ಬೈಕ್ ಅಡ್ಡಗಟ್ಟಿದ್ದ ಸುಲಿಗೆಕೋರರ ಬಂಧನ

| Published : Oct 21 2025, 01:00 AM IST

ಸಾರಾಂಶ

ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕನನ್ನು ಅಡ್ಡಗಟ್ಟಿ ಚಾಕು ಮತ್ತು ರಾಡ್‌ ನಿಂದ ಹಲ್ಲೆ ನಡೆಸಿ ಚಿನ್ನದ ಸರ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿರುವ ಬೀರೂರು ಪೊಲೀಸರು ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ 7.8 ಗ್ರಾಂನ ಚಿನ್ನದ ಸರ ವಶಕ್ಕೆ ಪಡೆದಿದ್ದಾರೆ.

ಬೀರೂರು: ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕನನ್ನು ಅಡ್ಡಗಟ್ಟಿ ಚಾಕು ಮತ್ತು ರಾಡ್‌ ನಿಂದ ಹಲ್ಲೆ ನಡೆಸಿ ಚಿನ್ನದ ಸರ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿರುವ ಬೀರೂರು ಪೊಲೀಸರು ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ 7.8 ಗ್ರಾಂನ ಚಿನ್ನದ ಸರ ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ತುಂಗಾ ನಗರದ ಮೊಹಮದ್ ತಬರಕ್ ಉಲ್ಲ, ಮಹಮದ್ ರಿಯಾಜ್, ಮೊಹಮದ್ ಮುಬಾರಕ್ ಬಂದಿತ ಆರೋಪಿಗಳು.

ಗೋವಿಂದನಾಯ್ಕ ಎಂಬುವರು ಗೋವಿಂದನಾಯ್ಕ ಎಂಬಲ್ಲಿ ತೋಟಕ್ಕೆ ತೆರಳುತ್ತಿದ್ದಾಗ ಹಲ್ಲೆ ನಡೆಸಿ ಚಿನ್ನದ ಸರ ಅಪಹರಿಸಿದ್ದರು. ಅಪರಾಧ ಕೃತ್ಯಕ್ಕೆ ಬಳಸುವ ಸಂಬಂಧ ಕೆ.ಚಟ್ಟನಹಳ್ಳಿ ಬಳಿ ಬೈಕ್ ಕಳವು ಮಾಡಿದ್ದ ಆರೋಪಿಗಳು, ಭದ್ರಾವತಿ ಬಸ್ ನಿಲ್ದಾಣದ ಸಮೀಪ ಇರುವ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಬೀರೂರು ಸಿಪಿಐ ಎಸ್.ಎನ್.ಶ್ರೀಕಾಂತ್ ನೇತೃತ್ವದಲ್ಲಿ ಪಿಎಸ್ಐಗಳಾದ ಡಿ.ವಿ.ತಿಪ್ಪೇಶ್, ಗಣಪತಿ ಶೇರುಗಾರ್, ಅಪರಾಧ ವಿಭಾಗದ ಸಿಬ್ಬಂದಿ ಡಿ.ವಿ.ಹೇಮಂತ್ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ಬಿ.ಎಚ್.ರಾಜಪ್ಪ, ಪಾಂಡುರಂಗ, ಶಿವಾನಂದ, ಶಿವಕುಮಾರ್, ಮಂಜಾನಾಯ್ಕ ಕಾರ್ಯಾಚರಣೇಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳನ್ನು ಪತ್ತೆಮಾಡಿದ ತಂಡಕ್ಕೆ ಎಸ್.ಪಿ ವಿಕ್ರಂ ಅಮಟೆ ಬಹುಮಾನ ಘೋಷಿಸಿದ್ದಾರೆ.

20 ಬೀರೂರು 1ಸಿಪಿಐ ಎಸ್.ಎನ್.ಶ್ರೀಕಾಂತ್ ನೇತೃತ್ವದಲ್ಲಿ ಪಿಎಸ್ಐಗಳಾದ ಡಿ.ವಿ.ತಿಪ್ಪೇಶ್, ಗಣಪತಿ ಶೇರುಗಾರ್, ಅಪರಾಧ ವಿಭಾಗದ ಸಿಬ್ಬಂದಿ ಡಿ.ವಿ.ಹೇಮಂತ್ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ಬಿ.ಎಚ್.ರಾಜಪ್ಪ, ಕೃತ್ಯಕ್ಕೆ ಬಳಸಿರುವ ವಸ್ತುಗಳನ್ನು ವಶಪಡಿಸಿಕೊಂಡಿರುವುದು