದ್ದು, 35 ಸಖಿ,67ವಿಕಲಚೇತನ, 7ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು 389 ಕ್ರಿಟಿಕಲ್ ಮತ್ತು 11 ವಲ್ನರಬಲ್ ಮತಗಟ್ಟೆ ಗುರುತಿಸಲಾಗಿದೆ. ಮತದಾರರು ಸುರಕ್ಷಿತವಾಗಿ ಹಾಗೂ ನಿರ್ಭಿತಿಯಿಂದ ಮತದಾನ ಮಾಡುವಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ನೀತಿ ಸಂಹಿತೆ ಜಾರಿಗೆ ಬಂದ ನಂತರ ಜಿಲ್ಲೆಯಲ್ಲಿ ಚೆಕ್‍ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಆ ವೇಳೆಯಲ್ಲಿ ದಾಖಲೆ ಇಲ್ಲದ ₹1.91 ಕೋಟಿ ನಗದು, 13 ಕೋಟಿ ಮೌಲ್ಯದ ಬಂಗಾರ, ಬೆಳ್ಳಿ, ಹಾಗೂ ಇತರ ವಸ್ತು ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಬೇಕಾದ ಸೂಕ್ತ ದಾಖಲೆ ನೀಡಿ ತಮ್ಮ ವಸ್ತುಗಳು ಅಥವಾ ನಗದು ಬಿಡಿಸಿಕೊಳ್ಳಬಹುಗಾಗಿದೆ ಎಂದರು.

ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಆಗುವುದಕ್ಕೆ ಸಕಲ ಸಿದ್ಧತೆಗಳನ್ನು ನಮ್ಮ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಒಂದು ವೇಳೆ ಅಶಾಂತಿ ನಿರ್ಮಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಕ್ಕೆ ಸೂಚಿಸಲಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದ ಅವರು, ಪ್ರತಿ ಮತಗಟ್ಟೆಗಳಿಗೆ ಒಂದು ಮೆಡಿಕಲ್ ಕಿಟ್ ಕೂಡ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೊನ್ನಾಳಿ ಮಸ್ಟರಿಂಗ್ ಕೇಂದ್ರಕ್ಕೆ ಚನ್ನಗಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಮುನ್ನೂಳ್ ಕೂಡ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಪರಿಶೀಲಿಸಿದರು.

ಸಹಾಯಕ ಚುನಾವಣಾಧಿಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಪುರಂದರಹೆಗ್ಡೆ, ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ಗ್ರೇಡ್ 2 ತಹಸೀಲ್ದಾರ್ ಗೋವಿಂದಪ್ಪ, ಸುರೇಶ್, ಸ್ವೀಪ್ ಕಮಿಟಿ ತಾಪಂ ಇಒ ಗಳಾದ ಸುಮಾ ಹಾಗೂ ರಾಘವೇಂದ್ರ, ಪೊಲೀಸ್‍ ಇನ್ಸ್‌ಪೆಕ್ಟರ್‌ಗಳಾದ ಮುದ್ದುರಾಜು, ರವಿಕುಮಾರ್, ಪುರಸಭಾ ಮುಖ್ಯಾಧಿಕಾರಿ ನಿರಂಜನಿ, ರಾಜಸ್ವ ನಿರೀಕ್ಷಕ ಸಂತೋಷ್, ರವಿ, ದಿನೇಶ್, ಬಿಇಒ ನಂಜರಾಜ್ ಹಾಗೂ ಇತರರು ಇದ್ದರು.