ಸಂಘ ಸದೃಢವಾಗದಿದ್ದರೆ ಶೋಷಣೆ ತಪ್ಪಿದ್ದಲ್ಲ

| Published : Mar 05 2024, 01:39 AM IST

ಸಾರಾಂಶ

ತಾಲೂಕು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ರುಪ್ಸ ಸಂಘಟನೆ ಸದೃಢವಾಗದಿದ್ದರೆ ಶೋಷಣೆ ತಪ್ಪಿದ್ದಲ್ಲ ಎಂದು ರಾಜ್ಯ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ರಾಜ್ಯಾಧ್ಯಕ್ಷ ಡಾ.ಹಾಲನೂರು ಎಸ್. ಲೇಪಾಕ್ಸ್ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ತಾಲೂಕು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ರುಪ್ಸ ಸಂಘಟನೆ ಸದೃಢವಾಗದಿದ್ದರೆ ಶೋಷಣೆ ತಪ್ಪಿದ್ದಲ್ಲ ಎಂದು ರಾಜ್ಯ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ರಾಜ್ಯಾಧ್ಯಕ್ಷ ಡಾ.ಹಾಲನೂರು ಎಸ್. ಲೇಪಾಕ್ಸ್ ಎಚ್ಚರಿಸಿದರು.

ನಗರದ ನಿಜಗುಣ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆದ ರುಪ್ಸಾ ಜಿಲ್ಲಾ ಹಾಗೂ ತಾಲೂಕು ಘಟಕಗಳ ಉದ್ಘಾಟನೆ ಹಾಗೂ ರಾಜ್ಯ ಕಾರ್ಯಕಾರಣಿ ಸಭೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಶೇ. ೫೨ ಸರ್ಕಾರಿ ಶಾಲೆಗಳು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರೆ, ಶೇ.೪೮ರಷ್ಷು ಖಾಸಗಿ ಶಿಕ್ಷಣ ಸಂಸ್ಥೆಗಳು, ಗುಣ ಮಟ್ಡದ ಶಿಕ್ಷಣ ನೀಡುತ್ತಿವೆ, ಇದಕ್ಕೆ ಪ್ರತಿ ವರ್ಷದ ಫಲಿತಾಂಶಗಳೇ ಉದಾಹರಣೆಯಾಗಿದೆ ಎಂದರು.

ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಪ್ರತ ಬಜೆಟ್‌ನಲ್ಲಿ ೩೬ ಸಾವಿರ ಕೋಟಿಗಳ ಅನುದಾನ ನೀಡುತ್ತಿದೆ, ಆದೇ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ನಿರ್ಬಂಧ ಹಾಕುತ್ತಿದೆ, ಇದರ ಜೊತೆ ಶಿಕ್ಷಣಾಧಿಕಾರಿಗಳ ಕಿರುಕುಳ, ಇವುಗಳ ವಿರುದ್ದ ಹೋರಾಡಬೇಕಾದರೆ ಸದೃಢ ಸಂಘಟನೆ ಅತ್ಯಂತ ಅವಶ್ಯಕವಾಗಿದೆ ಎಂದರು.

ಶೈಕ್ಷಣಿಕ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿರುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಸರಕಾರ ನಿರ್ವಹಿಸಬಹುದಾದ ಜವಾಬ್ದಾರಿಯನ್ನು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ವಹಿಸುತ್ತಿವೆ. ಸರಕಾರ ೧೯೯೫ ನೇ ಸಾಲಿನವರೆಗೆ ಪ್ರಾರಂಭವಾಗಿರುವ ಖಾಸಗಿ ಅನುದಾನ ರಹಿತ ಶಾಲಾ, ಕಾಲೇಜುಗಳಿಗೆ ಸಹಾಯ ಅನುದಾನ ನೀಡುವ ನೀತಿ ವಿಸ್ತರಿಸಬೇಕು. ಅನುದಾನಿತ ಶಾಲೆಗಳ ಮಕ್ಕಳಿಗೆ ನೀಡುವ ಎಲ್ಲ ರೀತಿಯ ಸೌಲಭ್ಯ ಅನುದಾನ ರಹಿತ ಶಾಲೆಯ ಮಕ್ಕಳಿಗೆ ವಿಸ್ತರಿಸಬೇಕು ಎಂದರು.

ಆದೇಶ ಹಿಂಪಡೆಯಿರಿ:

ಶಾಲೆಗಳನ್ನು ನಡೆಸುವುದಕ್ಕೆ ಪರದಾಡುವ ನಮಗೆ ನವೀಕರಣಕ್ಕೆ ಹಣವೆಚ್ಚ ಮಾಡುವುದೇ ಸಮಸ್ಯೆಯಾಗಿದೆ. ಕಟ್ಟಡ ಭದ್ರತೆ, ಬೆಂಕಿಸುರಕ್ಷತಾ ಕ್ರಮಗಳ ಅಳವಡಿಕೆ ಮಾಡಬೇಕು ಎಂದು ಅಧಿಕಾರಿಗಳು ಸೂಚನೆ ನೀಡುತ್ತಾರೆ. ಬಹುತೇಕ ಸರಕಾರಿ ಶಾಲೆಗಳಿಗೆ ಯಾವುದೇ ನಿರ್ಬಂಧವಿಲ್ಲ. ನಮಗೆ ಯಾಕೆ ಇಲ್ಲಸಲ್ಲದ ನಿರ್ಬಂಧ, ಆದ್ದರಿಂದ ಈ ಆದೇಶವನ್ನು ಹಿಂಪಡೆಯಿರಿ ಎಂದರು.

