ಮಹಿಳಾ ಸಿಬ್ಬಂದಿಯಿಂದ ಎಕ್ಸ್‌ಪ್ರೆಸ್‌ ರೈಲು ನಿರ್ವಹಣೆ

| Published : Mar 09 2024, 01:36 AM IST / Updated: Mar 09 2024, 01:25 PM IST

ಮಹಿಳಾ ಸಿಬ್ಬಂದಿಯಿಂದ ಎಕ್ಸ್‌ಪ್ರೆಸ್‌ ರೈಲು ನಿರ್ವಹಣೆ
Share this Article
  • FB
  • TW
  • Linkdin
  • Email

ಸಾರಾಂಶ

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ರಾಜ್ಯ ರಾಣಿ ಎಕ್ಸ್ ಪ್ರೆಸ್ ರೈಲನ್ನು ಎಲ್ಲಾ ಮಹಿಳಾ ಸಿಬ್ಬಂದಿಯಿಂದ ನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಶುಕ್ರವಾರ ವಿಶೇಷವಾಗಿ ಆಚರಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ರಾಜ್ಯ ರಾಣಿ ಎಕ್ಸ್ ಪ್ರೆಸ್ ರೈಲನ್ನು ಎಲ್ಲಾ ಮಹಿಳಾ ಸಿಬ್ಬಂದಿಯಿಂದ ನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಶುಕ್ರವಾರ ವಿಶೇಷವಾಗಿ ಆಚರಿಸಿತು.

ರಾಜ್ಯ ರಾಣಿ ಎಕ್ಸ್ ಪ್ರೆಸ್ ರೈಲಿಗೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಡಿಆರ್ ಎಂ. ಶಿಲ್ಪಿ ಅಗರ್ವಾಲ್ ಹಸಿರು ನಿಶಾನೆ ತೋರಿದರು. ನಂತರ ಮೈಸೂರು ರೈಲು ನಿಲ್ದಾಣದಲ್ಲಿ ನೆರೆದಿದ್ದ ಪ್ರಯಾಣಿಕರಿಗೆ ಗುಲಾಬಿ ಹೂವು ಮತ್ತು ಟಾಫಿಗಳನ್ನು ವಿತರಿಸಿದರು.

ಲೇಡಿ ಲೋಕೋ ಪೈಲಟ್ ಜಿ. ಶ್ರೀಶಾ, ಅಸಿಸ್ಟೆಂಟ್ ಲೋಕೋ ಪೈಲಟ್ ಜಿ. ಸೋನಾ, ಟ್ರೈನ್ ಮ್ಯಾನೇಜರ್ ಪ್ರಿಯದರ್ಶಿನಿ, ಲೇಡಿ ಟಿಕೆಟ್ ಎಕ್ಸಾಮಿನರ್ಸ್ ಮತ್ತು ಆರ್ ಪಿಎಫ್ ಎಸ್ಕಾರ್ಟ್ ಅನ್ನು ಒಳಗೊಂಡ ಎಲ್ಲಾ ಮಹಿಳಾ ಸಿಬ್ಬಂದಿ ರಾಜ್ಯ ರಾಣಿ ಎಕ್ಸ್ ಪ್ರೆಸ್ ರೈಲನ್ನು ದೋಷರಹಿತವಾಗಿ ನಿರ್ವಹಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.