ಮಕ್ಕಳ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಮುಖ್ಯ

| Published : May 15 2024, 01:41 AM IST

ಸಾರಾಂಶ

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆಂದು ಎರಡು ಭಾಗವಿದ್ದು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ ಎಂದು ದಾವಣಗೆರೆ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಚ್.ಎಸ್. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

- ಮಕ್ಕಳ ಬೇಸಿಗೆ ಶಿಬಿರ ಸಮಾರೋಪದಲ್ಲಿ ಎಚ್.ಎಸ್. ಮಂಜುನಾಥ್ ಅಭಿಮತ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆಂದು ಎರಡು ಭಾಗವಿದ್ದು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ ಎಂದು ದಾವಣಗೆರೆ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಚ್.ಎಸ್. ಮಂಜುನಾಥ್ ಅಭಿಪ್ರಾಯಪಟ್ಟರು. ಇಲ್ಲಿಗೆ ಸಮೀಪದ ಕುಂಬಳೂರಿನ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಮಕ್ಕಳು ರಜಾ ಅವಧಿಯಲ್ಲಿ ಮಜಾ ಮಾಡುವಲ್ಲಿ ಅಡ್ಡದಾರಿ ಹಿಡಿಯುವುದನ್ನು ತಪ್ಪಿಸಲು ಬೇಸಿಗೆ ಶಿಬಿರವು ಸಹಕಾರಿಯಾಗಿದೆ. ಹೃದಯವಂತ ವ್ಯಕ್ತಿಗಳಿದ್ದಲ್ಲಿ ಮಕ್ಕಳ ಬೆಳವಣಿಗೆಗೆ ಮಾರ್ಗದರ್ಶನವಾಗಲಿದೆ, ಒಳ್ಳೆಯತನವಿದ್ದಲ್ಲಿ ವಿಶಾಲತೆ ಇರುತ್ತದೆ. ಪಟ್ಟಣದ ಮಗು ಜ್ಞಾನ ಮಾತ್ರ ಪಡೆದರೆ, ಗ್ರಾಮೀಣ ಮಕ್ಕಳಲ್ಲಿ ಪ್ರಕೃತಿದತ್ತ ಪಾಠ ದೊರಕಿದಲ್ಲಿ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದ ಅವರು, ದೇಶದ ಆಡಳಿತ ನಡೆಸಿದವರು ಗ್ರಾಮಗಳ ವ್ಯಕ್ತಿಗಳೇ ಆಗಿದ್ದಾರೆ ಎಂದರು.

ಕಸಾಪ ಸಂಘಟನಾ ಕಾರ್ಯದರ್ಶಿ ಸದಾನಂದ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಈ ವರ್ಷವೂ ಶಾಲಾ- ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮೂಲಕ ಮಕ್ಕಳಿಗೆ ಮಾದಕ ದ್ರವ್ಯ, ಧೂಮಪಾನ ಮತ್ತು ಮದ್ಯಪಾನದಿಂದ ಉಂಟಾಗುವ ಅನಾನುಕೂಲಗಳ ಬಗ್ಗೆ ಜಾಗೃತಿ ಉಪನ್ಯಾಸ ನೀಡಲಾಗುತ್ತದೆ ಎಂದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ಬಡತನದಲ್ಲಿ ಜೀವನ ನಡೆಸಿದ ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ, ಡಾ. ಅಂಬೇಡ್ಕರ್‌ರವರು ಯಶಸ್ಸು, ಸಾಧನೆ ಮಾಡಿ, ರಾಷ್ಟ್ರಕ್ಕೆ ಕೊಡುಗೆ ನೀಡಿದವರಾಗಿದ್ದಾರೆ ಎಂದರು.

ಎಎಸ್‌ಐ ಶ್ರೀನಿವಾಸ್ ಫೋಕ್ಸೋ ಕಾಯ್ದೆ, ಸಂಚಾರ ನಿಯಮಗಳು, ಮನೆಯಲ್ಲಿ ಪೋಷಕರ ವರ್ತನೆ ಬಗ್ಗೆ ತಿಳಿಸಿದರು.

ದೇವಾಲಯ ಟ್ರಸ್ಟ್ ಉಪಾಧ್ಯಕ್ಷ ಬಿ ಚಿದಾನಂದಪ್ಪ, ಕಸಾಪ ಸಂಘಟನಾ ಕಾರ್ಯದರ್ಶಿ ಪ್ರಕಾಶ್, ಮಲ್ಲಿಕಾರ್ಜುನ್ ಕಲಾಲ್, ಕಲಾಸಿರಿ ಮಕ್ಕಳ ಸಾಂಸ್ಕೃತಿಕ ವೇದಿಕೆ ಪಿ,ನಾಗರಾಜ್, ಡ್ಯಾನ್ಸರ್ ಈಸೂರು ಕಿರಣ್, ಬಿ.ಅರುಣ್‌ಕುಮಾರ್, ಪ್ರಭುಪ್ರಸಾದ್ ತೇಲ್ಕರ್, ಶಾgತರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೂಮೇಶ್, ಶಿಕ್ಷಕ ನಾಗೇಂದ್ರಪ್ಪ, ರೇಖಾ, ಕಪಿಲ್‌ದೇವ್,ಸಿರಿಗೆರೆ ಮgಜಪ್ಪ, ನೂರಾರು ಪೋಷಕರು, ಮಕ್ಕಳು ಹಾಜರಿದ್ದರು.

ಮಕ್ಕಳು ಬಿಡಿಸಿದ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮೂರು ಗಂಟೆಗಳ ಕಾಲ ಮಕ್ಕಳ ನೃತ್ಯಗಳು ಎಲ್ಲರ ಗಮನ ಸೆಳೆದವು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

- - - -೧೪ಎಂಬಿಆರ್೨: ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.