ಸಂಘ ಸ್ಥಾಪನೆಯಾದ ನಂತರ ಸಂಘ ಹಲವಾರು ಸಮಸ್ಯೆಗಳನ್ನು ನಿವಾರಿಸುವತ್ತ ಸರ್ಕಾರದೊಡನೆ ಹೋರಾಡಿದೆ, ಇನ್ನೂ ಮುಂದೆಯು ನಮ್ಮೆಲ್ಲಾ ಸಮಸ್ಯೆಗಳ ಪರಿಹಾರವಾಗಬೇಕಾದರೆ ಸಂಘ ಮತ್ತಷ್ಟು ಸದೃಡವಾಗಬೇಕು, ಈ ನಿಟ್ಟಿನಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಮುಂದಿನ ರೂಪುರೇಷೆಗಳನ್ನು ರೂಪಿಸೋಣ ಎಂದರು. ಬಿಜೆಪಿ ಸರ್ಕಾರ ಇದ್ದಾಗಲೇ ಸಂಘ ಸಾಕ್ಷಿ ಸಮೇತ ಕೆಲ ಭ್ರಷ್ಟರ ಮುಖವಾಡ ಬಯಲಾಗಿತ್ತು. ಆ ಬಗ್ಗೆ ತನಿಖೆ ನಡೆಯುವ ಹಂತದಲ್ಲೇ ಈಗ ಮತ್ತೆ ಅವರಲ್ಲೇ ಕೆಲವರು ಹಳೆ ಚಾಳಿ ಮುಂದುವರಿಸಿದ್ದಾರ ಎಂದರು. ನ್ಯಾಯಯುತ ಹೋರಾಟಕ್ಕೆ ನನ್ನ ಬೆಂಬಲ:

ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಹನೂರು ಶಾಸಕ ಎಂ. ಆರ್. ಮಂಜುನಾಥ್ ಮಾತನಾಡಿ ಸಂಘದ ನ್ಯಾಯಯುತ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು. ನಿಮ್ಮ ಸಮಸ್ಯೆಗಳು ಬಗೆಹರಿಯುವ ನಿಟ್ಟಿನಲ್ಲಿ ಸಿಎಂ, ಶಿಕ್ಷಣ ಸಚಿವ ಮತ್ತು ಸಂಘದ ಪದಾಧಿಕಾರಿಗಳು ಒಂದೆಡೆ ಕುಳಿತು ಚರ್ಚೆ ನಡೆಸುವ ಅಗತ್ಯತೆ ಇದೆ ಎಂದರು.ರಾಜ್ಯ ಪ್ರದಾನ ಕಾರ್ಯದರ್ಶಿ ಶಶಿಧರ ದಿಂಡೂರ್ ಮಾತನಾಡಿ ಶಿಕ್ಷಣ ಇಲಾಖೆಯನ್ನು ಬಡಿದೆಬ್ಬಿಸುವ ನಿಟ್ಟಿನಲ್ಲ ಸಂಘ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಸಂಸ್ಥೆಗಳು ಸಹ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಸಂಘದ ವತಿಯಿಂದ ನಮ್ಮ ಸಂಸ್ಥೆಯ ಶಿಕ್ಷಕರಿಗೆ ತರಬೇತಿಯನ್ನು ಹಮ್ಮಿಕೊಳ್ಳುಬ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ನೈತಿಕತೆ ಮತ್ತು ಆಧ್ಯಾತ್ಮಿಕತೆಗೆ ಶಿಕ್ಷಣದ ಅವಶ್ಯಕತೆ ಇದೆ, ಇದರ ಜೊತೆ ರಾಷ್ಟ್ರ ಪ್ರೇಮವನ್ನು ಮಕ್ಕಳಲ್ಲಿ ಬೆಳಸಿದರೆ ವಿಕೃತ ಘಟನೆಗಳನ್ನು ತಡೆಗಟ್ಟಿ ಸಮರ್ಥ ನಾಗರೀಕನ್ನಾಗಿ ಮಾಡಬಹುದು ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಮಂಜುನಾಥ ರೇವಾಂಕರ್ ಡಾ.ಮುಖೇಶ್ ಮಾತನಾಡಿದರು.ಜಿಲ್ಲಾಧ್ಯಕ್ಷ ಎನ್.ನಂಜುಂಡಸ್ವಾಮಿ ಪ್ರಾಸ್ತಾವಿಸಿ, ಗೌರವಾಧ್ಯಕ್ಷ ರಮೇಶ್ ಸ್ವಾಗತಿಸಿದರು, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಂಜುನಾಥ್, ಪದಾಧಿಕಾರಿಗಳು, ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಚಾಮರಾಜನಗರದ ನಿಜಗುಣ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆದ ರುಪ್ಸಾ ಜಿಲ್ಲಾ ಹಾಗೂ ತಾಲೂಕು ಘಟಕಗಳ ಉದ್ಘಾಟನೆ ಹಾಗೂ ರಾಜ್ಯ ಕಾರ್ಯಕಾರಣಿ ಸಭೆ ಸಮಾರಂಭದಲ್ಲಿ ರುಪ್ಸಾ ರಾಜ್ಯಾಧ್ಯಕ್ಷ ಡಾ. ಡಾ. ಹಾಲನೂರು ಎಸ್. ಲೇಪಾಕ್ಸ್ ಅವರುನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.